ರಾಜ್ಯದಲ್ಲಿಂದು 322 ಕೊರೊನಾ ಕೇಸ್ ಪತ್ತೆ, ಬೆಂಗಳೂರು ಟಾಪ್
ಬೆಂಗಳೂರು, ಜೂನ್ 23: ಕರ್ನಾಟಕದಲ್ಲಿಂದು 322 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 9721ಕ್ಕೆ ಏರಿದೆ. ಬೆಂಗಳೂರಿನಲ್ಲಿ ಇಂದು ಸಹ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು 107 ಪ್ರಕರಣ ದಾಖಲಾಗಿದೆ.
ಬಳ್ಳಾರಿಯಲ್ಲಿ 53 ಕೇಸ್, ಬೀದರ್‌ನಲ್ಲಿ 22 ಕೇಸ್, ಮೈಸೂರಿನಲ್ಲಿ 21 ಪ್ರಕರಣ, ವಿಜಯಪುರ 16 ಪ್ರಕರಣ, ಯಾದಗಿರಿಯಲ್ಲಿ 13 ಕೇಸ್, ಉಡುಪಿಯಲ್ಲಿ 11 ಕೇಸ್ ಸೇರಿದಂತೆ ಒಟ್ಟು 322 ಜನರಿಗೆ ಸೋಂಕು ತಗುಲಿದೆ.

ಇಂದು ಒಟ್ಟು 274 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 6004 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 3563 ಕೇಸ್‌ಗಳು ಸಕ್ರಿಯವಾಗಿದೆ.
ಇಂದು ಒಂದೇ ದಿನ 8 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 150. ಇನ್ನು 122 ಮಂದಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications