ಯುವಕರ ಹುಚ್ಚಾಟ, ತಪ್ಪಿದ ರೈಲು ದುರಂತ

Posted By:
Subscribe to Oneindia Kannada

ರಾಮನಗರ, ಏಪ್ರಿಲ್ 09 : ಜೀಪ್‌ಗೆ ರೈಲು ಡಿಕ್ಕಿ ಹೊಡೆದಿದ್ದು ನಾಲ್ವರು ಯುವಕರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಗರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲು ರಾಮನಗರದ ಬಸವನಪುರ ಬಳಿ ಶನಿವಾರ ಬೆಳಗ್ಗೆ 7.20ರ ಸುಮಾರಿಗೆ ಜೀಪ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ರೈಲು ಒಂದೂವರೆ ಗಂಟೆ ತಡವಾಗಿ ಬೆಂಗಳೂರು ತಲುಪಿದೆ. [ರೈಲಿನ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿ ಸಾವು]

jeep

ಯುವಕರ ಹುಚ್ಚಾಟ : ನಾಲ್ವರು ಯುವಕರು ಮೈಸೂರು-ಬೆಂಗಳೂರು ರೈಲ್ವೆ ಹಳಿ ಮೇಲೆ ಜೀಪ್ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಮಂಗಳಾ ಎಕ್ಸ್‌ಪ್ರೆಸ್ ರೈಲು ಜೀಪಿಗೆ ಡಿಕ್ಕಿ ಹೊಡೆದಿದೆ. ಜೀಪಿನಿಂದ ಜಿಗಿದ ಯುಕವರು ಜೀವ ಉಳಿಸಿಕೊಂಡಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ. [ಪ್ರಾಣ ಬಲಿ ಪಡೆದ ಫೇಸ್ ಬುಕ್ ಫೋಟೋ ಗೀಳು]

ಹಳಿ ಮೇಲೆ ಜೀಪು ನಿಲ್ಲಿಸಿದ್ದ ಯುವಕರು ರಾಮನಗರದ ಬಂಡೆ, ಪ್ರಕೃತಿ ಸೌಂದರ್ಯದ ಫೋಟೋ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ರೈಲು ಆಗಮಿಸಿದೆ. ಹಳಿ ಮೇಲೆ ಜೀಪ್ ನೋಡಿದ ರೈಲಿನ ಚಾಲಕ ಸೈರನ್ ಹಾಕಿದ್ದಾನೆ. ರೈಲು ಬರುವುದನ್ನು ನೋಡಿದ ಯುವಕರು ಜೀಪು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ.

ಜೀಪಿಗೆ ರೈಲು ಡಿಕ್ಕಿ ಹೊಡೆಯುತ್ತಿದ್ದಂತೆ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರೂ ಸ್ಥಳಕ್ಕೆ ಆಗಮಿಸಿಲ್ಲ. ಕೊನೆಗೆ ಪ್ರಯಾಣಿಕರು ಜೀಪ್‌ ಅನ್ನು ಹಳಿಯಿಂದ ತೆಗೆದು ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
4 youths escaped death narrowly after a jeep was hit by train near Basavanapura, Ramanagar on Saturday, April 9th, 2016 morning.
Please Wait while comments are loading...