ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 9 ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಪ್ಲಾಂಟ್‌ಗಳೇ ಇಲ್ಲ!

|
Google Oneindia Kannada News

ಬೆಂಗಳೂರು, ಮೇ 04; ಆಕ್ಸಿಜನ್ ಕೊರತೆ ಕಾರಣದಿಂದಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳು ಆಕ್ಸಿಜನ್‌ಗಾಗಿ ಅಕ್ಕ-ಪಕ್ಕದ ಜಿಲ್ಲೆಗಳ ಮೇಲೆ ಅವಲಂಬಿತವಾಗಿವೆ.

ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಯಾದಗಿರಿ, ಬೀದರ್, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಕ್ಸಿಜನ್ ಉತ್ಪಾದನೆ ಪ್ಲಾಂಟ್‌ಗಳಿಲ್ಲ. ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಆಗುತ್ತಿದೆ.

ಅಮೆರಿಕದಿಂದ ಭಾರತಕ್ಕೆ ಬಂದ 545 ಆಕ್ಸಿಜನ್ ಕಾನ್ಸಂಟ್ರೇಟರ್ಅಮೆರಿಕದಿಂದ ಭಾರತಕ್ಕೆ ಬಂದ 545 ಆಕ್ಸಿಜನ್ ಕಾನ್ಸಂಟ್ರೇಟರ್

ಕೋವಿಡ್ 2ನೇ ಅಲೆ ಪರಿಣಾಮ ಆಕ್ಸಿಜನ್ ಬೆಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಕ್ಸಿಜನ್ ಪೂರೈಕೆ ಮಾಡುವ ಲಾರಿಗಳು ತಡವಾಗಿ ಆಗಮಿಸಿದರೆ ಜಿಲ್ಲೆಗಳಲ್ಲಿ ಇರುವ ಆಸ್ಪತ್ರೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.

ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!

 9 Districts Has No Dedicated Oxygen Plant

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ 6,200 ಲೀಟರ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿದೆ. ದಾವಣಗೆರೆಯ ಗ್ಯಾಸ್ ಏಜೆನ್ಸಿ ಮೂಲಕ ದಿನ ಬಿಟ್ಟು ದಿನ ಜಿಲ್ಲೆಗೆ ಆಕ್ಸಿಜನ್ ಆಗಮಿಸುತ್ತದೆ. ಯಾದಗಿರಿ ಜಿಲ್ಲೆಗೆ 2,500 ಲೀಟರ್ ಆಕ್ಸಿಜನ್ ಚೆನ್ನೈನಿಂದ ಬರುತ್ತದೆ. ಖಾಸಗಿ ಆಸ್ಪತ್ರೆಗಳು ಕಲಬುರಗಿ ಜಿಲ್ಲೆಯಿಂದ ಆಕ್ಸಿಜನ್ ಪಡೆಯುತ್ತಿವೆ.

ಕರ್ನಾಟಕದಲ್ಲಿ ಕೊವಿಡ್-19 ರೋಗಿಗಳಿಗೆ ಆಕ್ಸಿಜನ್ ಒದಗಿಸಲು ಕ್ರಮ ಕರ್ನಾಟಕದಲ್ಲಿ ಕೊವಿಡ್-19 ರೋಗಿಗಳಿಗೆ ಆಕ್ಸಿಜನ್ ಒದಗಿಸಲು ಕ್ರಮ

ಮಂಡ್ಯ ಜಿಲ್ಲೆ ಆಕ್ಸಿಜನ್‌ಗಾಗಿ ಮೈಸೂರಿನ ಮೇಲೆ ಅವಲಂಬಿತವಾಗಿದೆ. ಮಂದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ 13 ಕಿಲೋಲೀಟರ್, ಆದಿಚುಂಚನಗಿರಿ ಆಸ್ಪತ್ರೆ ಸಹ 13 ಕಿಲೋಲೀಟರ್ ಸಾಮರ್ಥ್ಯದ ಘಟಕಗಳನ್ನು ಹೊಂದಿವೆ.

Recommended Video

ಮಂಡ್ಯದ ಜನ ಆಕ್ಸಿಜನ್ ನಿಂದ ಸಾಯಬಾರದು ಎಂದು ಧೃಡ ನಿರ್ಧಾರ ಮಾಡಿದ ಸುಮಲತಾ | Oneindia Kannada

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ರಾಜ್ಯಕ್ಕೆ 802 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿತ್ತು. ಆದರೆ ಈಗ 865 ಟನ್ ಅಗತ್ಯವಿದೆ. ರಾಜ್ಯದಲ್ಲಿ 815 ಟನ್ ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವಿದೆ. ಉಳಿದ ಆಕ್ಸಿಜನ್‌ಗಾಗಿ ಹೊರ ರಾಜ್ಯದ ಮೇಲೆ ಅವಲಂಬಿತರಾಗಬೇಕು.

English summary
9 districts of Karnataka depend on neighbouring districts for oxygen in the absence of a dedicated plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X