ಕರ್ನಾಟಕದಲ್ಲಿ ಒಂದೇ ದಿನ 50,000 ಗಡಿ ದಾಟಿದ ಕೊರೊನಾವೈರಸ್
ಬೆಂಗಳೂರು, ಮೇ 05: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಗೆ ಕರ್ನಾಟಕಕ್ಕೆ ಕರ್ನಾಟಕವೇ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಹಿಂದೆಂದೂ ದಾಖಲಾಗದಷ್ಟು ಕೊವಿಡ್-19 ಪ್ರಕರಣಗಳು ಕಳೆದ 24 ಗಂಟೆಗಳಲ್ಲೇ ವರದಿಯಾಗಿವೆ.
ಕರ್ನಾಟಕದಲ್ಲಿ ಒಂದೇ ದಿನ 50112 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ 346 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 26841 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1741046 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಈವರೆಗೂ 12,36,854 ಸೋಂಕಿತರು ಗುಣಮುಖರಾಗಿದ್ದು, 16,884 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 4,87,288 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ:
ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 23106 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 8,63,380ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 161 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 7006ಕ್ಕೆ ಏರಿಕೆಯಾಗಿದೆ. 3,13,314 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆವಾರು ಕೊರೊನಾವೈರಸ್ ಪ್ರಕರಣ?:
ರಾಜ್ಯದಲ್ಲಿ ಒಟ್ಟು 50112 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 1033, ಬೆಂಗಳೂರು ಗ್ರಾಮಾಂತರ 996, ಬೆಂಗಳೂರು 23106, ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152, ದಕ್ಷಿಣ ಕನ್ನಡ 1529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1604, ಹಾವೇರಿ 224, ಕಲಬುರಗಿ 1097, ಕೊಡಗು 768, ಕೋಲಾರ 1115, ಕೊಪ್ಪಳ 182, ಮಂಡ್ಯ 1621, ಮೈಸೂರು 2790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2335, ಉಡುಪಿ 1655, ಉತ್ತರ ಕನ್ನಡ 849, ವಿಜಯಪುರ 513, ಯಾದಗಿರಿ 739 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications