DA Hike: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ!
ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಪದೇ ಪದೇ ಬೇಡಿಕೆ ಇಟ್ಟು, ಸರ್ಕಾರಗಳನ್ನ ಒಪ್ಪಿಸಲು ಪರದಾಡುತ್ತಿದ್ದಾರೆ. ಅದರಲ್ಲೂ ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರು, ತಮ್ಮ ಬೇಡಿಕೆ ಈಡೇರಿಕೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದರೂ ಸರ್ಕಾರಗಳ ಮುಖ್ಯಸ್ಥರು ಸುಲಭವಾಗಿ ನೌಕರರ ಬೇಡಿಕೆ ಈಡೇರಿಸುತ್ತಿಲ್ಲ ಎಂಬ ಆರೋಪ ಇದೆ. ಹೀಗೆ ಆರೋಪಗಳ ನಡುವೆ ಇದೀಗ 7ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರಿ ನೌಕರರಿಗೆ, ಭರ್ಜರಿ ಸಿಹಿಸುದ್ದಿ ಸಿಕ್ಕಿದೆ!
ಹೌದು ಆಧುನಿಕ ಕಾಲಘಟ್ಟದಲ್ಲಿ ಎಲ್ಲಾ ಬೆಲೆ ಏರಿಕೆ ಆಗಿದೆ. ಹಾಗೇ ತಮ್ಮ ಸಂಬಳದಲ್ಲಿ ಅಂದ್ರೆ ವೇತನ ಏರಿಕೆ ಕೂಡ ಆಗಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆ. ಆದರೆ ಈ ಮಾತಿಗೆ ಸರ್ಕಾರ ಒಪ್ಪುತ್ತಿಲ್ಲ ಎಂದು ನೌಕರರು ಕೂಡ ಗರಂ ಆಗಿ ಪ್ರತಿಭಟನೆ ಕೂಡ ಮಾಡಿ ಆಡಳಿತಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಹೀಗಿದ್ದರೂ ಅವರ ಬೇಡಿಕೆಗಳು ಈಡೇರಿಲ್ಲ. ಆದರೂ ಈಗ ಸಿಹಿಸುದ್ದಿ ಸಿಕ್ಕಿದೆ. ಸರ್ಕಾರಿ ನೌಕರರ ವೇತನ ಏರಿಕೆ ವಿಚಾರದಲ್ಲಿ ಭರ್ಜರಿ ಸುದ್ದಿಯು ಹೊರಬಿದ್ದಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋದಕ್ಕೆ ಈಗ ಮುಂದೆ ಓದಿ.

ವೇತನ ಆಯೋಗದ ಭರ್ಜರಿ ನ್ಯೂಸ್!
ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಲಿದ್ದು, ಇದಕ್ಕಾಗಿ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ನ್ಯೂಸ್ ಸಿಕ್ಕಿದೆ. ಈ ಮೂಲಕ ಹಲವು ಸೌಲಭ್ಯ ಪಡೆಯೋಕೆ ನೌಕರರಿಗೆ ಇದೀಗ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗಾಗಿ ಹೋಳಿ ಹಬ್ಬಕ್ಕೂ ಮೊದಲು ಸರ್ಕಾರ ಸಿಹಿ ಸುದ್ದಿ ನೀಡಲಿದೆ. ನೌಕರರ ಬಹು ನಿರೀಕ್ಷೆಯ ತುಟ್ಟಿಭತ್ಯೆ (DA Hike) ಯ ಬೇಡಿಕೆ ಈ ಮೂಲಕ ಈಡೇರಲಿದೆ. ಇದರ ಜೊತೆಗೆ ಮತ್ತಷ್ಟು ಸೌಲಭ್ಯ ಕೂಡ ಸರ್ಕಾರಿ ನೌಕರರಿಗೆ ಸಿಗಲಿದೆ. ಹಾಗಾದರೆ ಏನದು ಹಲವು ಸೌಲಭ್ಯಗಳು? ಮುಂದೆ ಓದಿ.
ಮನೆ ಬಾಡಿಗೆ, ಪ್ರಯಾಣ ಭತ್ಯೆ ಏರಿಕೆ?
ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ನೌಕರರ ಪ್ರಯಾಣ ಭತ್ಯೆ & ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಏರಿಕೆಗೂ ಅನುಮೋದನೆ ನೀಡುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಈ ಮೂಲಕ ನೌಕರರ ತುಟ್ಟಿಭತ್ಯೆ ಶೇ. 50ಕ್ಕೆ ತಲುಪುವ ನಿರೀಕ್ಷೆ ಇದೀಗ ದಟ್ಟವಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಬಾರಿ, ಅಂದರೆ 6 ತಿಂಗಳಿಗೆ ಒಂದು ಬಾರಿಯಂತೆ ಜನವರಿ & ಜುಲೈಗೆ ತುಟ್ಟಿಭತ್ಯೆ (Dearness Allowance) ಏರಿಕೆ ಮಾಡುತ್ತದೆ. ಅದರಂತೆ ಈ ಬಾರಿ ಕೂಡ, ತುಟ್ಟಿಭತ್ಯೆ ಏರಿಕೆ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಮಾರ್ಚ್ ಅಂದ್ರೆ ಇದೇ ತಿಂಗಳು ಡಿಎ ಏರಿಕೆ ನಿರೀಕ್ಷೆ ಇದ್ದು, ಜನವರಿಯಿಂದಲೇ ಅನ್ವಯ ಆಗಲಿದೆ ಅಂತಾ ಹೇಳಲಾಗ್ತಿದೆ.

ಡಿಎ ಶೇಕಡಾ 50 ರಷ್ಟು ಏರಿಕೆ?
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಈ ತಿಂಗಳು ಶೇಕಡಾ 4 ರಷ್ಟು ಹೆಚ್ಚಳವಾಗಲಿದೆ ಅಂತಾ ಹೇಳಲಾಗುತ್ತಿದೆ. ಈ ಮೂಲಕ ತುಟ್ಟಿಭತ್ಯೆ ಒಟ್ಟು ಶೇಕಡಾ 50 ರಷ್ಟು ಏರಿಕೆ ಆಗಲಿದೆ. ಸದ್ಯಕ್ಕೆ ಡಿಎ ಶೇಕಡಾ 46 ರಷ್ಟಿದೆ. ಈ ಹೆಚ್ಚಳದ ಮೂಲಕ, ನೌಕರರು ಹೆಚ್ಚಿನ ಮೂಲ ವೇತನವನ್ನು ಸರ್ಕಾರದ ಆದೇಶದ ಬಳಿಕ ಪಡೆಯಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೆ ಭರ್ಜರಿ ಸುದ್ದಿ ಸಿಗಬಹುದು ಎನ್ನಲಾಗಿದೆ.
ತುಟ್ಟಿಭತ್ಯೆ ನಂತರ ಪ್ರಯಾಣ ಭತ್ಯೆ (ಟಿಎ) ಯು ವೇತನ ಬ್ಯಾಂಡ್‌ನೊಂದಿಗೆ, ಸಂಯೋಜಿಸುವ ಮೂಲಕ ಟಿಎ ಮತ್ತಷ್ಟು ಹೆಚ್ಚಾಗಬಹುದು. ಹೀಗಿದ್ದಾಗ ಕರ್ನಾಟಕದ ಸರ್ಕಾರಿ ನೌಕರರಿಗೂ ಸಿಹಿಸುದ್ದಿ ಸಿಗಬಹುದಾ? ಎಂಬ ಪ್ರಶ್ನೆಯು ಈಗ ಮೂಡಿದೆ. ಈ ಪ್ರಶ್ನೆಗೆ ಉತ್ತರ ಪಡೆಯೋಕೆ ಕಾದು ನೋಡಬೇಕಿದೆ. ಹಾಗೇ ಸರ್ಕಾರಿ ನೌಕರರು ಕೂಡ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದಾರೆ ಅದರಲ್ಲೂ ಚುನಾವಣೆ ಹತ್ತಿರ ಬಂದಂತೆ ಕುತೂಹಲ ಹೆಚ್ಚಾಗುತ್ತಿದೆ.
8 ದಿನಕ್ಕೆ ಅವಧಿ ಮುಕ್ತಾಯ!
ಅಂದಹಾಗೆ 7ನೇ ರಾಜ್ಯ ವೇತನ ಆಯೋಗ ಅವಧಿಯು 2023ರ ನವೆಂಬರ್ ತಿಂಗಳಲ್ಲಿಯೇ ಕೊನೆ ಆಗಬೇಕಿತ್ತು. ಕೆ. ಸುಧಾಕರ್ ನೇತೃತ್ವದ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗದ ಅವಧಿನ ಅಂದಿನ ಸರ್ಕಾರ ಮುಂದೂಡಿಕೆ ಮಾಡಿತ್ತು. ಹೀಗೆ ವೇತನ ಆಯೋಗದ ಅವಧಿ ಮುಂದೂಡಿಕೆ ಆದ ಬಳಿಕ 7ನೇ ವೇತನ ಆಯೋಗ ಅವಧಿಯನ್ನ 15/3/2024 ತನಕ ವಿಸ್ತರಣೆ ಮಾಡಲಾಗಿತ್ತು. ಈಗ ಇನ್ನೇನು ಕೆಲವೇ ದಿನದಲ್ಲಿ ವೇತನ ಆಯೋಗದ ಅವಧಿ ಮುಗಿಯಲಿದ್ದು ವರದಿ ಸಲ್ಲಿಸುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಮೊದಲೇ ಸರ್ಕಾರಿ ನೌಕರರ ಅಸಮಾಧಾನವೂ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.
10 ವರ್ಷಗಳ ಆಡಳಿತದಲ್ಲಿ...
ಬಿಜೆಪಿ 2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಅಲ್ಲಿಂದ ಈವರೆಗೆ ಒಟ್ಟಾರೆ 10 ವರ್ಷಗಳ ಆಡಳಿತದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಅದರಲ್ಲೂ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಬಿಜೆಪಿ ಭರ್ಜರಿ ಗೆಲುವುನ್ನು ದಾಖಲಿಸುತ್ತದೆ ಎನ್ನಲಾಗುತ್ತಿದೆ. ಈ ಮಧ್ಯೆ ಮತ್ತೊಂದು ಸಂಗತಿ ಕೂಡ ಗೊತ್ತಾಗುತ್ತಿದೆ, ಅದು ಏನೆಂದರೆ ಕರ್ನಾಟಕದಲ್ಲಿ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ದಿಗ್ವಿಜಯ ಸಿಗುವುದು ಗ್ಯಾರಂಟಿ ಅಂತಾ ಹೇಳಲಾಗುತ್ತಿದೆ. ಇದೀಗ ಸಮೀಕ್ಷೆಗಳು ಕೂಡ ಅದನ್ನೇ ಹೇಳುತ್ತಿವೆ. ಆದರೆ ವಿರೋಧ ಪಕ್ಷಗಳು ಇದನ್ನು ಒಪ್ಪುತ್ತಿಲ್ಲ. ಈ ಮೂಲಕ ಚುನಾವಣೆಯ ಅಖಾಡ ರಂಗೇರಿದ್ದು, ಯಾರಿಗೆ ಅಧಿಕಾರ ಕೊಡಬೇಕು ಎಂಬುದನ್ನು ಜನರೇ ನಿರ್ಧಾರ ಮಾಡಲಿದ್ದಾರೆ.












Click it and Unblock the Notifications