7th Pay Commission: ಆಗಸ್ಟ್‌ನಲ್ಲಿ ನಿವೃತ್ತರಾಗುವ ನೌಕರ ಪಿಂಚಣಿ ಲೆಕ್ಕ ಹಾಕುವುದು ಹೇಗೆ?

ಬೆಂಗಳೂರು, ಆಗಸ್ಟ್‌ 06: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಿದೆ. ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಿದೆ. ನೌಕರರು ವೇತನ, ಪಿಂಚಣಿ ಎಷ್ಟು ಏರಿಕೆಯಾಗಲಿದೆ? ಎಂದು ಆನ್‌ಲೈನ್‌ ಮೂಲಕವೇ ಮಾಹಿತಿ ತಿಳಿಯಬಹುದು. ನಿವೃತ್ತ ನೌಕರರಿಗೂ ಸಹಕಾರಿಯಾಗಲು ವ್ಯವಸ್ಥೆಯನ್ನು ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಅನುಮೋದನೆ ನೀಡಿತ್ತು. ಬಳಿಕ ಎಲ್. ಅತೀಕ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಹೆಚ್ಚಳವಾಗಿರುವ ವೇತನದ ಕುರಿತು ಈಗಾಗಲೇ ಸರ್ಕಾರಿ ನೌಕರರ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

7th Pay Commission How Calculate Pension Retired After August 2024

ಸರ್ಕಾರ ತನ್ನ ಆದೇಶದಲ್ಲಿ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ಹೇಳಿತ್ತು. ಅದರಂತೆ, ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯಲ್ಲಿ ಹಲವಾರು ಬದಲಾವಣೆಗಳು ಆಗಿವೆ.

ಪ್ರಸ್ತುತ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮೊತ್ತವನ್ನು ಕ್ರಮವಾಗಿ ಮಾಸಿಕ ರೂ. 8,500 ಮತ್ತು ರೂ.75,300 ರಿಂದ ರೂ.13,500 ಮತ್ತು ರೂ.1,20,600 ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ ರೂ. 8,500 ಮತ್ತು ರೂ. 45,180 ರಿಂದ ಮತ್ತು ರೂ.13,500 ಮತ್ತು ರೂ. 80,400ಗಳಿಗೆ ಪರಿಷ್ಕರಿಸತಕ್ಕದ್ದು ಎಂದು ಆದೇಶದಲ್ಲಿ ಹೇಳಿದೆ.

7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಬಂದ ಬಳಿಕವೇ ಹಲವು ನೌಕರರು ನಿವೃತ್ತರಾಗುತ್ತಾರೆ. ಹಾಗಾದರೆ ಆಗಸ್ಟ್ ತಿಂಗಳಿನಲ್ಲಿ ನಿವೃತ್ತರಾಗುವ ನೌಕರರು ಪಿಂಚಣಿ ಲೆಕ್ಕಾಚಾರ ಹಾಕುವುದು ಹೇಗೆ?. ಅದಕ್ಕಾಗಿ ಆನ್‌ಲೈನ್‌ನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ನೌಕರರು ಸುಲಭವಾಗಿ ಪಿಂಚಣಿ ಲೆಕ್ಕಾಚಾರವನ್ನು ಹಾಕಬಹುದು.

ಆಗಸ್ಟ್‌ನಲ್ಲಿ ನಿವೃತ್ತರಾಗುವ ಸರ್ಕಾರಿ ನೌಕರರು ಪಿಂಚಣಿ ಲೆಕ್ಕಾಚಾರ ಹಾಕಲು https://karpay.calculator.cafe/ ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ Pension/Family Pension Calculator After Aug-2024 ಕ್ಲಿಕ್ ಮಾಡಬೇಕು. ಬಳಿಕ ಅಲ್ಲಿರುವ ನಿವೃತ್ತಿ ಪಿಂಚಣಿ ಲೆಕ್ಕದ ಮೂಲಕ ವಿವರಗಳನ್ನು ಭರ್ತಿ ಮಾಡಿ ಎಷ್ಟು ಪಿಂಚಣಿ ವೇತನ ಆಯೋಗದ ಶಿಫಾರಸ್ಸು ಅನ್ವಯ ಸಿಗಲಿದೆ? ಎಂದು ಮಾಹಿತಿ ಪಡೆಯಬಹುದು.

ಇದೇ ವೆಬ್‌ಸೈಟ್‌ನಲ್ಲಿ 7ನೇ ವೇತನ ಆಯೋಗ ವೇತನ ಹೆಚ್ಚಳ, 31/6/2022ಕ್ಕೂ ಮುಂಚೆ ನಿವೃತ್ತರಾಗಿದ್ದರೆ ಸಿಗುವ ಪಿಂಚಣಿ, 7ನೇ ವೇತನ ಆಯೋಗದ ಶಿಫಾರಸು ಅನ್ವಯ ಹೆಚ್ಚಳವಾಗುವ ಕೌಟುಂಬಿಕ ಪಿಂಚಣಿ ಮಾಹಿತಿಯನ್ನು ನೀಡಲಾಗಿದೆ. ನೌಕರರು ವಿವಿರ ಭರ್ತಿ ಮಾಡಿ ಅಂಗೈನಲ್ಲಿಯೇ ಮಾಹಿತಿ ಪಡೆಯಬಹುದು.

ಕರ್ನಾಟಕ ಸರ್ಕಾರ ಈಗಾಗಲೇ ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕಾರ ಮಾಡಿದೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳಲ್ಲಿ ಆಗುವ ವ್ಯತ್ಯಾಸವನ್ನು ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+