ಉಡುಪಿ ಪೊಲೀಸ್ ಸಿಬ್ಬಂದಿ ದಿಢೀರ್ ನಾಪತ್ತೆ
ಉಡುಪಿ, ಡಿಸೆಂಬರ್, 16: ಉಡುಪಿಯ ಪೊಲೀಸ್ ಸಿಬ್ಬಂದಿಯೋರ್ವರು ಮೂರ್ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದಿಢೀರ್ ಕಣ್ಮರೆಯಾದ ಪೊಲೀಸ್ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಉಡುಪಿ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ಪೊಲೀಸ್ ಕ್ವಾರ್ಟಸ್ ನಿವಾಸಿ ಶ್ರೀಧರ್ ಜಿ. (43) ಎಂಬುವವರು ಕಾಣೆಯಾದ ಪೊಲೀಸ್ ಸಿಬ್ಬಂದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಹುಡುಕಾಟದಲ್ಲಿ ತೊಡಗಿದ್ದಾರೆ.[ಜೈಲಿನ ಹೆಬ್ಬಾಗಿಲಿನಿಂದಲೇ ಖೈದಿ ಎಸ್ಕೇಪ್]

ಶ್ರೀಧರ್ ಅವರು ಪೊಲೀಸ್ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಡಿಸೆಂಬರ್ 10 ರಂದು ಮಧ್ಯಾಹ್ನ 3:45 ಗಂಟೆಯಲ್ಲಿ ಪತ್ನಿ ಜೊತೆಗೆ ಮನೆಯಲ್ಲಿದ್ದರು. ಬಳಿಕ ಪತ್ನಿ ಕೆಲಸ ಬಗ್ಗೆ ತೆರಳಿದ್ದು ಡಿಸೆಂಬರ್ ೧೧ರ ಶುಕ್ರವಾರ ಬೆಳಗ್ಗೆ 8:30 ಗಂಟೆಗೆ ಮನೆಗೆ ಬಂದಿದ್ದಾರೆ.[ಉಡುಪಿಯ 'ಸಿಂಗಂ' ಎಸ್ಪಿ ಅಣ್ಣಾಮಲೈ ವರ್ಗಾವಣೆ ಸುದ್ದಿ: ಸ್ಪಷ್ಟನೆ]
ಆಗ ಪತಿ ಶ್ರೀಧರ್ ಅವರು ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅವರು ಕರ್ತವ್ಯಕ್ಕೂ ತೆರಳಲಿಲ್ಲ ಎಂಬುದು ತಿಳಿದಿದೆ. ಶ್ರೀಧರ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ FORWARD ಮಾಡಲಾಗಿದೆ ಎಂದು ಬರುತ್ತಿದೆ.
ಶ್ರೀಧರ್ ಬಗ್ಗೆ ಅವರ ಸಹದ್ಯೋಗಿ, ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಿಸಿದರೂ ಸುಳಿವು ಲಭ್ಯವಾಗಿಲ್ಲ. ಇದರಿಂದ ಪತ್ನಿಯೂ ಆತಂಕಕ್ಕೆ ಒಳಗಾಗಿದ್ದು, ದಿಕ್ಕು ತೋಚದಂತಾಗಿದೆ.












Click it and Unblock the Notifications