7th Pay Commission; ಸರ್ಕಾರಿ ಅಂಗವಿಕಲ ನೌಕರರ ಸಂಘದ ಬೇಡಿಕೆಗಳು

ಬೆಂಗಳೂರು, ಆಗಸ್ಟ್‌ 22; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘ (ರಿ.) ವೇತನ ಆಯೋಗದ ಮುಂದೆ ಅಂಗವಿಕಲ ನೌಕರರ ಬೇಡಿಕೆಗಳನ್ನು ಮುಂದಿಟ್ಟಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ರಾಜ್ಯದ ಎಲ್ಲಾ ಇಲಾಖೆಗಳ ಅಂಗವಿಕಲತೆಯುಳ್ಳ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಘವಾಗಿದೆ. ಸರ್ಕಾರದ ಅಧಿಕೃತ ಮಾನ್ಯತೆ ಪಡೆದ ಸಂಘವಾಗಿದೆ. ನ್ಯಾಯಮೂರ್ತಿ ವೆಂಕಟಸ್ವಾಮಿ ಅವರ ನೇತೃತ್ವದ 3ನೇ ವೇತನ ಆಯೋಗದಿಂದ ಇಲ್ಲಿಯವರೆಗಿನ ಎಲ್ಲಾ ವೇತನ ಆಯೋಗಗಳ ಮುಂದೆ ಸಂಘವು ಅಹವಾಲುಗಳನ್ನು ಸಲ್ಲಿಸುತ್ತಾ ಬಂದಿದೆ.

7th Pay Commission Karnataka Government Disabled Employees Association Demands

ಈಗ ಕರ್ನಾಟಕ ಸರ್ಕಾರವು 7ನೇ ವೇತನ ಆಯೋಗವನ್ನು ರಚಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ, ಅದರಲ್ಲೂ ಅಂಗವಿಕಲತೆಯುಳ್ಳ ನೌಕರರ ಬೇಡಿಕೆಗಳ ಮನವಿಯನ್ನು ಪರಿಗಣಿಸಿ ಸೂಕ್ತ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಮಾಡಬೇಕೆಂದು ವೇತನ ಆಯೋಗಕ್ಕೆ ಮನವಿ ಮಾಡಲಾಗಿದೆ.

ಆಯೋಗದ ಮುಂದೆ ಇಟ್ಟಿರುವ ಬೇಡಿಕೆಗಳು

* ವಿಕಲಚೇತನ ನೌಕರರಿಗೆ ಒಪಿಎಸ್ ಅಥವ ಎನ್‌ಪಿಎಸ್ ಯಾವುದು ಅವರ ಇಚ್ಛಿತ್ವ ಪಿಂಚಣಿ ಆಗಿರುವುದೋ ಅದನ್ನ ಒಂದು ಬಾರಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಒದಗಿಸುವುದು. ಅಂಗವಿಕಲ ಸರ್ಕಾರಿ ನೌಕರರು ಅಂಗವಿಕಲತೆಯ ಕಾರಣದಿಂದಾಗಿ ಹಲವಾರು ಸಮಸ್ಯೆಗಳನ್ನು ನಿತ್ಯ ಜೀವನದಲ್ಲಿ ಎದುರಿಸುತ್ತಾ ಬಂದಿದ್ದು, ಮುಂದೆ ವೃದ್ಧಾಪ್ಯದಲ್ಲಿ ಅತ್ಯಧಿಕ ಸಂಕಷ್ಟಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ವಿಕಲಚೇತನ ನೌಕರರಿಗೆ ಒಂದು ಬಾರಿ (One Time Option) OPS ಅಥವಾ NPS ಯಾವುದು ಅವರ ಇಚ್ಚಿತ ಪಿಂಚಣಿ ಆಗಿರುವುದೋ ಅದನ್ನು ಒಂದು ಬಾರಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಲು ಶಿಫಾರಸ್ಸು ಮಾಡಬೇಕು.

* ಅಂಗವಿಕಲ ನಿರುದ್ಯೋಗಿಗಳಿಗೆ ಬ್ಯಾಕ್‌ಲಾಗ್ ಮೂಲಕ ನೇರ ನೇಮಕಾತಿಗೆ ಅವಕಾಶ. ಕರ್ನಾಟಕ ರಾಜ್ಯ ಸರ್ಕಾರದ ಸೇವೆಗಳಲ್ಲಿ 7.69 ಲಕ್ಷ ಮಂಜೂರಾದ ಹುದ್ದೆಗಳಿದ್ದು, 1/3 ಭಾಗದಷ್ಟು ಹುದ್ದೆಗಳು ಖಾಲಿ ಇವೆ. ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ನೇರ ನೇಮಕಾತಿಯಲ್ಲಿ ಕಲ್ಪಿಸಿರುವ ಶೇಕಡ 5 (Group-C&D) ಮತ್ತು ಶೇಕಡ 4 ರ (Group-A&B) ಮೀಸಲಾತಿಯನ್ವಯ ಸರ್ಕಾರಿ ಸೇವೆಗಳಲ್ಲಿ ಕನಿಷ್ಟ 30,000 ಅಂಗವಿಕಲ ನೌಕರರು ಇರಬೇಕಾಗಿತ್ತು. ಆದರೆ ನಿಯಮಿತವಾಗಿ ನೇಮಕಾತಿಗಳು ಆಗದೇ ಇರುವುದರಿಂದ ಗ್ರೂಪ್ 'ಡಿ' ಹುದ್ದೆಗಳನ್ನು ಬಹುತೇಕ ಹೊರಗುತ್ತಿಗೆಗೆ ನೀಡುತ್ತಿರುವುದರಿಂದ ಅಂಗವಿಕಲರಿಗೆ ಸರ್ಕಾರಿ ಸೇವೆಗಳಲ್ಲಿ ಅವಕಾಶಗಳು ಕಡಿಮೆಯಾಗಿ ಸರ್ಕಾರಿ ಸೇವೆಗಳಲ್ಲಿ ಅಂದಾಜು ಸುಮಾರು 12000 ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆ ಮತ್ತು ವೃಂದಗಳಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಬ್ಯಾಕ್‌ಲಾಗ್‌ ಮೂಲಕ ನೇರ ನೇಮಕಾತಿ ಮಾಡುವಂತೆ ಶಿಫಾರಸ್ಸು ಮಾಡಬೇಕು.

* ಬಡ್ತಿಗಳಲ್ಲಿ ಮೀಸಲಾತಿ. ಕರ್ನಾಟಕ ರಾಜ್ಯವು 'ಸಿ' ಮತ್ತು 'ಡಿ' ವರ್ಗದ ನೇರ ನೇಮಕಾತಿಗಳಲ್ಲಿ ಶೇಕಡ 5 ಮೀಸಲಾತಿ ಸೌಲಭ್ಯವನ್ನು ಅಂಗವಿಕಲರಿಗೆ ಕಲ್ಪಿಸಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಅದೇ ರೀತಿ 'ಎ' ಮತ್ತು 'ಬಿ' ವರ್ಗದ ಹುದ್ದೆಗಳಲ್ಲಿ ಶೇಕಡ 4ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. 2016ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಹಾಗೂ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪುಗಳಲ್ಲಿ ಅಂಗವಿಕಲ ಸರ್ಕಾರಿ ನೌಕರರಿಗೆ ಮುಂಬಡ್ತಿಗಳಲ್ಲಿಯೋ ಮೀಸಲಾತಿ ಅನ್ವಯಿಸುತ್ತೆ ಎಂದು ಸ್ಪಷ್ಟಪಡಿಸಿರುವುದರಿಂದ ಅದರಂತೆ ಹರಿಯಾಣ ಮುಂತಾದ ರಾಜ್ಯ ಸರ್ಕಾರಗಳು ಬಡ್ತಿಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿವೆ. ಅದೇ ರೀತಿ ಕರ್ನಾಟಕ ಸರ್ಕಾರವು ಸಹ 'ಸಿ' ಮತ್ತು 'ಡಿ' ಅಂಗವಿಕಲ ನೌಕರರಿಗೆ ಮುಂಬಡ್ತಿಗಳಲ್ಲಿ ಮೀಸಲಾತಿ ಕಲ್ಪಿಸಿದೆ. ಆದರೆ ಗ್ರೂಪ್ 'ಎ' ಮತ್ತು 'ಬಿ' ವೃಂದದ ಅಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು 7ನೇ ವೇತನ ಆಯೋಗವು ಶಿಫಾರಸು ಮಾಡಬೇಕು.

* ಅಂಗವಿಕಲ ಸರ್ಕಾರಿ ನೌಕರರಿಗೆ ಪ್ರಯಾಣ ಭತ್ಯೆ. ಕರ್ನಾಟಕ ಸರ್ಕಾರವು 1979 ರಿಂದ ಅಂಗವಿಕಲ ಸರ್ಕಾರಿ ನೌಕರರಿಗೆ ಸಾರಿಗೆ ಸೌಕರ್ಯಕ್ಕಾಗಿ ಪ್ರಯಾಣ ಭತ್ಯೆಯನ್ನು ನೀಡುತ್ತಾ ಬಂದಿದೆ. ಅಂಗವಿಕಲ ಸರ್ಕಾರಿ ನೌಕರರು ಕೆಲಸದ ಸ್ಥಳಗಳಿಗೆ ಬಂದು, ಹೋಗಲು ಅವರದೇ ಆದ ವಾಹನ ಸೌಕರ್ಯ ಹೊಂದಬೇಕಾಗಿರುತ್ತದೆ. ಇದಕ್ಕಾಗಿ 5ನೇ ವೇತನ ಆಯೋಗದ ಶಿಫಾರಸ್ಸಿನಂತೆ ಮೂಲ ವೇತನದ ಶೇಕಡ 6ರಷ್ಟು ಪ್ರಯಾಣ ಭತ್ಯೆಯನ್ನು ನೀಡಲಾಗುತ್ತಿದೆ. ಅಂಗವಿಕಲ ಸರ್ಕಾರಿ ನೌಕರರಿಗೆ ಇಂಧನ ಹಾಗೂ ಇತರೆ ಕಾರಣಗಳಿಂದಾಗಿ ಅವರುಗಳು ಕೆಲಸದ ಸ್ಥಳಗಳಿಗೆ ಬಂದು, ಹೋಗಲು ತಮ್ಮ ವೇತನದ ಶೇಕಡ 30ರಷ್ಟು ಖರ್ಚು ಮಾಡಬೇಕಾಗುತ್ತದೆ. ಆದುದರಿಂದ ಅಂಗವಿಕಲ ನೌಕರರಿಗೆ ಮೂಲ ವೇತನದ ಶೇಕಡ 15 ರಷ್ಟು ಪ್ರಯಾಣ ಭತ್ಯೆ ಮಂಜೂರು ಮಾಡಲು ಶಿಫಾರಸ್ಸು ಮಾಡಬೇಕು.

* ಮೇಲ್ಕಂಡ ಪ್ರಯಾಣ ಭತ್ಯೆಯನ್ನು ರಜೆ ಅವಧಿಯಲ್ಲಿ ಶಾಲಾ ಶಿಕ್ಷಕರು ಕಾಲೇಜು ಉಪನ್ಯಾಸಕರಿಗೆ ನೀಡುತ್ತಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೋಧಕ ವರ್ಗದವರು ರಜೆ ಅವಧಿಯಲ್ಲಿಯೋ ಮೌಲ್ಯಮಾಪನ, ಜನಗಣತಿ, ಶಾಲೆಗ ಮಕ್ಕಳ ದಾಖಲಾತಿ ಆಂದೋಲನ ಇತ್ಯಾದಿ ಸರ್ಕಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದುದರಿಂದ ಪ್ರಯಾಣ ಭತ್ಯೆಯನ್ನು ರಜೆ ಅವಧಿಯಲ್ಲಿ ನಿಲ್ಲಸದೇ ವರ್ಷ ಪೂರ್ತಿ ನೀಡಬೇಕು.

* ಹಿಂದಿನ ವೇತನ ಆಯೋಗಗಳ ಶಿಫಾರಸ್ಸಿನಂತೆ ಸರ್ಕಾರವು, ಅಂಗವಿಕಲ ನೌಕರರುಗಳಿಗೆ ಸಾಧನ ಸಲಕರಣೆ, ವಾಹನ ಇತ್ಯಾದಿಗಳ ಖರೀದಿಗೆ ಸೇವೆಯಲ್ಲಿ ಒಂದು ಬಾರಿ ಪರಿಹಾರ ಧನವನ್ನು ನೀಡುತ್ತಾ ಬಂದಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಂಗವಿಕಲರು ಬಳಸುವ ಸಾಧನ ಸಲಕರಣೆಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯಾಗುತ್ತಿದ್ದು, ಅವುಗಳ ಬೆಲೆ ಗಣನೀಯವಾಗಿ ಹೆಚ್ಚಿಗೆ ಇದೆ. ಆದುದರಿಂದ, ಅಂಗವಿಕಲ ನೌಕರರುಗಳು ಬಳಸುವ Artificial leg, Modern Hearing Aids & Equipments, Wheel chair ಇತ್ಯಾದಿ ಅತ್ಯಾವಶ್ಯಕವಾದ ಸಾಧನ ಸಲಕರಣೆಗಳಿಗೆ ಶೇಕಡ 100 ರಷ್ಟು ವೆಚ್ಚವನ್ನು ಹಿಂಭರಿಸುವಂತೆ ಶಿಫಾರಸ್ಸು ಮಾಡುವುದು.

* ಸರ್ಕಾರಿ ವಸತಿ ಗೃಹಗಳು, ನಿವೇಶನ ಮನೆಗಳ ಹಂಚಿಕೆಯಲ್ಲಿ ಶೇಕಡ 5 ರಷ್ಟು ಮೀಸಲಾತಿ ಕಲ್ಪಿಸುವುದು. ಅಂಗವಿಕಲ ಸರ್ಕಾರಿ ನೌಕಕರಿಗೆ ಕೆಲಸದ ಸ್ಥಳದಿಂದ ಸಮೀಪ ವಸತಿ ಸೌಲಭ್ಯಗಳಿದ್ದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಆದುದರಿಂದ ಸರ್ಕಾರಿ ವಸತಿ ಗೃಹಗಳ ಹಂಚಿಕೆಯಲ್ಲಿ ಶೇಕಡ 5 ರಷ್ಟು ಮೀಸಲಾತಿ ಜಾರಿಗೆ ತರಲು ಶಿಫಾರಸ್ಸು ಮಾಡಬೇಕು. ಅದೇ ರೀತಿ ಅಭಿವೃದ್ಧಿ ಪ್ರಾಧಿಕಾರಿಗಳು ಮತ್ತು ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇಕಡ 5 ರಷ್ಟು ಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಬೇಕು.

* ಅಂಗವಿಕಲ ಸರ್ಕಾರಿ ನೌಕರರು ಮತ್ತು ನಿವೃತ್ತ ಅಂಗವಿಕಲ ನೌಕರರಿಗೆ ವೈದ್ಯಕೀಯ ವಿಮಾ ಯೋಜನೆ ರೂಪಿಸಿ ಜಾರಿಗೆ ತರುವ ಬಗ್ಗೆ. ಅಂಗವಿಕಲರು ದೈಹಿಕ ಅಂಗ ವೈಕಲ್ಯಗಳಿಂದಾಗಿ ವೈದ್ಯಕೀಯ ಚಿಕಿತ್ಸೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ನಿವೃತ್ತ ಅಂಗವಿಕಲ ನೌಕರರಿಗಂತೂ ಅಂಗವೈಕಲ್ಯದ ಪ್ರಮಾಣ ವಯಸ್ಸಾದಂತೆ ಹೆಚ್ಚಾಗುವುದರಿಂದ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಗಳಿಗೆ ತಮ್ಮ ಪಿಂಚಣಿಯ ಶೇಕಡ 50ರಷ್ಟು ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಆದುದರಿಂದ ಅಂಗವಿಕಲ ನೌಕರರು ಮತ್ತು ನಿವೃತ್ತ ನೌಕರರ ಅನುಕೂಲಕ್ಕಾಗಿ ವೈದ್ಯಕೀಯ ವಿಮಾ ಯೋಜನೆಯೊಂದನ್ನು ರೂಪಿಸಿ ಜಾರಿಗೆ ತರಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+