ಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣ ದಾಖಲು
ಬೆಂಗಳೂರು, ಏಪ್ರಿಲ್ 23: ಕರ್ನಾಟಕದಲ್ಲಿ ಶುಕ್ರವಾರ 26962 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರ ಪ್ರದೇಶವೊಂದರಲ್ಲೇ 16662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿನಿಂದಾಗಿ 190 ಮಂದಿ ಸಾವನ್ನಪ್ಪಿದ್ದು, 8697 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 14075 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 1046554 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 1274959 ಪ್ರಕರಣಗಳು ದಾಖಲಾಗಿದ್ದು, ಸದ್ಯ 214311 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೋವಿಡ್ ಪ್ರಕರಣ: ಬಾಗಲಕೋಟೆ 88, ಬಳ್ಳಾರಿ 695, ಬೆಳಗಾವಿ 220, ಬೆಂಗಳೂರು ಗ್ರಾಮಾಂತರ 588, ಬೆಂಗಳೂರು ನಗರ 16662, ಬೀದರ್ 416, ಚಾಮರಾಜನಗರ 249, ಚಿಕ್ಕಬಳ್ಳಾಪುರ 471, ಚಿಕ್ಕಮಗಳೂರು 229, ಚಿತ್ರದುರ್ಗ 113, ದಕ್ಷಿಣ ಕನ್ನಡ 485, ದಾವಣಗೆರೆ 200, ಧಾರವಾಡ 472, ಗದಗ 74, ಹಾಸನ 248, ಹಾವೇರಿ 74, ಕಲಬುರಗಿ 742, ಕೊಡಗು 295, ಕೋಲಾರ 504, ಕೊಪ್ಪಳ 84, ಮಂಡ್ಯ 519, ಮೈಸೂರು 645, ರಾಯಚೂರು 428, ರಾಮನಗರ 206, ಶಿವಮೊಗ್ಗ 225, ತುಮಕೂರು 1004, ಉಡುಪಿ 282, ಉತ್ತರ ಕನ್ನಡ 181, ವಿಜಯಪುರ 429, ಯಾದಗಿರಿ 114 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications