ಸರ್ಕಾರಿ ಕೋಟಾದಡಿ ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ಕೋರ್ಸ್ ಸೀಟುಗಳು 25% ಏರಿಕೆ- KEA
ಬೆಂಗಳೂರು ಅಕ್ಟೋಬರ್ 8: ಸರ್ಕಾರಿ ಕೋಟಾದಡಿ ಪದವಿಪೂರ್ವ ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಸೀಟುಗಳಲ್ಲಿ ಈ ವರ್ಷ 25% ಹೆಚ್ಚಳವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತಿಳಿಸಿದೆ. 2021-22ರಲ್ಲಿ ಈ ಕೋರ್ಸ್‌ಗಳ ಸೀಟುಗಳ ಸಂಖ್ಯೆ 21,804 ಆಗಿದ್ದರೆ, 2022-23ಕ್ಕೆ 27,193ಕ್ಕೆ ಹೆಚ್ಚಾಗಲಿದೆ.
2022-23ಕ್ಕೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (CSE) ಸೀಟುಗಳು 1349 ರಷ್ಟು ಹೆಚ್ಚಾದರೆ, CSE-ಡೇಟಾ ಸೈನ್ಸ್‌ನಲ್ಲಿ 1,008 ಸೀಟುಗಳು ಹೆಚ್ಚಾಗಿವೆ, CSE-AI, ಮಷಿನ್ ಲರ್ನಿಂಗ್ ಸೀಟುಗಳು (machine learning seats)725, AI ಮತ್ತು ML 526, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ (information science and engineering) 410, AI ಮತ್ತು ಡೇಟಾ ವಿಜ್ಞಾನ (AI and data science) 395 ಮತ್ತು CSE-ಇಂಟರ್ನೆಟ್ ಆಫ್ ಥಿಂಗ್ಸ್ (CSE-Internet of Things) 381 ರಷ್ಟು ಸೀಟುಗಳು ಏರಿಕೆಯಾಗಲಿದೆ.
ಹೊಸ ಕೋರ್ಸ್‌ಗಳಲ್ಲಿ CS - ಮಾಹಿತಿ ತಂತ್ರಜ್ಞಾನ - ಸೈಬರ್ ಭದ್ರತೆ (72 ಸ್ಥಾನಗಳು), CS - ರೊಬೊಟಿಕ್ ಎಂಜಿನಿಯರಿಂಗ್- AI ಮತ್ತು ML (72) ಮತ್ತು CSE IoT, ಬ್ಲಾಕ್‌ಚೈನ್ ಸೇರಿದಂತೆ (24) ಸೀಟುಗಳು ಇದರಲ್ಲಿ ಸೇರಿವೆ. ಜೊತೆಗೆ ಮಾಹಿತಿ ತಂತ್ರಜ್ಞಾನವು 26 ಸೀಟುಗಳನ್ನು ಕಳೆದುಕೊಂಡಿದೆ ಮತ್ತು ರೊಬೊಟಿಕ್ಸ್ 12 ಸೀಟುಗಳನ್ನು ಕಳೆದುಕೊಂಡಿದೆ.

UG ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಒಟ್ಟು 1,11,882 ಸೀಟುಗಳಿವೆ. ಕಳೆದ ವರ್ಷ ಈ ಸೀಟುಗಳ ಸಂಖ್ಯೆ 1,08,218 ಆಗಿತ್ತು. ಈ ವರ್ಷ, 53,248 ಸಿಇಟಿ ಸೀಟುಗಳು, 25,171 ಕಾಮೆಡ್‌ಕೆ ಸೀಟುಗಳು ಮತ್ತು 33,463 ಮ್ಯಾನೇಜ್‌ಮೆಂಟ್ ಸೀಟುಗಳಿದೆ. ಇದಲ್ಲದೆ, 4,607 ಸೂಪರ್‌ನ್ಯೂಮರರಿ ಕೋಟಾ ಸೀಟುಗಳು ಸಹಾ ಇವೆ. ಈ ವರ್ಷ ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ 210 ಕಾಲೇಜುಗಳಿವೆ. ಕಳೆದ ವರ್ಷ ಕಾಲೇಜುಗಳ ಸಂಖ್ಯೆ 206 ಇತ್ತು.
''ಈ ಬಾರಿ ನಾಲ್ಕು ಹೆಚ್ಚುವರಿ ಸರಕಾರಿ ಕಾಲೇಜುಗಳಿವೆ. ಈ ಸರ್ಕಾರಿ ಸೀಟುಗಳ ಸಂಖ್ಯೆ 56,947 ರಿಂದ 57,855 ಕ್ಕೆ ಏರಿಕೆಯಾಗಿದೆ'' ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಆದಾಗ್ಯೂ, ಆರ್ಕಿಟೆಕ್ಚರ್ ಸೀಟುಗಳಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ 2,500 ಸೀಟುಗಳಿದ್ದರೆ, ಈ ವರ್ಷ 2,328ಕ್ಕೆ ಇಳಿಕೆಯಾಗಿದೆ. ಅವುಗಳಲ್ಲಿ 1,058 ಸರ್ಕಾರಿ ಸೀಟುಗಳು, 597 ಕಾಮೆಡ್‌ಕೆ ಮತ್ತು 499 ಮ್ಯಾನೇಜ್‌ಮೆಂಟ್ ಸೀಟುಗಳು ಇವೆ. ಆರ್ಕಿಟೆಕ್ಚರ್ ಕಾಲೇಜುಗಳ ಸಂಖ್ಯೆಯನ್ನು ಎರಡಂಕಿಗೆ ಅಂದರೆ 38ಕ್ಕೆ ಇಳಿಸಲಾಗಿದೆ.

ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿರುವ ಎಲ್ಲಾ 670 ಸೀಟುಗಳು ಈ ಬಾರಿ ಕೆಇಎ ಕೌನ್ಸೆಲಿಂಗ್ ಮೂಲಕ ಲಭ್ಯವಿವೆ. ಇದು ಸೀಟು ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿದೆ. ಆದರೆ, ಮುಂದಿನ ವರ್ಷದಿಂದ ಸೀಟು ಲಭ್ಯತೆಯಲ್ಲಿ ಬದಲಾವಣೆಯಾಗಬಹುದು.












Click it and Unblock the Notifications