7th pay commission; ಮೂಲ ವೇತನ, ಭತ್ಯೆ ಪರಿಷ್ಕರಣೆಯ ಬೇಡಿಕೆ
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಕನಿಷ್ಠ ಮೂಲ ವೇತನ, ವಿವಿಧ ವೃಂದಗಳ ಭತ್ಯೆಗಳನ್ನು ಎಷ್ಟು ಹೆಚ್ಚಿಸಬೇಕು? ಎಂದು ವಿವರಣೆಗಳನ್ನು ನೀಡಲಾಗಿದೆ.
ಹಿಂದಿನ ವೇತನ ಆಯೋಗದ ವರದಿಯ ನಂತರ ಈ ಬಗ್ಗೆ 5 ವರ್ಷಗಳಲ್ಲಿ ಸರ್ಕಾರದ ಯೋಜನೆಗಳು ಅಧಿಕಗೊಂಡಿದ್ದು, ಸಚಿವಾಲಯದಲ್ಲಿನ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ ಕಾರ್ಯದ ಒತ್ತಡ ಅಧಿಕವಾಗಿದೆ ಎಂದು ಹೇಳಿದೆ. ಸಚಿವಾಲಯದಲ್ಲಿನ ಕಾರ್ಯಕ್ಷಮತೆ ಹೆಚ್ಚಿಸುವ ದೃಷ್ಟಿಯಿಂದ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಹಂತದ ಹುದ್ದೆಗಳನ್ನು ಸೃಜನೆ ಮಾಡಿ ಸದರಿ ಹುದ್ದೆಗಳನ್ನು ನೇರ ನೇಮಕಾತಿ ಮತ್ತು ಬಡ್ತಿಯ ಮೂಲಕ ಭರ್ತಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಯಾವುದೇ ಕಾರಣಕ್ಕೂ ಕನಿಷ್ಠ ಮತ್ತು ಗರಿಷ್ಠ ವೇತನ ಪ್ರಮಾಣವು 1:10 ಮೀರತಕ್ಕದ್ದಲ್ಲದ ರೀತಿಯಲ್ಲಿ ವೇತನ ಶ್ರೇಣಿಗಳನ್ನು ರೂಪಿಸಬೇಕು ಎಂದು ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ ಮನವಿಯನ್ನು ಸಲ್ಲಿಕೆ ಮಾಡಿದೆ.
ಭತ್ಯೆ, ಕನಿಷ್ಠ ವೇತನದ ಬೇಡಿಕೆಗಳು
ವರದಿಯಲ್ಲಿ (PS) (ಗ್ರೇಡ್-1) ಜಂಟಿ ಕಾರ್ಯದರ್ಶಿ(JS), ಅಪರ ಕಾರ್ಯದರ್ಶಿ (AS) ಹಾಗೂ ವಿಶೇಷ ಕಾರ್ಯದರ್ಶಿ (SS) ಈ ವೃಂದದ ಹುದ್ದೆಗಳು ಕರ್ನಾಟಕ ಅಡಳಿತ ಸೇವೆಯ ಹಿರಿಯ ಗ್ರೂಪ್ -ಎ ವೃಂದದ ಮೇಲ್ಪಟ್ಟ ಹುದ್ದೆಗಳಾಗಿದ್ದು, (ಹಿರಿಯ ಶ್ರೇಣಿ, ಆಯ್ಕೆ ಶ್ರೇಣಿ ಮತ್ತು ಸೂಪರ್ ಟೈಂ ಸೈಲ್, ಸಿನೀಯರ್ ಸೂಪರ್ ಟೈಂ ಸ್ಕಲ್) ವೇತನ ಶ್ರೇಣಿಗಳಿಗೆ ಹೊಲಿಸಿದಲ್ಲಿ ತತ್ಸಮಾನ ವೇತನ ಶ್ರೇಣಿಯ ಹುದ್ದೆಗಳಾಗಿದ್ದು, ಸಚಿವಾಲಯದ ಉನ್ನತ ಅಧಿಕಾರಿಗಳ ವೃಂದಗಳಾಗಿರುತ್ತವೆ. ತತ್ಸಂಬಂಧ, ಸದರಿ ಅಧಿಕಾರಿಗಳನ್ನು ಗೊತ್ತುಪಡಿಸಲಾದ ವಾಹನ ಸೌಲಭ್ಯ ಹಾಗೂ ಕೊಠಡಿಯನ್ನು ನಿಗಧಿಪಡಿಸುವಂತೆ (Designated Vehicle and Chamber) ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಲಾಗಿದೆ.
ಸಚಿವಾಲಯದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಅಧಿವೇಶನ ಭತ್ಯೆಯನ್ನು ರೂ. 500 ರಿಂದ ರೂ.1,000 ಹೆಚ್ಚಿಸುವುದು. ಸಚಿವಾಲಯ ಸಮಸ್ತ ನೌಕರರ ವೇತನ ಹಾಗೂ ವಿಶೇಷ ಭತ್ಯೆಗೆ ವಾರ್ಷಿಕವಾಗಿ ತಗಲುವ ವೆಚ್ಚದ ಪಟ್ಟಿಯನ್ನು ಸಹ ವರದಿಯೊಂದಿಗೆ ಲಗತ್ತಿಸಲಾಗಿದೆ.
ಕೇಂದ್ರ ಸರ್ಕಾರದ ಮಾದರಿಯಲ್ಲಿ ವಾರದಲ್ಲಿ 5 ಕೆಲಸದ ದಿನಗಳ ಪದ್ಧತಿಯನ್ನು ಜಾರಿಗೊಳಿಸುವುದು (5 days week). ಕನಿಷ್ಟ ಮೂಲ ವೇತನವನ್ನು ರೂ. 17,000 ದಿಂದ ರೂ. 35.000 ಗಳಿಗೆ ನಿಗದಿಪಡಿಸುವುದು (Minimum Pay). ಹೊಸ ವೇತನ ಶ್ರೇಣಿಗಳನ್ನು ನಿಗದಿಪಡಿಸುವಲ್ಲಿ Bunching System ಅನ್ನು ಕೈಬಿಟ್ಟು ಸೇವಾ ಹಿರಿತನಕ್ಕೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ/ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸುವುದು. ಈಗಿನ ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ಇದಕ್ಕೆ ಶೇಕಡ 40% ಹೆಚ್ಚಳ (ಫಿಟ್ ಮೆಂಟ್) ನೀಡಿ ಮೂಲ ವೇತನವನ್ನು ಪರಿಷ್ಕರಿಸಿ ನಿಗದಿಪಡಿಸುವುದು. ಯಾವುದೇ ಕಾರಣಕ್ಕೂ ಈಗಿನ ಮನೆಬಾಡಿಗೆ ಭತ್ಯೆ ಶೇಕಡಾವಾರು ನೂತನ ವೇತನ ಶ್ರೇಣಿ ಜಾರಿಗೊಳಿಸಿದ ನಂತರವೂ (ಹೆಚ್.ಆರ್.ಎ) ವ್ಯತ್ಯಾಸಗೊಳಿಸಬಾರದು. 7ನೇ ವೇತನ ಆಯೋಗದ ವರದಿಯ ಪರಿಷ್ಕೃತ ವೇತನವು ದಿನಾಂಕ 01/07/2022 ರಿಂದ ಪೂರ್ವಾನ್ವಯವಾಗಿ ಜಾರಿಗೊಳಿಸುವುದು ಹಾಗೂ ಸದರಿ ದಿನಾಂಕದಿಂದ ಆರಿಯರ್ಸ್ ನೀಡುವುದು.
ಪ್ರಸ್ತುತ 7ನೇ ವೇತನ ಆಯೋಗದ ಮಾನ್ಯ ಅಧ್ಯಕ್ಷರಾಗಿರುವ ಸುಧಾಕರ್ ರಾವ್ ಈ ಹಿಂದೆ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ಸಚಿವಾಲಯದ ಕಾರ್ಯದಕ್ಷತೆಯನ್ನು ಅರಿತು ಮಾನ್ಯ ಮುಖ್ಯಮಂತ್ರಿಗಳ ಹಾಗೂ ಸಚಿವರುಗಳ ಆಪ್ತ ಶಾಖೆಯಲ್ಲಿ ಸಚಿವಾಲಯ ಅಧಿಕಾರಿ ನೌಕರರನ್ನು ಕನಿಷ್ಠ 50 ನಿಯೋಜಿಸಬೇಕೆಂದು ಸುತ್ತೋಲೆಯನ್ನು ಹೊರಡಿಸಿದ್ದಾಗ್ಯೂ ಸಹ ಇದುವೆರೆಗೂ ಅದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರದೆ ಇರುವುದು ವಿಪರ್ಯಾಸ. ಆದ್ದುದರಿಂದ ಸದರಿ ಸುತ್ತೋಲೆಯನ್ನು ಅನುಷ್ಠಾನಗೊಳಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದು ಹೇಳಿದೆ.
ಸಂಘವು ಪ್ರಸ್ತುತ ಆಗ್ರಹಿಸುತ್ತಿರುವ ಎಲ್ಲಾ ಬೇಡಿಕೆಗಳೊಂದಿಗೆ ಸಚಿವಾಲಯ ಸೇವೆಯು ಕ್ಷೇತ್ರಿಯ ಇಲಾಖೆಗಳಿಗಿಂತ ವಿಭಿನ್ನವಾಗಿದೆ ಎಂಬುದನ್ನು ವೇತನ ಆಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸುವಂತಾಗಬೇಕು. ಸಚಿವಾಲಯ ಸೇವೆಯು ರಾಜ್ಯ ಸರ್ಕಾರದ ಸೇವೆಗಳಲ್ಲಿಯೇ ಅತ್ಯಂತ ಜವಾಬ್ದಾರಿಯುತ ಹಾಗೂ ಮಹತ್ವಪೂರ್ಣವಾದ ಸೇವೆಯಾಗಿರುವುದರಿಂದ ಸಚಿವಾಲಯ ಸೇವೆಯ ಎಲ್ಲಾ ವೃಂದಗಳಿಗೂ ಪ್ರತ್ಯೇಕ ವೇತನ ಶ್ರೇಣಿಗಳು ನಿಗದಿಯಾಗಬೇಕು. ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ಶೇ. 5 ಎಂದು ನಿಗದಿಗೊಳಿಸಬೇಕು ಎಂದು ಮನವಿ ಮಾಡಿದೆ.
ಸಚಿವಾಲಯದ ಸಮಸ್ತ ಅಧಿಕಾರಿ/ ನೌಕರಿಗೆ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಸರ್ಕಾರಿ ನೌಕರರ ಹಾಗೂ ಅವರ ಅವಲಂಬಿತ ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷ ಭಿಮಾ ಯೋಜನೆಯ ಕಡ್ಡಾಯಗೊಳಿಸಬೇಕು. ಮುಂದುವರೆದು ಸದರಿ ಯೋಜನೆಯ ವಾರ್ಷಿಕ ವಂತಿಕೆಯನ್ನು ಸರ್ಕಾರವೇ ಬರಿಸುವಂತೆ ಶಿಫಾರಸ್ಸು ಮಾಡಲು ಕೋರಲಾಗಿದೆ.
-
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications