Get Updates
Get notified of breaking news, exclusive insights, and must-see stories!

ಕೈಯಲ್ಲಿ ರಾಷ್ಟ್ರಧ್ವಜ ಹಿಡಿದೇ ಸಿಎಂ ಶೂ ಬಿಚ್ಚಿದ ಕಾರ್ಯಕರ್ತ! ವಿಡಿಯೋ ವೈರಲ್‌

ಇಂದು ಗಾಂಧಿ ಜಯಂತಿ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕೈಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡೇ ಸಿಎಂ ಸಿದ್ದರಾಮಯ್ಯ ಧರಸಿದ್ದ ಶೂಗಳನ್ನು ಬಿಚ್ಚಿರುವ ಘಟನೆ ನಡೆದಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬೆಂಗಳೂರಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುನ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಂಡು ಬರುವಂತೆ, ಕಾರ್ಯಕರ್ತನೊಬ್ಬ ಸಿಎಂ ಸಿದ್ದರಾಮಯ್ಯ ಧರಿಸಿದ್ದ ಶೂ ಬಿಚ್ಚಿದ್ದಾನೆ. ಈ ವೇಳೆ ಆತನ ಕೈಯಲ್ಲಿದ್ದ ತ್ರಿವರ್ಣ ಧ್ವಜವು ಶೂ ಹಾಗೂ ನೆಲಕ್ಕೆ ತಾಗಿದೆ.

A Congress Worker Held The National Flag And Untied The Shoe Worn By CM Siddaramaiah

ಈ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಕೂಡ ಹಂಚಿಕೊಂಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಸಿಎಂ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ವಿಡಿಯೋದಲ್ಲಿ ಕಾರ್ಯಕರ್ತನೊಬ್ಬ ಸಿಎಂ ಕಾಲಿನಲ್ಲಿದ್ದ ಶೂ ಬಿಚ್ಚಿದ್ದಾನೆ.

ಈ ವೇಳೆ ಭಾರತದ ಧ್ವಜ ಆತನ ಕೈಯಲ್ಲೇ ಇದೆ. ಸ್ಥಳದಲ್ಲೇ ಇದ್ದ ಮಾಧ್ಯಮದವರು ಅದನ್ನು ಸೆರೆಹಿಡಿಯಲು ಮುಂದಾದಾಗ ಕೂಡಲೇ ಆತನ ಕೈಯಲ್ಲಿದ್ದ ಧ್ವಜವನ್ನು ನಾಯಕರು ಕಸಿದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಬಿಜೆಪಿ ನಾಯಕರು ಕೂಡ ಈ ವಿಡಿಯೋ ಹಂಚಿಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬೀಳುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಈ ಘಟನೆಗೆ ಆಕ್ರೋಶ ಹೊರಹಾಕಿದ್ದಾರೆ.

ಗಾಂಧಿ ನಡಿಗೆಯಲ್ಲಿ ಸಮಾಜವಾದಿ ಹಿನ್ನೆಲೆಯ ಮುಖ್ಯ ಮಂತ್ರಿಗಳಿಗೆ 'ವಿಶೇಷ ಆತಿಥ್ಯ'. ರಾಷ್ಟ್ರ ಧ್ವಜವು ಮುಖ್ಯಮಂತ್ರಿಗಳ ಕಾಲಿಗೆ ಸ್ಪರ್ಶಿಸುತ್ತಿದ್ದು, ಇದು Flag Code of India ಹಾಗೂ National Honor Act ನ ಸ್ಪಷ್ಟ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ತಮ್ಮ ಬಟ್ಟೆಯನ್ನು ತಾವೇ ಹೊಲೆದುಕೊಳ್ಳುತ್ತಿದ್ದ ಮಹಾತ್ಮಾ ಗಾಂಧಿ ಅವರ ಜಯಂತಿಯಂದು ಈ ರೀತಿಯಾದ ಗುಲಾಮಗಿರಿಯ ಪ್ರದರ್ಶನ. ಶಾಸ್ತ್ರ ಹೇಳೋಕೆ, ಬದನೆ ತಿನ್ನೋಕೆ ಎಂದು ಲೇವಡಿ ಮಾಡಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಡಿಗ್ನಿಟಿ ಆಫ್ ಲೇಬರ್ ಪರಿಕಲ್ಪನೆಯನ್ನು ಬಲವಾಗಿ ನಂಬಿದ್ದರು ಮತ್ತು ಪ್ರತಿಪಾದಿಸಿದರು. ಅವರ 155ನೇ ಜನ್ಮದಿನದಂದು ಪಕ್ಷದ ಕಾರ್ಯಕರ್ತನಿಂದ ಸಿಎಂ ಸಿದ್ದರಾಮಯ್ಯ ಅವರ ಪಾದರಕ್ಷೆ ತೆಗೆಸಿದ್ದಾರೆ. ಕೆಟ್ಟ ಭಾಗವೆಂದರೆ ಪ್ಲಾಸ್ಟಿಕ್ ಧ್ವಜವು ಮುಖ್ಯಮಂತ್ರಿಯ ಪಾದಗಳನ್ನು ಮುಟ್ಟುತ್ತದೆ. ಇದು ಭಾರತದ ಧ್ವಜ ಸಂಹಿತೆ ಮತ್ತು ರಾಷ್ಟ್ರೀಯ ಗೌರವ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಇದೆಲ್ಲವೂ ಅಧಿಕೃತ ಕಾರ್ಯಕ್ರಮದ ಸಮಯದಲ್ಲೇ ನಡೆಯುತ್ತದೆ ಎಂದು ಕೆಂಡಕಾರಿದ್ದಾರೆ.

ಯುವಕರಲ್ಲಿ ಗಾಂಧೀಜಿಯವರ ತತ್ತ್ವಶಾಸ್ತ್ರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿಯಿಂದ ಗುಲಾಮಗಿರಿ ಮತ್ತು ಅಗೌರವದ ಸ್ಪಷ್ಟ ಪ್ರದರ್ಶನವಾಗಿದೆ ಎಂದು ಯತ್ನಾಳ್‌ ವ್ಯಂಗ್ಯವಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+