ಕರ್ನಾಟಕದಲ್ಲಿ ಪ್ರತಿನಿತ್ಯ 50,000 ಆಸು-ಪಾಸಿನಲ್ಲಿ ಕೊರೊನಾವೈರಸ್!

ಬೆಂಗಳೂರು, ಮೇ 06: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣ ಮೀರಿ ಹರಡುತ್ತಿದೆ. ಪ್ರತಿನಿತ್ಯ 50,000 ಮತ್ತು 50,000ಕ್ಕಿಂತಲೂ ಹೆಚ್ಚುಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆ ಆಗುತ್ತಿರುವುದುಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ.

Recommended Video

      #Covid19Updates, Karnataka: ರಾಜ್ಯದಲ್ಲಿ ಇಂದು 49058 ಜನರಿಗೆ ಸೋಂಕು | Oneindia Kannada

      ರಾಜ್ಯದಲ್ಲಿ ಒಂದೇ ದಿನ 49058 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ 328 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 18943 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

      ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1790104 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 12,55,797 ಸೋಂಕಿತರು ಗುಣಮುಖರಾಗಿದ್ದು, 17,212ಕ್ಕೆ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 5,17,075 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

      49058 New Coronavirus Cases Reported in Karnataka Today, State Tally Rise to 1790104


      ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ:

      ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 23706 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 8,87,086ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 139 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 7145ಕ್ಕೆ ಏರಿಕೆಯಾಗಿದೆ. 3,32,732 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

      ಜಿಲ್ಲೆವಾರು ಕೊರೊನಾವೈರಸ್ ಪ್ರಕರಣ?:

      ರಾಜ್ಯದಲ್ಲಿ ಒಟ್ಟು 49058 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 655, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು 23706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1403, ಹಾವೇರಿ 236, ಕಲಬುರಗಿ 1652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1301, ಮೈಸೂರು 2531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2418, ಉಡುಪಿ 1526, ಉತ್ತರ ಕನ್ನಡ 734, ವಿಜಯಪುರ 662, ಯಾದಗಿರಿ 721 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+