ಮಂಡ್ಯ ಮೊರಾರ್ಜಿ ದೇಸಾಯಿ ಶಾಲೆಯ 3 ಮಕ್ಕಳನ್ನು ನೋಡಿದ್ದೀರಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಜನವರಿ, 22: 'ಹೆತ್ತವರು ಕೈಯಲ್ಲಿ ಫೋಟೋ ಹಿಡಿದು ನನ್ನ ಈ ಮಕ್ಕಳನ್ನು ಎಲ್ಲಿಯಾದರೂ ನೋಡಿದ್ದೀರಾ? ದಯವಿಟ್ಟು ಎಲ್ಲಿಯಾದರೆ ಕಂಡರೆ ಮರೆಯದೆ ನಮಗೆ ತಿಳಿಸಿ' ಎಂದು ಮಂಡ್ಯದ ಮೊರಾರ್ಜಿ ದೇಸಾಯಿ ಶಾಲೆಯಿಂದ ನಾಪತ್ತೆಯಾದ ಮಕ್ಕಳ ಪೋಷಕರು ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ.

ಮಂಡ್ಯದ ತುಂಬಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಂಜಿತ್ ಗೌಡ (13), ಎಸ್.ಆರ್.ದೀಕ್ಷಿತ್(13) ಹಾಗೂ ನಂದನ್ ಕುಮಾರ್(13) ಎಂಬ ಮೂವರು ಮಕ್ಕಳು ನಾಪತ್ತೆಯಾಗಿದ್ದು, ವಸತಿ ಶಾಲಾ ಶಿಕ್ಷಕರು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ನಾಪತ್ತೆಯಾದ ರಂಜಿತ್, ಎಸ್.ಆರ್.ದೀಕ್ಷಿತ್ ಹಾಗೂ ನಂದನ್ ಕುಮಾರ್ ಮಂಡ್ಯದ ತುಂಬಕೆರೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಓದಲು ಇಷ್ಟವಿಲ್ಲದ ಮಕ್ಕಳು ಬಹುಶಃ ಮಾತನಾಡಿಕೊಂಡೇ ಶಾಲೆಯಿಂದ ಹೊರ ಹೋಗಲು ನಿರ್ಧರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

Mandya

ಜ.19ರ ಮಂಗಳವಾರದಂದು ಬೆಳಗ್ಗೆ 8.30ರ ಸಮಯದಲ್ಲಿ ಬೆಳಗಿನ ಉಪಹಾರ ಮುಗಿಸಿ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹೇಳಿ ಹೊರ ಹೋದ ವಿದ್ಯಾರ್ಥಿಗಳು ಮರಳಿ ಬಂದಿಲ್ಲ. ಬಹಳಷ್ಟು ಹೊತ್ತು ಕಾದರೂ ಸುಳಿವಿಲ್ಲ. ಹೀಗಾಗಿ ಪೋಷಕರಿಗೆ ದೂರವಾಣೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿಗೂ ಹೋಗಿಲ್ಲ ಎಂಬ ಉತ್ತರ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಪೋಷಕರು ಭಯಭೀತರಾಗಿದ್ದು, ಮಕ್ಕಳನ್ನು ಹುಡುಕಲು ಮುಂದಾಗಿದ್ದಾರೆ. ಆದರೆ ಈ ವಿದ್ಯಾರ್ಥಿಗಳ ಬಗ್ಗೆ ಎಲ್ಲಿಯೂ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಶಾಲಾ ಮುಖ್ಯ ಶಿಕ್ಷಕರು ನೀಡಿದ ದೂರಿನ ಮೇರೆಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

ರಂಜಿತ್ ಗೌಡನ ಕುರಿತು ಮಾಹಿತಿ:

ರಂಜಿತ್ ಗೌಡ ಸುಮಾರು 3.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ತಲೆಯಲ್ಲಿ ಕೂದಲು ಕಡಿಮೆ ಇರುತ್ತದೆ. ತೆಳುವಾದ ಶರೀರ, ಕೆಂಪು ಟೀ ಶರ್ಟ್, ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ.

Mandya

ದೀಕ್ಷಿತ್ ಎಸ್.ಆರ್ ಬಗ್ಗೆ ಮಾಹಿತಿ:

ದೀಕ್ಷಿತ್ ಎಸ್.ಆರ್. ಸುಮಾರು 4.5 ಅಡಿ ಎತ್ತರ, ಕ್ರೀಮ್ ಬಣ್ಣದ ಅರ್ಧ ತೋಳಿನ ಅಂಗಿ, ಹಾಗೂ ಕಾಫಿ ಬಣ್ಣದ ಪ್ಯಾಂಟ್, ಶಾಲಾ ಸಮವಸ್ತ್ರ ಧರಿಸಿರುತ್ತಾನೆ. ಹಣೆಯ ಮೇಲೆ ಹಳೆ ಗಾಯದ ಗುರುತು ಇದೆ.[ಅತ್ಯಾಚಾರ ಎಸಗಿದ ತಂದೆಗೆ ಮಕ್ಕಳ ನೋಡಲು ಅವಕಾಶ ನೀಡಿದ್ದು ಸರಿಯೇ?]

Mandya

ನಂದನ್ ಕುಮಾರ್ ಕುರಿತು ಮಾಹಿತಿ

ನಂದನ್ ಕುಮಾರ್ ಸುಮಾರು 5 ಅಡಿ ಎತ್ತರ, ಕೋಲು ಮುಖ, ಗೋಧಿ ಬಣ್ಣ, ಕ್ರಾಪ್ ಕೂದಲು ಬಾಚಿರುತ್ತಾನೆ. ತೆಳುವಾದ ಶರೀರ, ಕ್ರೀಮ್ ಬಣ್ಣದ ಅರ್ಧ ತೋಳಿನ ಅಂಗಿ, ಕಾಫಿ ಬಣ್ಣದ ಪ್ಯಾಂಟ್, ಶಾಲಾ ಸಮವಸ್ತ್ರ ಧರಿಸಿದ್ದಾನೆ. ಮೂವರು ಕನ್ನಡ ಮಾತನಾಡುತ್ತಾರೆ. ಇದಿಷ್ಟು ಚಹರೆ ಹೊಂದಿರುವ ಮಕ್ಕಳು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.[ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three children Ranjith gowda(13)Deekshit S.R(13) Nandan Kumar (13)escaped from morarji desayi school Tumbakere, Mandya on Tuesday January 19th.
Please Wait while comments are loading...