Breaking; ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಪ್ರಕರಣ ಪತ್ತೆ

ಬೆಂಗಳೂರು, ಡಿಸೆಂಬರ್ 20; ಕರ್ನಾಟಕದಲ್ಲಿ ಮತ್ತೆ 5 ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ಸಹ ರಾಜ್ಯದಲ್ಲಿಯೇ ದಾಖಲಾಗಿತ್ತು.

ಸೋಮವಾರ ಬೆಳಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 19ರಂದು ರಾಜ್ಯದಲ್ಲಿ 5 ಹೊಸ ಓಮಿಕ್ರಾನ್ ಪ್ರಕರಣಗಳು ಖಚಿತವಾಗಿವೆ ಎಂದು ಹೇಳಿದ್ದಾರೆ. ಧಾರವಾಡ, ಭದ್ರಾವತಿ ಮತ್ತು ಮಂಗಳೂರಿನಲ್ಲಿ ತಲಾ ಒಂದು ಮತ್ತು ಉಡುಪಿಯಲ್ಲಿ 2 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಇದುವರೆಗೂ 11 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 150 ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 54 ಪ್ರಕರಣಗಳು ದಾಖಲಾಗಿವೆ.

5 New Omicron Cases Found In Karnataka

ಭಾನುವಾರದ ತನಕ ಕರ್ನಾಟಕದಲ್ಲಿ 14 ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಈಗ ಪುನಃ 5 ಹೊಸ ಪ್ರಕರಣ ಪತ್ತೆಯಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು?; ಮಹಾರಾಷ್ಟ್ರ 54, ದೆಹಲಿ 22, ತೆಲಂಗಾಣ 20, ರಾಜಸ್ಥಾನ 17, ಗುಜರಾತ್ 11, ಕೇರಳ 11, ಆಂಧ್ರ ಪ್ರದೇಶ 1, ಚಂಡೀಗಢ್ 1, ತಮಿಳುನಾಡು 1, ಪಶ್ಚಿಮ ಬಂಗಾಳ 1 ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಹೊಸ ಪ್ರಕರಣಗಳು; ಆರೋಗ್ಯ ಸಚಿವರು ಮಾಡಿರುವ ಟ್ವೀಟ್‌ನಂತೆ ರಾಜ್ಯದಲ್ಲಿ ದಾಖಲಾದ ಹೊಸ ಪ್ರಕರಣಗಳ ಮಾಹಿತಿ ಹೀಗಿದೆ

* ಧಾರವಾಡ 54 ವರ್ಷದ ಪುರುಷ
* ಭದ್ರಾವತಿ 20 ವರ್ಷ ವಯಸ್ಸಿನ ಯುವತಿ
* ಉಡುಪಿ 82 ವರ್ಷ ವಯಸ್ಸಿನ ಪುರುಷ, 73 ವರ್ಷದ ಮಹಿಳೆ
* ಮಂಗಳೂರು 19 ವರ್ಷ ವಯಸ್ಸಿನ ಯುವತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+