ಕರ್ನಾಟಕದಲ್ಲಿ ಒಂದೇ ದಿನ 5773 ಕೊರೊನಾ ಸೋಂಕಿತರು ಪತ್ತೆ, 141 ಮಂದಿ ಸಾವು
ಬೆಂಗಳೂರು, ಸೆಪ್ಟೆಂಬರ್ 07: ಕರ್ನಾಟಕದಲ್ಲಿ ಒಂದೇ ದಿನ 5773 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಗಳಲ್ಲಿ 141 ಮಂದಿ ಮೃತಪಟ್ಟಿದ್ದಾರೆ.
Recommended Video
ಒಟ್ಟು 4,043,24 ಕೊರೊನಾ ಸೋಂಕಿತರಿದ್ದಾರೆ,97,001 ಸಕ್ರಿಯ ಪ್ರಕರಣಗಳಿವೆ, ಇದುವರೆಗೆ 6534 ಮಂದಿ ಮೃತಪಟ್ಟಿದ್ದಾರೆ. 794 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ126,, ಬಳ್ಳಾರಿ 266, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 77,ಬೆಂಗಳೂರು ನಗರ 2942, ಬೀದರ್ 32, ಚಾಮರಾಜನಗರ 20, ಚಿಕ್ಕಬಳ್ಳಾಪುರ 82, ಚಿಕ್ಕಮಗಳೂರು 101, ಚಿತ್ರದುರ್ಗ 50, ದಕ್ಷಿಣ ಕನ್ನಡ 152,ದಾವಣಗೆರೆ 199, ಧಾರವಾಡ 29, ಗದಗ 87,ಹಾಸನ 128,ಹಾವೇರಿ 53,ಕಲಬುರಗಿ141, ಕೊಡಗು 11,ಕೋಲಾರ 26, ಕೊಪ್ಪಳ139, ಮಂಡ್ಯ 169,ಮೈಸೂರು 221,, ರಾಯಚೂರು 22, ರಾಮನಗರ11,ಶಿವಮೊಗ್ಗ 150, ತುಮಕೂರು 25,ಉಡುಪಿ 113, ಉತ್ತರ ಕನ್ನಡ 77,ವಿಜಯಪುರ 112,ಯಾದಗಿರಿ 1327 ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 90,802 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.












Click it and Unblock the Notifications