ಕರ್ನಾಟಕದಲ್ಲಿ ಸಾವಿನ ಭೀತಿ ಹುಟ್ಟು ಹಾಕಿದ ಕೊರೊನಾವೈರಸ್!
ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಕೊರೊನಾವೈರಸ್ ಸಾವಿನ ಭೀತಿ ಹುಟ್ಟು ಹಾಕುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿಗೆ 36 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲೇ 22 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 12767ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ 6570 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 2393 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 973949 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ: ಬಿಜೆಪಿ ಆಡಳಿತದ ರಾಜ್ಯಗಳಿಗೆ ಹೆಚ್ಚು ಡೋಸ್ ಪೂರೈಕೆ
ಗುರುವಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 1040130 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 53395 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಕೇಸ್?
ರಾಜ್ಯದಲ್ಲಿ ಒಟ್ಟು 6570 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 21, ಬಳ್ಳಾರಿ 126, ಬೆಳಗಾವಿ 92, ಬೆಂಗಳೂರು ಗ್ರಾಮಾಂತರ 54, ಬೆಂಗಳೂರು 4422, ಬೀದರ್ 129, ಚಾಮರಾಜನಗರ 56, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 40, ಚಿತ್ರದುರ್ಗ 24, ದಕ್ಷಿಣ ಕನ್ನಡ 145, ದಾವಣಗೆರೆ 28, ಧಾರವಾಡ 96, ಗದಗ 18, ಹಾಸನ 94, ಹಾವೇರಿ 15, ಕಲಬುರಗಿ 240, ಕೊಡಗು 19, ಕೋಲಾರ 60, ಕೊಪ್ಪಳ 27, ಮಂಡ್ಯ 29, ಮೈಸೂರು 216, ರಾಯಚೂರು 40, ರಾಮನಗರ 10, ಶಿವಮೊಗ್ಗ 70, ತುಮಕೂರು 183, ಉಡುಪಿ 63, ಉತ್ತರ ಕನ್ನಡ 142, ವಿಜಯಪುರ 60, ಯಾದಗಿರಿ 26 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.