ಕರ್ನಾಟಕದಲ್ಲಿ 9579 ಕೊರೊನಾ ಸೋಂಕಿತರು ಪತ್ತೆ, 52 ಮಂದಿ ಸಾವು
ಬೆಂಗಳೂರು, ಏಪ್ರಿಲ್ 12: ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಕೊಂಚ ಕಡಿಮೆ ಇದೆ.
ರಾಜ್ಯದಲ್ಲಿ ಒಂದೇ ದಿನ 9579 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ 2767 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದುವರೆಗೆ 985924 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ, 75985 ಸಕ್ರಿಯ ಪ್ರಕರಣಗಳಿವೆ. 52 ಮಂದಿ ಮೃತಪಟ್ಟಿದ್ದು, ಇದುವರೆಗೆ 12941 ಮಂದಿ ಸಾವನ್ನಪ್ಪಿದ್ದಾರೆ, ಒಟ್ಟು 1074869 ಪ್ರಕರಣಗಳಿವೆ. 470 ಮಂದಿ ಐಸಿಯುನಲ್ಲಿದ್ದಾರೆ.

ಬಾಗಲಕೋಟೆ 55, ಬಳ್ಳಾರಿ 132, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 192, ಬೆಂಗಳೂರು ನಗರ 6387, ಬೀದರ್ 465, ಚಾಮರಾಜನಗರ 39, ಚಿಕ್ಕಬಳ್ಳಾಪುರ 120, ಚಿಕ್ಕಮಗಳೂರು 57, ಚಿತ್ರದುರ್ಗ 22, ದಕ್ಷಿಣ ಕನ್ನಡ 73, ದಾವಣಗೆರೆ 40, ಧಾರವಾಡ 91, ಗದಗ 29, ಹಾಸನ 113, ಹಾವೇರಿ 36, ಕಲಬುರಗಿ 335, ಕೊಡಗು 24, ಕೋಲಾರ 96, ಕೊಪ್ಪಳ 31, ಮಂಡ್ಯ 86, ಮೈಸೂರು 362, ರಾಯಚೂರು70, ರಾಮನಗರ 64, ಶಿವಮೊಗ್ಗ 43, ತುಮಕೂರು 239, ಉಡುಪಿ 101, ಉತ್ತರ ಕನ್ನಡ 64, ವಿಜಯಪುರ 122, ಯಾದಗಿರಿಯಲ್ಲಿ 52 ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ 10250 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.












Click it and Unblock the Notifications