ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿತರಿಗಿಂತ ಡಿಸ್ಚಾರ್ಜ್ ಆದವರು ಹೆಚ್ಚು
ಬೆಂಗಳೂರು, ಅಕ್ಟೋಬರ್ 05: ಕರ್ನಾಟಕದಲ್ಲಿ ಇಂದು 7051 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ.
ಇಂದು 7064 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಂದೇ ದಿನದಲ್ಲಿ 84 ಮಂದಿ ಮೃತಪಟ್ಟಿದ್ದಾರೆ., ಒಟ್ಟು 647712 ಕೊರೊನಾ ಸೋಂಕಿತರಿದ್ದಾರೆ. 115477 ಸಕ್ರಿಯ ಪ್ರಕರಣಗಳಿವೆ.

ಇದುವರೆಗೂ 522846 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, 9370 ಮಂದಿ ಸಾವನ್ನಪ್ಪಿದ್ದಾರೆ. 841 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ 159, ಬಳ್ಳಾರಿ-170, ಬೆಳಗಾವಿ 142, ಬೆಂಗಳೂರು ಗ್ರಾಮಾಂತರ 141, ಬೆಂಗಳೂರು ನಗರ 2189, ಬೀದರ್ 23, ಚಾಮರಾಜನಗರ 6, ಚಿಕ್ಕಬಳ್ಳಾಪುರ 92, ಚಿಕ್ಕಮಗಳೂರು 108, ಚಿತ್ರದುರ್ಗ 276, ದಕ್ಷಿಣ ಕನ್ನಡ 245, ದಾವಣಗೆರೆ 178, ಧಾರವಾಡ 79, ಗದಗ 51, ಹಾಸನ 537, ಹಾವೇರಿ 73, ಕಲಬುರಗಿ 127, ಕೊಡಗು 47, ಕೋಲಾರ 147, ಕೊಪ್ಪಳ 36, ಮಂಡ್ಯ 227, ಮೈಸೂರು 910, ರಾಯಚೂರು 121, ರಾಮನಗರ 89, ಶಿವಮೊಗ್ಗ 160, ತುಮಕೂರು 294, ಉಡುಪಿ 118, ಉತ್ತರ ಕನ್ನಡ 64, ವಿಜಯಪುರ 136, ಯಾದಗಿರಿ 46 ಪ್ರಕರಣಗಳಿವೆ.












Click it and Unblock the Notifications