7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಶುಭಸುದ್ದಿ-7ನೇ ವೇತನ ಆಯೋಗ ವರದಿ ಜಾರಿ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ
7th Pay Commission: ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಜಾರಿಯಾದರೆ ಯಾರಿಗೆಲ್ಲ ಉಪಯೋಗ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದ್ದು, 7ನೇ ವೇತನ ಆಯೋಗ ಜಾರಿ ಮಾಡಲು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಾಂತಾಗಿದೆ. ರಾಜ್ಯ ಸರ್ಕಾರ ಶೀಘ್ರವೇ 7ನೇ ವೇತನ ಆಯೋಗದ ಶಿಫಾರಸು ಮಾಡಲು ಮುಂದಾಗಿದೆ. ನೌಕರರು ನಿರೀಕ್ಷಿಸಿದಂತೆ ಶೇಕಡ 27ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇನ್ನು ಈ ವಿಚಾರವಾಗಿ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದಿದ್ದು, ವೇತನ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪುಟ ಅಧಿಕಾರಿ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆಗೂ ಮುಂಚೆಯೇ 7ನೇ ವೇತನ ಆಯೋಗದ ವರದಿ ಜಾರಿ ಮಾಡಲು ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಜೂನ್ ಅಂತ್ಯದೊಳಗೆ ಜಾರಿ ಮಾಡಲು ಸಂಘ ಗಡುವು ನೀಡಿದ್ದು, ಇದೀಗ ಸರ್ಕಾರ ನೌಕರರಿಗೆ ಶುಭಸುದ್ದಿ ನೀಡಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ 7ನೇ ವೇತನ ಆಯೋಗವು ನೌಕರರ ವೇತವನ್ನು ಶೇಕಡ 27.5ರಷ್ಟು ಹೆಚ್ಚಳ ಮಾಡಲು ಸರ್ಕಾರಕ್ಕೆ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನ ಶಿಫಾರಸು ಮಾಡಿತ್ತು.
ವರದಿಯಲ್ಲಿ ಏನಿದೆ?: ಆಯೋಗದ ವರದಿಯಲ್ಲಿ ಆರಂಭಿಕ ನೌಕರರ ಕನಿಷ್ಠ ವೇತನ 17 ಸಾವಿರ ಇದ್ದು, ಅದನ್ನು ಗರಿಷ್ಠ 27,000ಕ್ಕೆ ಹಾಗೂ ಹಿರಿಯ ಶ್ರೇಣಿ ನೌಕರರ ಆರಂಭಿಕ ವೇತನ ಕನಿಷ್ಠ 1.04,600 ಇದ್ದು, ಅದನ್ನು 1,67,200ಕ್ಕೆ ಪರಿಷ್ಕರಣೆ ಮಾಡುವಂತೆ ಆಯೋಗ ಶಿಪಾರಸು ಮಾಡಿದ್ದು, ಈ ಶಿಫಾರಸು ಅನುದಾನಿಕ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯ ಆಗಲಿದೆ.
ನಿವೃತ್ತ ನೌಕರರ ಪಿಂಚಣಿಯ ಮೂಲ ವೇತವನ್ನು 50ರಷ್ಟು, ಕುಟುಂಬ ಪಿಂಚಣಿಯನ್ನ ಶೇಕಡ 30ರಷ್ಟು ಹೆಚ್ಚಿಸಲು ಶಿಫಾರಸು ಮಾಡಿದೆ. ಇದನ್ನು ಕನಿಷ್ಠ 13,500ರಿಂದ 1,20,600ರೆಗೆ ನಿಗಧಿ ಮಾಡಿತ್ತು.
ಸಮವಸ್ತ್ರ ಭತ್ಯೆ, ಪ್ರಯಾಣ ಭತ್ಯೆ, ದಿನಭತ್ಯೆಗಳು ಶೇಕಡ 25ರಷ್ಟು ಹೆಚ್ಚಳ ಮಾಡುವುದು, ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ₹1,000-2,000 ಹೆಚ್ಚಿಸುವುದು, ಗೃಹ ನಿರ್ಮಾಣಕ್ಕೆ ಮುಂಗಡವಾಗಿ 40 ಲಕ್ಷದಿಂದ 65 ಲಕ್ಷದವರೆಗೆ ಹೆಚ್ಚಳ ಮಾಡುವುದು.
ನೌಕರರ ಅವಲಂಬಿತ ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯ ಸಮಯದಲ್ಲಿ ಶೇಕಡ 50ರಷ್ಟು ವೇತನದೊಂದಿಗೆ 180 ದಿನಗಳ ಆರೈಕೆ ರಜೆ. ಸರ್ಕಾರಿ ಸೇವೆಗೆ ಸೇರುವ ಎರಡು ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ್ದ ಮಹಿಳಾ ನೌಕರರಿಗೆ 18 ವಾರಗಳು ಹೆರಿಗೆ ರಜೆ ನೀಡುವುದು ಸೇರಿ ಹಲವು ಶಿಫಾರಸುಗಳನ್ನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು.












Click it and Unblock the Notifications