7th Pay Commission: ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೇತನ ಎಷ್ಟು?
ಬೆಂಗಳೂರು, ಆಗಸ್ಟ್ 27: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿದ 558 ಪುಟಗಳ ಸಂಪುಟ-1ರ ವರದಿಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ರಾಜ್ಯ ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆಯಂತೆ 7ನೇ ವೇತನ ಆಯೋಗದ ಶಿಫಾರಸುಗಳು ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿವೆ. ಇದರಿಂದಾಗಿ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಯಲ್ಲಿ ಏರಿಕೆಯಾಗಲಿದೆ.
ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಬಳಿಕ ಯಾವ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ? ಎಂಬ ಚರ್ಚೆಗಳು ನಡೆಯುತ್ತಿವೆ. ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ವಿವಿಧ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ವಿವರವಾದ ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದದ್ದು. ಪೊಲೀಸರ ವೇತನ, ಭತ್ಯೆಗಳು ಎಷ್ಟಾಗಲಿವೆ? ಎಂದು ಸರ್ಕಾರ ತನ್ನ ಆದೇಶದಲ್ಲಿ ವಿವರಣೆ ನೀಡಿದೆ. ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ವಿವರಣೆ ಕೊಡಲಾಗಿದೆ. ಅವುಗಳ ಮಾಹಿತಿ ಇಲ್ಲಿದೆ.
ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: 2018ರ ಪರಿಷ್ಕೃತ ವೇತನ ಶ್ರೇಣಿಯ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ ರೂ. 33450-62600ರಲ್ಲಿ ವೇತನ ಪಡೆಯುತ್ತಿರುವ ಶ್ರೀ Z' ಎಂಬ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ದಿನಾಂಕ 17.03.2024ರಂದು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ ಹೊಂದಿರುತ್ತಾರೆ. ನೌಕರರ ವೇತನ ವಿವರಗಳು ಈ
ಕೆಳಕಂಡಂತಿದೆ:
* 1ನೇ ಜುಲೈ 2022ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್
* ಹುದ್ದೆಗೆ ಅನ್ವಯವಾಗುವ ಪ್ರಸ್ತಕ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 33450-850-36000-950-39800-1100-46400-1250-53900-1450-62600
* 1ನೇ ಜುಲೈ 2022 ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ. ರೂ. 45,300
* ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜನವರಿ 2023
2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್
ನಿಗದಿಪಡಿಸಿದೆ.
* ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 54175-1375-58300-1500-64300-1650-74200-1900-85600-2300-99400
* 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ. 72,550.
* ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ನಿಯಮ 8ರ ಉಪನಿಯಮ (1) ರನ್ವಯ ದಿನಾಂಕ 01.01.2023ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 74,200.
* ದಿನಾಂಕ 1/7/2024ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 76,100.
* ಪದೋನ್ನತಿ ಹುದ್ದೆಯ ಪರಿಷ್ಕೃತ ವೇತನ ಶ್ರೇಣಿ ರೂ. 61300-1,12,900ರಲ್ಲಿ ದಿನಾಂಕ 17-03-2024ರಿಂದ ಜಾರಿಗೆ ಬರುವಂತೆ ಕ.ನಾ.ಸೇ.ನಿಯಮ 42ಬಿ ರನ್ವಯ ಕಾಲ್ಪನಿಕವಾಗಿ ವೇತನ ಪುನರ್ ನಿಗದಿ. ರೂ. 78,000 ಆರ್ಥಿಕ ಸೌಲಭ್ಯವು 1/8/2024ರಿಂದ ಪ್ರಪ್ತಾವಾಗುತ್ತದೆ.
* ಮುಂದಿನ ವಾರ್ಷಿಕ ವೇತನ ಬಡ್ತಿ. 1ನೇ ಜನವರಿ 2025.












Click it and Unblock the Notifications