ಕರ್ನಾಟಕದಲ್ಲಿ 6297 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಅಕ್ಟೋಬರ್ 20 : ಕರ್ನಾಟಕದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 7,76,901ಕ್ಕೆ ಏರಿಕೆಯಾಗಿದೆ. ಮಂಗಳವಾರ ರಾಜ್ಯದಲ್ಲಿ 6297 ಹೊಸ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 8500 ಜನರು ಆಸ್ಪತ್ರೆಯಿಂದ ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ.
ಮಂಗಳವಾರ ರಾಜ್ಯದಲ್ಲಿ 66 ಜನರು ಮೃತಪಟ್ಟಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 10608. ಐಸಿಯುನಲ್ಲಿ 941 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 103945. ಇದುವರೆಗೂ ರಾಜ್ಯದಲ್ಲಿ 662329 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಸೋಕಿನಿಂದ ಮೃತಪಟ್ಟವರ ಪ್ರಮಾಣ ಶೇ 1.04.
ರಾಜ್ಯದಲ್ಲಿ ಮಂಗಳವಾರ 23,373 ಆಂಟಿಜೆಟ್ ಪರೀಕ್ಷೆ, 74,863 ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗಿದೆ. ಒಟ್ಟು ಪರೀಕ್ಷೆ ಮಾಡಿದ ಮಾದರಿಗಳ ಸಂಖ್ಯೆ 98,236. ಇದುವರೆಗೂ ರಾಜ್ಯದಲ್ಲಿ 68,44,594 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರು ನಗರದಲ್ಲಿ ಮಂಗಳವಾರ 2821 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,12,842ಕ್ಕೆ ಏರಿಕೆಯಾಗಿದೆ. ನಗರದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 64,523.
ಮಂಗಳವಾರ ಬೆಂಗಳೂರು ಗ್ರಾಮಾಂತರದಲ್ಲಿ 319, ಬಳ್ಳಾರಿಯಲ್ಲಿ 188, ದಾವಣಗೆರೆಯಲ್ಲಿ 206, ಚಿಕ್ಕಬಳ್ಳಾಪುರದಲ್ಲಿ 166, ಹಾಸನದಲ್ಲಿ 249 ಹೊಸ ಪ್ರಕರಣಗಳು ದಾಖಲಾಗಿವೆ.
ಉತ್ತರ ಕನ್ನಡದಲ್ಲಿ 180, ವಿಜಯಪುರದಲ್ಲಿ 80, ಶಿವಮೊಗ್ಗದಲ್ಲಿ 116, ಮೈಸೂರಿನಲ್ಲಿ 451, ಮಂಡ್ಯದಲ್ಲಿ 108, ಧಾರರವಾಡದಲ್ಲಿ 104 ಹೊಸ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.












Click it and Unblock the Notifications