Get Updates
Get notified of breaking news, exclusive insights, and must-see stories!

7th Pay Commission: ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ, ಆಯೋಗದ ಶಿಫಾರಸುಗಳು

ಬೆಂಗಳೂರು, ಆಗಸ್ಟ್ 27: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಅಂಗೀಕರಿಸಿದೆ. ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಕುರಿತು ಆಯೋಗ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದೆ. ಭತ್ಯೆಯನ್ನು ಹೇಗೆ ಲೆಕ್ಕಾಚಾರ ಹಾಕಬೇಕು? ಎಂದು ವಿವರಣೆಯನ್ನು ನೀಡಿದೆ.

ಮನೆ ಬಾಡಿಗೆ ಭತ್ಯೆಯು (ಹೆಚ್ಆರ್‌ಎ) ನೌಕರನು/ ನೌಕರಳು ತನ್ನ ವಾಸ ಸ್ಥಾನಕ್ಕಾಗಿ ಭರಿಸುವ ವೆಚ್ಚಕ್ಕೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವಾಗಿದೆ. ಇದನ್ನು ನೌಕರನ ಅಥವಾ ನೌಕರಳ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ನಗರ, ಪಟ್ಟಣಗಳು ಮತ್ತು ಇತರ ವಾಸಸ್ಥಳಗಳ ವರ್ಗೀಕರಣದ ಮೂಲಕ ಇದನ್ನು ಪಾವತಿಸಲಾಗುತ್ತದೆ.

2011ರ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ಕಳೆದ ಬಾರಿ 2015ರಲ್ಲಿ ವರ್ಗೀಕರಣವನ್ನು ಕೈಗೊಳ್ಳಲಾಗಿದ್ದು, 25 ಲಕ್ಷ ಮತ್ತು ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು 'ಎ', 5 ಲಕ್ಷ ಮತ್ತು ಮೇಲ್ಪಟ್ಟ ಆದರೆ 25 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು 'ಬಿ', ಇತರೆ ಎಲ್ಲಾ ಪಟ್ಟಣಗಳು ಮತ್ತು ಸ್ಥಳಗಳನ್ನು 'ಸಿ' ಪವರ್ಗಗಳಾಗಿ ವರ್ಗೀಕರಿಸಲಾಗಿದೆ.

7th Pay Commission Karnataka HRA Of Government Employee Recommendations

ಇದನ್ನು ಆಧರಿಸಿ, ಕರ್ನಾಟಕ ರಾಜ್ಯ ಸರ್ಕಾರವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಂಪೂರ್ಣ ಪ್ರದೇಶವನ್ನು 'ಎ' ಪ್ರವರ್ಗವಾಗಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಪುರಸಭೆ ಪ್ರದೇಶಗಳನ್ನು 'ಬಿ' ಪವರ್ಗವಾಗಿ ಮತ್ತು ಇತರ ಎಲ್ಲಾ ಪ್ರದೇಶಗಳನ್ನು 'ಸಿ' ಪವರ್ಗವಾಗಿ ವರ್ಗೀಕರಣ ಮಾಡಿದೆ. ಎಲ್ಲಾ ಪ್ರದೇಶಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳಲ್ಲಿ ಗಣನೀಯ ಹೆಚ್ಚಳಕ್ಕಾಗಿ ಅನೇಕ ಬೇಡಿಕೆಗಳನ್ನು ಆಯೋಗವು ಸ್ವೀಕರಿಸಿದೆ. ಮನೆ ಬಾಡಿಗೆ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಗ್ರಾಮೀಣ ಮತ್ತು ನಗರ ಪದೇಶಗಳನ್ನು ಸಮನಾಗಿ ಪರಿಗಣಿಸಬೇಕೆಂದು ಕೆಲವರು ಮನವಿ ಮಾಡಿದ್ದಾರೆ.

ಮನೆ ಬಾಡಿಗೆ ಭತ್ಯೆಯ ಮಂಜೂರಾತಿ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸರಿಸಮನಾಗಿ ಪರಿಗಣಿಸುವ ಕೋರಿಕೆಗೆ ಸಂಬಂಧಿಸಿದಂತೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜೀವನಮಟ್ಟ ಮತ್ತು ಜೀವನ ವೆಚ್ಚದಲ್ಲಿ ಗಣನೀಯ ಅಂತರವಿರುವುದರಿಂದ ಈ ಕೋರಿಕೆಯನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಭತ್ಯೆಯು ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಬೇಕೆ ಹೊರತು ಇದು ಎಲ್ಲಾ ನೌಕರರಿಗೆ ವಿಸ್ತರಿಸಲಾಗುವ ಒಂದು ಸೌಲಭ್ಯ ಎಂಬಂತೆ ಪರಿಗಣಿಸಬಾರದು.

ಏಕೆ ಪರಿಗಣನೆ ಸಾಧ್ಯವಿಲ್ಲ: ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು 'ಎ' ಪವರ್ಗವನ್ನಾಗಿ ಮರು ವರ್ಗೀಕರಣ ಮಾಡುವ ಬೇಡಿಕೆಗೆ ಸಂಬಂಧಿಸಿದಂತೆ, ಬೆಂಗಳೂರು ನಗರ ಜಿಲ್ಲೆಯು 2,196 ಚದರ ಕಿಲೋಮೀಟರ್ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, 6 ತಾಲ್ಲೂಕುಗಳು ಮತ್ತು 588 ಹಳ್ಳಿಗಳನ್ನು ಒಳಗೊಂಡಿದ್ದು, 716 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಬಿಬಿಎಂಪಿ ಪ್ರದೇಶಕ್ಕಿಂತಲೂ ಗಮನಾರ್ಹವಾಗಿ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುತ್ತದೆ ಎನ್ನುವ ವಿಚಾರ ಪ್ರಸ್ತುತ. ಬಿಬಿಎಂಪಿಯ ವ್ಯಾಪ್ತಿಯ ನಗರ ಪ್ರದೇಶದ ವಾಸಸ್ಥಳಗಳಲ್ಲಿ ಕಂಡು ಬರುವ ವಿಶೇಷ ಲಕ್ಷಣಗಳು ಮತ್ತು ವೈಶಿಷ್ಟ್ಯತೆಗಳು ಬಿಬಿಎಂಪಿ ವ್ಯಾಪ್ತಿಗೆ ಸೇರದ ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಉದಾಹರಣೆಗೆ ಬಿಬಿಎಂಪಿ ಅಲ್ಲದ ಪ್ರದೇಶಗಳಲ್ಲಿನ ಜೀವನ ವೆಚ್ಚ ಮತ್ತು ಬಾಡಿಗೆಯು ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಿರುತ್ತದೆ. ಆದಕಾರಣ ಈ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ.

ಪ್ರಸ್ತುತ 'ಸಿ' ಪ್ರವರ್ಗದ ಅಡಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ತುಮಕೂರು, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನು ಮನೆ ಬಾಡಿಗೆ ಭತ್ಯೆಯ ಮಂಜೂರಾತಿ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸರಿಸಮನಾಗಿ ಪರಿಗಣಿಸುವ ಕೋರಿಕೆಗೆ ಸಂಬಂಧಿಸಿದಂತೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜೀವನಮಟ್ಟ ಮತ್ತು ಜೀವನ ವೆಚ್ಚದಲ್ಲಿ ಗಣನೀಯ ಅಂತರವಿರುವುದರಿಂದ ಈ ಕೋರಿಕೆಯನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಭತ್ಯೆಯು ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಬೇಕೆ ಹೊರತು ಇದು ಎಲ್ಲಾ ನೌಕರರಿಗೆ ವಿಸ್ತರಿಸಲಾಗುವ ಒಂದು ಸೌಲಭ್ಯ ಎಂಬಂತೆ ಪರಿಗಣಿಸಬಾರದು.

ಬೆಂಗಳೂರು ಗ್ರಾಮೀಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಪೊಲೀಸ್‌ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ಬಿಬಿಎಂಪಿಯ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಸಮನಾಗಿ ಪರಿಗಣಿಸಬೇಕೆಂದು ಮತ್ತು ಸಮಾನ ರೀತಿಯ ಮನೆ ಬಾಡಿಗೆ ಭತ್ಯೆಗೆ ನೀಡಬೇಕೆಂಬ ಪೊಲೀಸ್ ಇಲಾಖೆಯ ನಿರ್ದಿಷ್ಟ ಕೋರಿಕೆಯನ್ನು ಆಯೋಗವು ಸ್ವೀಕರಿಸಿರುತ್ತದೆ.

ಇದಕ್ಕೆ ದೇವನಹಳ್ಳಿ ಪೊಲೀಸ್ ಠಾಣೆಯು ಪೊಲೀಸ್ ಆಯುಕ್ತರು, ಬೆಂಗಳೂರು ಇವರ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುತ್ತದೆಂದೂ ಮತ್ತು ಆಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿಯನ್ನು ಸಮನಾಗಿ ಪರಿಗಣಿಸಬೇಕು ಎಂಬುದು ಪ್ರಮುಖ ವಾದವಾಗಿರುತ್ತದೆ. ಆಯೋಗವು ಈ ಬೇಡಿಕೆಯನ್ನು ಪರಿಶೀಲಿಸಿದೆ. ಮನೆ ಬಾಡಿಗೆ ಭತ್ಯೆಯ ಪ್ರಮಾಣವು ಪ್ರದೇಶಗಳ ವರ್ಗೀಕರಣವನ್ನು ಆಧರಿಸಬೇಕೇ ಹೊರತು ಅಧಿಕಾರಿಯ ಕಾರ್ಯವ್ಯಾಪ್ತಿಗೆ ಯಾವ ಕಛೇರಿ ಬರುತ್ತದೆ ಎಂಬ ಅಂಶದ ಮೇಲಲ್ಲ ಎಂಬುದು ಆಯೋಗದ ಅಭಿಪ್ರಾಯವಾಗಿದೆ.

ಆಯೋಗ ಈ ಬೇಡಿಕೆಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿರುತ್ತದೆ ಮತ್ತು ಪ್ರದೇಶವಾರು ವರ್ಗೀಕರಣವು ನಿಖರವಾಗಿರಬೇಕೆಂಬುದು ಅಭಿಪ್ರಾಯಪಡುತ್ತದೆ. ಯಾವತ್ತೂ ಯಾವುದೇ ಅಧಿಕಾರ ವ್ಯಾಪ್ತಿಯ ಪರಿಮಿತಿಗಳಿಗೆ ಹೊರ ವಲಯದ ಪ್ರದೇಶಗಳೆಂದು ಇದ್ದೇ ಇರುವ ಕಾರಣ, 'ಎ' ಪವರ್ಗದ ಸೌಲಭ್ಯಗಳನ್ನು ಹೊರ ವಲಯದ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯು ಮುಗಿಯದ ಪ್ರಕ್ರಿಯೆಯಾಗಿರುತ್ತದೆ. ಅಲ್ಲದೆ ಹಿಂದಿನ ಬಿಎಂಪಿ ಹೊರ ವಲಯದ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆ (ಹೆಚ್‌ಆರ್‌ಎ) ದರವನ್ನು ಹೆಚ್ಚಿಸುವ ವಿಷಯವು ಈ ಹಿಂದೆ ಅನೇಕ ಆಡಳಿತಾತ್ಮಕ ತೊಂದರೆಗಳನ್ನು ಸೃಷ್ಟಿಸಿದ್ದು, ತಪ್ಪಿಸಬಹುದಾಗಿದ್ದ ಹಲವು ವ್ಯಾಜ್ಯಗಳಿಗೆ ಎಡೆಮಾಡಿ ಕೊಟ್ಟಿತ್ತು ಎಂದು ತಿಳಿದುಬಂದಿರುತ್ತದೆ.

ಈ ಹಿನ್ನಲೆಯಲ್ಲಿ, ಮನೆ ಬಾಡಿಗೆ ಭತ್ಯೆಯನ್ನು ಸಂದಾಯ ಮಾಡುವ ಉದ್ದೇಶಕ್ಕೆ ಪ್ರಸ್ತುತ ಜಾರಿಯಲ್ಲಿರುವ ನಗರಗಳು, ಪಟ್ಟಣಗಳು ಮತ್ತು ಇತರೆ ಪ್ರದೇಶಗಳ ವರ್ಗೀಕರಣದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಮತ್ತು ಪ್ರಸ್ತುತ ವ್ಯವಸ್ಥೆಯನ್ನು ಮುಂದುವರೆಸಬಹುದು ಎಂಬುದು ಆಯೋಗದ ಅಭಿಪ್ರಾಯವಾಗಿರುತ್ತದೆ. ಮನೆ ಬಾಡಿಗೆ ಭತ್ಯೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ, ಶಿಫಾರಸ್ಸು ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯೋಗವು ಮೂರು ವರ್ಗಗಳ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಈ ಮುಂದಿನಂತೆ ಶಿಫಾರಸ್ಸು ಮಾಡುತ್ತದೆ.

ಪ್ರದೇಶಗಳ ವರ್ಗ 'ಎ'. ಮನೆ ಬಾಡಿಗೆ ಭತ್ಯೆಯ ದರ (ಮೂಲ ವೇತನ ಶೇ) ಚಾಲ್ತಿಯಲ್ಲಿರುವ ದರ 24. ಮನೆ ಬಾಡಿಗೆ ಭತ್ಯೆಯ ದರ (ಪರಿಷ್ಕರಿಸಲಾದ ಮೂಲ ವೇತನದ ಶೇ) ಶಿಫಾರಸು ಮಾಡಿದ ದರ 20. ಪ್ರದೇಶ 'ಬಿ' ಚಾಲ್ತಿಯಲ್ಲಿರುವ ದರ 16, ಶಿಫಾರಸು ಮಾಡಿದ ದರ 15, ಪ್ರದೇಶ ವರ್ಗ 'ಸಿ' ಚಾಲ್ತಿಯಲ್ಲಿರುವ ದರ 8, ಶಿಫಾರಸು ಮಾಡಿದ ದರ 7.5.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+