ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 7040 ಮಂದಿಗೆ ಕೊವಿಡ್-19 ಪಾಸಿಟಿವ್!

ಬೆಂಗಳೂರು, ಆಗಸ್ಟ್.16: ಕರ್ನಾಟಕದಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 7040 ಜನರಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

Recommended Video

      ಗಣಪತಿ ವಿಗ್ರಹ ತಯಾರಿಸುವ ಧಾರವಾಡದ ಕಲಾವಿದನ ಕೂಗು | Oneindia Kannada

      ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 226966ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ಒಂದೇ ದಿನ 124 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 3947ಕ್ಕೆ ಏರಿಕೆಯಾಗಿದೆ.

      ಇನ್ನು, ಕಳೆದ 24 ಗಂಟೆಗಳಲ್ಲಿ 6680 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಒಟ್ಟು 141491 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 81512 ಸಕ್ರಿಯ ಪ್ರಕರಣಗಳಿರುವ ಬಗ್ಗೆ ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ.

      ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊವಿಡ್ ಟೆಸ್ಟ್?

      ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊವಿಡ್ ಟೆಸ್ಟ್?

      ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 18352 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 25274 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 43626 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 20,37,386 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

      ಸಿಲಿಕಾನ್ ಸಿಟಿಯಲ್ಲಿ 2131 ಮಂದಿಗೆ ಕೊರೊನಾವೈರಸ್

      ಸಿಲಿಕಾನ್ ಸಿಟಿಯಲ್ಲಿ 2131 ಮಂದಿಗೆ ಕೊರೊನಾವೈರಸ್

      ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 2000ದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ ಸಿಲಿಕಾನ್ ಸಿಟಿಯಲ್ಲಿ 2131 ಜನರಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ರಾಜ್ಯ ರಾಜಧಾನಿಯಲ್ಲೇ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 89811ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 49 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1444ಕ್ಕೆ ಏರಿಕೆಯಾಗಿದೆ.

      ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

      ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

      ರಾಜ್ಯದಲ್ಲಿ ಒಟ್ಟು 7040 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 2131, ಮೈಸೂರು 620, ಬೆಳಗಾವಿ 478, ಬಳ್ಳಾರಿ 381, ಕಲಬುರಗಿ 285, ಧಾರವಾಡ 268, ಉಡುಪಿ 237, ಯಾದಗಿರಿ 236, ದಕ್ಷಿಣ ಕನ್ನಡ 229, ದಾವಣಗೆರೆ 218, ಕೊಪ್ಪಳ 211, ರಾಯಚೂರು 183, ತುಮಕೂರು 169, ವಿಜಯಪುರ 158, ಬಾಗಲಕೋಟೆ 156, ಹಾಸನ 145, ಬೀದರ್ 119, ಚಿಕ್ಕಬಳ್ಳಾಪುರ 98, ಮಂಡ್ಯ 91, ಕೋಲಾರ 90, ಬೆಂಗಳೂರು ಗ್ರಾಮಾಂತರ 87, ಗದಗ 79, ಹಾವೇರಿ 76, ಚಿತ್ರದುರ್ಗ 71, ಚಿಕ್ಕಮಗಳೂರು 69, ಉತ್ತರ ಕನ್ನಡ 61, ಚಾಮರಾಜ ನಗರ 36, ರಾಮನಗರ 32, ಕೊಡಗು 25, ಶಿವಮೊಗ್ಗ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      24 ಗಂಟೆಗಳಲ್ಲಿ 6680 ಸೋಂಕಿತರು ಗುಣಮುಖ

      24 ಗಂಟೆಗಳಲ್ಲಿ 6680 ಸೋಂಕಿತರು ಗುಣಮುಖ

      ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 6680 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರ 2356, ಬಳ್ಳಾರಿ 704, ಬೆಳಗಾವಿ 410, ಮೈಸೂರು 386, ಕಲಬುರಗಿ 322, ಹಾಸನ 309, ಉಡುಪಿ 259, ಧಾರವಾಡ 200, ಕೊಪ್ಪಳ 195, ವಿಜಯಪುರ 185, ಕೋಲಾರ 160, ದಕ್ಷಿಣ ಕನ್ನಡ 128, ಉತ್ತರ ಕನ್ನಡ 110, ದಾವಣಗೆರೆ 109, ಮಂಡ್ಯ 109, ಹಾವೇರಿ 98, ತುಮಕೂರು 91, ಬೀದರ್ 73, ಚಿಕ್ಕಬಳ್ಳಾಪುರ 73, ರಾಯಚೂರು 71, ಚಾಮರಾಜನಗರ 70, ಗದಗ 70, ಬಾಗಲಕೋಟೆ 44, ಯಾದಗಿರಿ 38, ಚಿಕ್ಕಮಗಳೂರು 37, ಕೊಡಗು 27, ಬೆಂಗಳೂರು ಗ್ರಾಮಾಂತರ 20, ರಾಮನಗರ 20, ಶಿವಮೊಗ್ಗ 06 ಮಂದಿ ಗುಣಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+