7th Pay Commission: ಸರ್ಕಾರಿ ನೌಕರರ ದಿನ, ಹೊರರಾಜ್ಯದ ತಂಗುವಿಕೆ ಭತ್ಯೆ ಹೆಚ್ಚಳದ ಶಿಫಾರಸು

ಬೆಂಗಳೂರು, ಸೆಪ್ಟೆಂಬರ್ 07: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಿ ನೌಕರರ ವಿವಿಧ ಭತ್ಯೆಗಳ ಏರಿಕೆಗೆ ಶಿಫಾರಸು ಮಾಡಿದೆ. ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ನಗರ, ಹೊರರಾಜ್ಯಗಳ ತಂಗುವಿಕೆ ಭತ್ಯೆಗಳ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ವರ್ಗೀಕರಣದ ಮೂಲಕ ನೀಡಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಜೊತೆಗೆ ಆಯೋಗ ದಿನಭತ್ಯೆ, ರಾಜ್ಯದೊಳಗಿನ ತಂಗುವಿಕೆಯ ಭತ್ಯೆ, ರಾಜ್ಯದ ಹೊರಗಡೆಯ ಭತ್ಯೆಯ ಏರಿಕೆ ಕುರಿತು ಶಿಫಾರಸು ಸಲ್ಲಿಸಿದೆ.

7ನೇ ರಾಜ್ಯ ವೇತನ ಆಯೋಗ ತನ್ನ ಶಿಫಾರಸಿನಲ್ಲಿ ಸರ್ಕಾರಿ ನೌಕರರ ದಿನ ಭತ್ಯೆ ಬಗ್ಗೆಯೂ ವಿವರಗಳನ್ನು ನೀಡಿದೆ. ಸರ್ಕಾರಿ ನೌಕರರು ಅಧಿಕೃತ ಕರ್ತವ್ಯದ ಮೇರೆಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಆಡಳಿತಾತ್ಮಕ ಕಾರಣಗಳಿಗಾಗಿ ವರ್ಗಾವಣೆಯಾಗುವ ಸರ್ಕಾರಿ ನೌಕರರಿಗೆ ಊಟ ಮತ್ತು ವಸತಿ ವೆಚ್ಚಗಳನ್ನು ಭರಿಸಲು ದಿನ ಭತ್ಯೆಯನ್ನು ನೀಡಲಾಗುತ್ತದೆ. ಆದರೆ, ವೈಯಕ್ತಿಕ ಕೋರಿಕೆ ಮೇರೆಗೆ ವರ್ಗಾವಣೆಗೊಳ್ಳುವ ನೌಕರರಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದೆ.

7th Pay Commission Karnataka Recommendations On City And Out Of State Allowance

ರಾಜ್ಯದೊಳಗಿನ ತಂಗುವಿಕೆಗೆ ಪ್ರಸ್ತುತ ಜಾರಿಯಲ್ಲಿರುವ ದಿನಭತ್ಯೆಯ ಅರ್ಹತೆ ಮತ್ತು ಆಯೋಗವು ಶಿಫಾರಸ್ಸು ಮಾಡಿರುವ ಪರಿಷ್ಕೃತ ದರಗಳು ಈ ರೀತಿ ಇವೆ. ಇದು ಪ್ರವರ್ಗ, ಬೆಂಗಳೂರು, ಮಹಾನಗರ ಪಾಲಿಕೆಗಳು, ಇತರೆ ಸ್ಥಳಗಳು ಎಂದು ವಿಭಾಗಿಸಿ (ರೂ.ಗಳಲ್ಲಿ) ದಿನಭತ್ಯೆಯ ಏರಿಕೆಗೆ ಶಿಫಾರಸು ಮಾಡಲಾಗಿದೆ.

ಪ್ರವರ್ಗ IA. ಬೆಂಗಳೂರು ಪ್ರಸಕ್ತ ದರ 600, ಶಿಫಾರಸು ಮಾಡಿದ ದರ 1,200. ಮಹಾನಗರ ಪಾಲಿಕೆಗಳು ಪ್ರಸಕ್ತ ದರ 500, ಶಿಫಾರಸು ಮಾಡಿದ ದರ 1000. ಇತರೆ ಸ್ಥಳಗಳು ಪ್ರಸಕ್ತ ದರ 400 ಮತ್ತು ಶಿಫಾರಸು ಮಾಡಿದ ದರ 800 ರೂ.ಗಳು.

ಪ್ರವರ್ಗ IB. ಬೆಂಗಳೂರು ಪ್ರಸಕ್ತ ದರ 600, ಶಿಫಾರಸು ಮಾಡಿದ ದರ 1,200. ಮಹಾನಗರ ಪಾಲಿಕೆಗಳು ಪ್ರಸಕ್ತ ದರ 500, ಶಿಫಾರಸು ಮಾಡಿದ ದರ 1000. ಇತರೆ ಸ್ಥಳಗಳು ಪ್ರಸಕ್ತ ದರ 400 ಮತ್ತು ಶಿಫಾರಸು ಮಾಡಿದ ದರ 800 ರೂ.ಗಳು.

ಪ್ರವರ್ಗ II. ಬೆಂಗಳೂರು ಪ್ರಸಕ್ತ ದರ 400, ಶಿಫಾರಸು ಮಾಡಿದ ದರ 800. ಮಹಾನಗರ ಪಾಲಿಕೆಗಳು ಪ್ರಸಕ್ತ ದರ 400, ಶಿಫಾರಸು ಮಾಡಿದ ದರ 800. ಇತರೆ ಸ್ಥಳಗಳು ಪ್ರಸಕ್ತ ದರ 300 ಮತ್ತು ಶಿಫಾರಸು ಮಾಡಿದ ದರ 600 ರೂ.ಗಳು.

ಪ್ರವರ್ಗ III. ಬೆಂಗಳೂರು ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ಮಹಾನಗರ ಪಾಲಿಕೆಗಳು ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ಇತರೆ ಸ್ಥಳಗಳು ಪ್ರಸಕ್ತ ದರ 200 ಮತ್ತು ಶಿಫಾರಸು ಮಾಡಿದ ದರ 400 ರೂ.ಗಳು.

ಪ್ರವರ್ಗ IV. ಬೆಂಗಳೂರು ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ಮಹಾನಗರ ಪಾಲಿಕೆಗಳು ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ಇತರೆ ಸ್ಥಳಗಳು ಪ್ರಸಕ್ತ ದರ 200 ಮತ್ತು ಶಿಫಾರಸು ಮಾಡಿದ ದರ 400 ರೂ.ಗಳು.

ರಾಜ್ಯದ ಹೊರಗಡೆ ಭತ್ಯೆ: ನೌಕರರು ರಾಜ್ಯದ ಹೊರಗಡೆ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಅಧಿಸೂಚಿತ ದರಗಳಲ್ಲಿ ಊಟ ಮತ್ತು ವಸತಿ ಸೌಕರ್ಯಗಳನ್ನು ಒದಗಿಸುವಂತಹ ಹೋಟೆಲ್‌ಗಳಲ್ಲಿ ಮತ್ತು ಇತರ ನೋಂದಾಯಿತ ಸಂಸ್ಥೆಗಳಲ್ಲಿ ತಂಗುವುದಕ್ಕಾಗಿ ವಿಶೇಷ ದರಗಳಲ್ಲಿ ದಿನ ಭತ್ಯೆಯನ್ನು ಮಂಜೂರು ಮಾಡಲಾಗುತ್ತದೆ. ಸರ್ಕಾರಿ ಅತಿಥಿ ಗೃಹಗಳಲ್ಲಿ ವಾಸ್ತವ್ಯ ದೊರೆಯದಿದ್ದ ಸಂದರ್ಭದಲ್ಲಿ ಇದು ಅನ್ವಯವಾಗುತ್ತದೆ.

ರಾಜ್ಯದ ಹೊರಗಡೆ ತಂಗುವಿಕೆಗೆ ಪ್ರಸ್ತುತ ಜಾರಿಯಲ್ಲಿರುವ ದಿನಭತ್ಯೆ ಮತ್ತು ವಿಶೇಷ ದರಗಳ ದಿನಭತ್ಯೆ ಮತ್ತು ಆಯೋಗವು ಶಿಫಾರಸ್ಸು ಮಾಡುವ ಪರಿಷ್ಕೃತ ದರಗಳು ಈ ಕೆಳಗಿನಂತೆ ಇದೆ. ಇದು ಸಹ ಪ್ರವರ್ಗ, ಭತ್ಯೆ, ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಇತರ ಸ್ಥಳಗಳು ಎಂದು ವರ್ಗೀಕರಿಸಲಾಗಿದ್ದು, ದಿನ ಭತ್ಯೆಯನ್ನು ರೂ.ಗಳಲ್ಲಿ ನೀಡಲಾಗಿದೆ.

ಪ್ರವರ್ಗ IA. ದಿನಭತ್ಯೆ. ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 800 ರೂ.ಗಳು. ಶಿಫಾರಸು ಮಾಡಿದ ದರ 1,600 ರೂ.ಗಳು. ಇತರೆ ಸ್ಥಳಗಳಲ್ಲಿ ಪ್ರಸಕ್ತ ದರ 600, ಶಿಫಾರಸು ಮಾಡಿದ ದರ 1,200. ವಿಶೇಷ ದರಗಳಲ್ಲಿ ದಿನಭತ್ಯೆ ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 3,000 ರೂ.ಗಳು. ಶಿಫಾರಸು ಮಾಡಿದ ದರ 4,000 ರೂ.ಗಳು. ಇತರೆ ಸ್ಥಳಗಳು ಪ್ರಸಕ್ತ ದರ 3000, ಶಿಫಾರಸು ಮಾಡಿದ ದರ 3,500 ರೂ.ಗಳು.

ಪ್ರವರ್ಗ IB. ದಿನಭತ್ಯೆ. ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 800 ರೂ.ಗಳು. ಶಿಫಾರಸು ಮಾಡಿದ ದರ 1,500 ರೂ.ಗಳು. ಇತರೆ ಸ್ಥಳಗಳಲ್ಲಿ ಪ್ರಸಕ್ತ ದರ 600, ಶಿಫಾರಸು ಮಾಡಿದ ದರ 1,200. ವಿಶೇಷ ದರಗಳಲ್ಲಿ ದಿನಭತ್ಯೆ ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 3000 ರೂ.ಗಳು. ಶಿಫಾರಸು ಮಾಡಿದ ದರ 4,000 ರೂ.ಗಳು. ಇತರೆ ಸ್ಥಳಗಳು ಪ್ರಸಕ್ತ ದರ 3000, ಶಿಫಾರಸು ಮಾಡಿದ ದರ 3,500 ರೂ.ಗಳು.

ಪ್ರವರ್ಗ II. ದಿನಭತ್ಯೆ. ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 600 ರೂ.ಗಳು. ಶಿಫಾರಸು ಮಾಡಿದ ದರ 1,200 ರೂ.ಗಳು. ಇತರೆ ಸ್ಥಳಗಳಲ್ಲಿ ಪ್ರಸಕ್ತ ದರ 400, ಶಿಫಾರಸು ಮಾಡಿದ ದರ 800. ವಿಶೇಷ ದರಗಳಲ್ಲಿ ದಿನಭತ್ಯೆ ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 3000 ರೂ.ಗಳು. ಶಿಫಾರಸು ಮಾಡಿದ ದರ 4,000 ರೂ.ಗಳು. ಇತರೆ ಸ್ಥಳಗಳು ಪ್ರಸಕ್ತ ದರ 3000, ಶಿಫಾರಸು ಮಾಡಿದ ದರ 3,500 ರೂ.ಗಳು.

ಪ್ರವರ್ಗ III. ದಿನಭತ್ಯೆ. ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 500 ರೂ.ಗಳು. ಶಿಫಾರಸು ಮಾಡಿದ ದರ 1000 ರೂ.ಗಳು. ಇತರೆ ಸ್ಥಳಗಳಲ್ಲಿ ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ವಿಶೇಷ ದರಗಳಲ್ಲಿ ದಿನಭತ್ಯೆ ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 2000 ರೂ.ಗಳು. ಶಿಫಾರಸು ಮಾಡಿದ ದರ 3,000 ರೂ.ಗಳು. ಇತರೆ ಸ್ಥಳಗಳು ಪ್ರಸಕ್ತ ದರ 2000, ಶಿಫಾರಸು ಮಾಡಿದ ದರ 3,000 ರೂ.ಗಳು.

ಪ್ರವರ್ಗ IV. ದಿನಭತ್ಯೆ. ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 500 ರೂ.ಗಳು. ಶಿಫಾರಸು ಮಾಡಿದ ದರ 1000 ರೂ.ಗಳು. ಇತರೆ ಸ್ಥಳಗಳಲ್ಲಿ ಪ್ರಸಕ್ತ ದರ 300, ಶಿಫಾರಸು ಮಾಡಿದ ದರ 600. ವಿಶೇಷ ದರಗಳಲ್ಲಿ ದಿನಭತ್ಯೆ ಪ್ರಸಕ್ತ ದರ ದೆಹಲಿ/ ಮುಂಬೈ/ ಕೋಲ್ಕತ್ತಾ/ ಚೆನ್ನೈ/ ಹೈದರಾಬಾದ್ 2000 ರೂ.ಗಳು. ಶಿಫಾರಸು ಮಾಡಿದ ದರ 3,000 ರೂ.ಗಳು. ಇತರೆ ಸ್ಥಳಗಳು ಪ್ರಸಕ್ತ ದರ 2000, ಶಿಫಾರಸು ಮಾಡಿದ ದರ 3,000 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+