• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 9265 ಮಂದಿಗೆ ಕೊವಿಡ್-19 ಪಾಸಿಟಿವ್

|

ಬೆಂಗಳೂರು, ಅಕ್ಟೋಬರ್.14: ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 735371ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 9265 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 75 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10198ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊವಿಡ್ 19 ಸೋಂಕು: ಭಾರತದಲ್ಲಿ 72 ಲಕ್ಷ ಸೋಂಕು, 63 ಲಕ್ಷ ಚೇತರಿಕೆ

ಕೊರೊನಾವೈರಸ್ ಒಟ್ಟು 735371 ಸೋಂಕಿತ ಪ್ರಕರಣಗಳ ಪೈಕಿ 611167 ಸೋಂಕಿತರು ಗುಣಮುಖರಾಗಿದ್ದಾರೆ. 113987 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 8662 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಎಷ್ಟು ಮಂದಿಗೆ ಕೊರೊನಾವೈರಸ್ ಪರೀಕ್ಷೆ?:

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 39111 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 74660 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 113771 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 62,50,992 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:

      Kusuma ಗೆ ದೊಡ್ಡ Shock | Oneindia Kannada

      ರಾಜ್ಯದಲ್ಲಿ ಒಟ್ಟು 9265 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 158, ಬಳ್ಳಾರಿ 275, ಬೆಳಗಾವಿ 297, ಬೆಂಗಳೂರು ಗ್ರಾಮಾಂತರ 344, ಬೆಂಗಳೂರು 4574, ಬೀದರ್ 19, ಚಾಮರಾಜನಗರ 97, ಚಿಕ್ಕಬಳ್ಳಾಪುರ 137, ಚಿಕ್ಕಮಗಳೂರು 97, ಚಿತ್ರದುರ್ಗ 162, ದಕ್ಷಿಣ ಕನ್ನಡ 292, ದಾವಣಗೆರೆ 82, ಧಾರವಾಡ 136, ಗದಗ 41, ಹಾಸನ 227, ಹಾವೇರಿ 66, ಕಲಬುರಗಿ 39, ಕೊಡಗು 160, ಕೋಲಾರ 93, ಕೊಪ್ಪಳ 60, ಮಂಡ್ಯ 212, ಮೈಸೂರು 614, ರಾಯಚೂರು 44, ರಾಮನಗರ 42, ಶಿವಮೊಗ್ಗ 83, ತುಮಕೂರು 341, ಉಡುಪಿ 119, ಉತ್ತರ ಕನ್ನಡ 192, ವಿಜಯಪುರ 128, ಯಾದಗಿರಿ 27 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

      English summary
      9265 New Coronavirus Cases Reported in Karnataka Today, State Tally Rise to 735371.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X