ರಾಜ್ಯದಲ್ಲಿ ಇಂದು 8,477 ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಅಕ್ಟೋಬರ್ 15: ರಾಜ್ಯದಲ್ಲಿ ಇಂದು 8,477 ಕೋವಿಡ್ ಪ್ರಕರಣಗಳು ವರದಿಯಾಗಿವೆ. 8881 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 85 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ 1,13,538 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದುವರೆಗೂ 6,20,008 ಮಂದಿ ಬಿಡುಗಡೆಯಾಗಿದ್ದು, ಒಟ್ಟು 10,283 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 7,43,848ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ 8.09ರಷ್ಟಿದ್ದರೆ, ಸಾವಿನ ಪ್ರಮಾಣ ಶೇ 1ರಷ್ಟಿದೆ..
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಮುಂದುವರಿದಿದೆ. 3,788 ಮಂದಿಗೆ ಬೆಂಗಳೂರಿನಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. 45 ಮಂದಿ ನಗರದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,97,193ಕ್ಕೆ ತಲುಪಿದೆ. ನಂತರದ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರು ಗ್ರಾಮಾಂತರದಲ್ಲಿ ವರದಿಯಾಗಿದ್ದು, 454 ಪ್ರಕರಣಗಳು ದಾಖಲಾಗಿವೆ.

ಬಾಗಲಕೋಟೆ 133, ಬಳ್ಳಾರಿ 282, ಬೆಳಗಾವಿ 303, ಬೀದರ್ 10, ಚಾಮರಾಜನಗರ 85, ಚಿಕ್ಕಬಳ್ಳಾಪುರ 230, ಚಿಕ್ಕಮಗಳೂರು 92, ಚಿತ್ರದುರ್ಗ 159, ದಕ್ಷಿಣ ಕನ್ನಡ 301, ದಾವಣಗೆರೆ 164, ಧಾರವಾಡ 164, ಗದಗ 40, ಹಾಸನ 440, ಹಾವೇರಿ 41, ಕಲಬುರಗಿ 42, ಕೊಡಗು 158, ಕೋಲಾರ 81, ಕೊಪ್ಪಳ 76 ಮಂದಿಗೆ ಸೋಂಕು ತಗುಲಿದೆ.
ಮಂಡ್ಯ 230, ಮೈಸೂರು 303, ರಾಯಚೂರು 59, ರಾಮನಗರ 79, ಶಿವಮೊಗ್ಗ 169, ತುಮಕೂರು 252, ಉಡುಪಿ 179, ಉತ್ತರ ಕನ್ನಡ 57, ವಿಜಯಪುರ 160, ಯಾದಗಿರಿ 7 ಪ್ರಕರಣಗಳು ವರದಿಯಾಗಿವೆ.












Click it and Unblock the Notifications