ಸಮೀಕ್ಷೆ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಭರ್ಜರಿ ಬೆಂಬಲ

ಬೆಂಗಳೂರು, ಮಾರ್ಚ್ 26: ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿರುವ ಕರ್ನಾಟಕ ಸರಕಾರದ ತೀರ್ಮಾನವನ್ನು ಲಿಂಗಾಯತ ಮತದಾರರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಸಿ-ಫೋರ್ ಸಂಸ್ಥೆ ನಡೆಸಿದ ಹೊಸ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಈ ಮಾಹಿತಿಗಳು ಬಹಿರಂಗವಾಗಿವೆ.

ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಶೇಕಡಾ 61 ರಷ್ಟು ಲಿಂಗಾಯತ ಮತದಾರರು ಬೆಂಬಲಿಸಿದ್ದಾರೆ. ಶೇಕಡಾ 32ರಷ್ಟು ಜನರು ಲಿಂಗಾಯತ ಪ್ರತ್ಯೇಕ ಧರ್ಮವನ್ನು ವಿರೋಧಿಸಿದ್ದಾರೆ.

ಇನ್ನು ಶೇಕಡಾ 7ರಷ್ಟು ಜನರು ಮಾತ್ರ ಇದರ ಬಗ್ಗೆ ನಮ್ಮದೇನೂ ಅಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.

 61 per cent Lingayats back religious minority tag says survey

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+