Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಹಿಂಸಾಚಾರದಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ 6 ಪಟ್ಟು ಹೆಚ್ಚಳ

ಬೆಂಗಳೂರು, ಜನವರಿ 14: 2018ರಿಂದ ಕರ್ನಾಟಕದಲ್ಲಿ ವಿವಿಧ ಹಿಂಸಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಸಂಖ್ಯೆ ಆರು ಪಟ್ಟು ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 2022ರಲ್ಲಿ 10,346 ಜನರು ಹಿಂಸಾತ್ಮಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 2018 ರಲ್ಲಿ ಈ ಸಂಖ್ಯೆ 1,666 ಆಗಿತ್ತು ಎಂದು ತಿಳಿಸಿವೆ. ಈ ಸಂಖ್ಯೆಯು 2019ರಲ್ಲಿ 1,716ಕ್ಕೆ ಕನಿಷ್ಠಗೊಂಡಿತ್ತು. 2020ರಲ್ಲಿ, 7,874 ವ್ಯಕ್ತಿಗಳು ಮತ್ತು 2021ರಲ್ಲಿ ಇದು 2,843 ವ್ಯಕ್ತಿಗಳು. 2022ರಲ್ಲೇ ಈ ಸಂಖ್ಯೆ 10,346ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯಾದ್ಯಂತ ದಾಖಲಾದ ಹಿಂಸಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ 290ಕ್ಕಿಂತ ಕಡಿಮೆಯಾಗಿದೆ. 2019 ರಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳು 161 ದಾಖಲಾಗಿವೆ ಮತ್ತು ಅತಿ ಹೆಚ್ಚು ಪ್ರಕರಣಗಳು 2020 ರಲ್ಲಿ 291 ಪ್ರಕರಣಗಳು ದಾಖಲಾಗಿವೆ. ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯವು ಹಿಜಾಬ್ ಪ್ರತಿಭಟನೆ, ಸಮೀರವಾಡಿ ಸಕ್ಕರೆ ಕಾರ್ಖಾನೆ ಪ್ರತಿಭಟನೆ, ಮತ ಎಣಿಕೆಯ ದಿನದಂದು ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡ ಚುನಾವಣಾ ಸಂಬಂಧಿತ ಹಿಂಸಾಚಾರ, ಮತಾಂತರದ ಪರ ಮತ್ತು ವಿರೋಧಿ, ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ನಾಗೇಶ್ ಹತ್ಯೆ, ಸಾವರ್ಕರ್ ಫ್ಲೆಕ್ಸ್ ವಿಚಾರ ಹಾಗೂ ಹರ್ಷ ಹತ್ಯೆ ಪ್ರಕರಣ, ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಮುಸ್ಲಿಮರ ನಡುವಿನ ಹಿಂಸಾಚಾರದಂತಹ ಹಲವಾರು ಹಿಂಸಾಚಾರ ಪ್ರಕರಣಗಳಿಗೆ ಸಾಕ್ಷಿಯಾಗಿದೆ.

6 times increase in number of people involved in violence in Karnataka

ರಾಜ್ಯದಲ್ಲಿ ದಾಖಲಾದ ಸರಾಸರಿ 250 ಹಿಂಸಾಚಾರ ಪ್ರಕರಣಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಸತತವಾಗಿ 120 ರಿಂದ 180 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಕಳೆದ ಐದು ವರ್ಷಗಳಿಂದ ಮೈಸೂರು ಇಂತಹ ಪ್ರಕರಣಗಳಲ್ಲಿ ವಾರ್ಷಿಕವಾಗಿ ಸರಾಸರಿ 700ರಿಂದ 1,000 ವ್ಯಕ್ತಿಗಳನ್ನು ತೊಡಗಿಸಿಕೊಂಡಿದೆ ಎಂದು ಡಿಎಚ್‌ ವರದಿ ಮಾಡಿದೆ.

2022ರಲ್ಲಿ ರಾಜ್ಯದಾದ್ಯಂತ 236 ಹಿಂಸಾಚಾರ ಪ್ರಕರಣಗಳಲ್ಲಿ 10,346 ಮಂದಿ ಭಾಗಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 6,000 ಜನರು ಹಿಂಸಾಚಾರಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಆದರೆ ಇದುವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿಲ್ಲ.

ಪ್ರಮುಖ ನಗರಗಳಲ್ಲಿ, ಮಂಗಳೂರಿನಲ್ಲಿ 2018ರಲ್ಲಿ 69 ಮತ್ತು 2019 ರಲ್ಲಿ 20 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ ಇದರ ನಂತರ, ನಗರದಲ್ಲಿ ಒಂದೇ ಒಂದು ಹಿಂಸಾಚಾರ ಪ್ರಕರಣ ದಾಖಲಾಗಿಲ್ಲ. ಅದೇ ರೀತಿ, 2022 ಹೊರತುಪಡಿಸಿ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ 2018, 2109, 2020 ಮತ್ತು 2021 ರಲ್ಲಿ ಒಂದೇ ಒಂದು ಹಿಂಸಾಚಾರ ಪ್ರಕರಣ ದಾಖಲಾಗಿಲ್ಲ. ಆದರೆ, ಬೆಳಗಾವಿ ನಗರದಲ್ಲಿ ಕಳೆದ ಐದು ವರ್ಷಗಳಿಂದ ವಾರ್ಷಿಕ ಸರಾಸರಿ 2-3 ಹಿಂಸಾಚಾರ ಪ್ರಕರಣಗಳಲ್ಲಿ 50ರಿಂದ 100 ವ್ಯಕ್ತಿಗಳು ದಾಖಲಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+