ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯಡಿಯೂರಪ್ಪ ಕರೆದಿದ್ದ ಭೋಜನ ಕೂಟಕ್ಕೆ ಗೈರಾದ ಶಾಸಕರು ಯಾರು? ಯಾಕೆ?

|
Google Oneindia Kannada News

ಬೆಂಗಳೂರು, ಫೆ. 03: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಯೋಜಿಸಿದ್ದ ಭೋಜನ ಕೂಟಕ್ಕೆ ಬರೊಬ್ಬರಿ 25 ಶಾಸಕರು ಗೈರಾಗುವ ಮೂಲಕ ದೊಡ್ಡ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಗೈರಾದವರಲ್ಲಿ ಮೂವರು ಸಚಿವರೂ ಸೇರಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ಪಕ್ಷದಲ್ಲಿನ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಜೆಪಿ ಶಾಸಕರಿಗೆ ಮಂಗಳವಾರ ರಾತ್ರಿ (ಫೆ.02) ಭೋಜನಕೂಟ ಏರ್ಪಡಿಸಿದ್ದರು.

Recommended Video

ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada

ಆದರೆ ಅಸಮಾಧಾನಿತ ಶಾಸಕರು ಭೋಜನ ಕೂಟಕ್ಕೆ ಹೋಗದೆ ಮತ್ತೊಮ್ಮೆ ಖಡಕ್ ಸಂದೇಶವನ್ನು ರಾಜ್ಯ ನಾಯಕತ್ವಕ್ಕೆ ರವಾನಿಸಿದ್ದಾರೆ. ಮೊನ್ನೆ ವಿಧಾನಸೌಧದಲ್ಲಿಯೇ ಸಭೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಕಾರ್ಯವೈಖರಿ ಕುರಿತು 14 ಶಾಸಕರು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ವಿಧಾನಸಭೆಯಲ್ಲಿ ಸಭೆ ನಡೆಸಿದ್ದ ಶಾಸಕರು ಕೂಡ ಭೋಜನಕೂಟಕ್ಕೆ ಬಂದಿಲ್ಲ ಎಂಬುದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಾದಿ ಕಠಿಣವಾಗಲಿದೆ ಎಂಬುದಕ್ಕೆ ದಿಕ್ಸೂಚಿಯಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ಮೂಲ ಬಿಜೆಪಿ ಶಾಸಕರು?ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ಮೂಲ ಬಿಜೆಪಿ ಶಾಸಕರು?

ಭೋಜನಕೂಟಕ್ಕೆ ಗೈರು ಹಾಜರಾಗಿದ್ದ ಸಚಿವರು ಹಾಗೂ ಶಾಸಕರು ಯಾರು? ಯಾಕೆ ಅವರು ಗೈರು ಹಾಜರಾಗಲು ಕಾರಣ ಏನು? ಇಲ್ಲಿದೆ ಸಂಪುರ್ಣ ವಿವರ.

ಸಿಎಂ ಯಡಿಯೂರಪ್ಪ ಭೋಜನಕೂಟ

ಸಿಎಂ ಯಡಿಯೂರಪ್ಪ ಭೋಜನಕೂಟ

ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಅಸಮಾಧಾವನ್ನು ತಣಿಸುವುದೂ ಸೇರಿದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಭೋಜನಕೂಟ ಆಯೋಜಿಸಿದ್ದರು. ತಮ್ಮ ಅಧಿಕೃತ ನಿವಾಸ ಕಾವೇರಿಗೆ ಊಟಕ್ಕೆ ಬರುವಂತೆ ಸ್ವತಃ ಯಡಿಯೂರಪ್ಪ ಅವರೇ ಬಿಜೆಪಿಯ ಎಲ್ಲ ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಖುದ್ದಾಗಿ ಆಹ್ವಾನಿಸಿದ್ದರು. ಸಿಎಂ ಕರೆದಿದ್ದ ಭೋಜನಕೂಟಕ್ಕೆ ಬಹುತೇಕ ಎಲ್ಲ ಶಾಸಕರು, ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ಆಗಮಿಸಿದ್ದರು. ಆದರೆ ವಿಧಾನಸೌಧದಲ್ಲಿ ಸಭೆ ಸೇರಿದ್ದ 14 ಶಾಸಕರೂ ಬಂದಿರಲಿಲ್ಲ. ಜೊತೆಗೆ ಮತ್ತಷ್ಟು ಶಾಸಕರು ಬರಲಿಲ್ಲ. ಅದಕ್ಕೆ ಕಾರಣವೂ ಇದೆ.

ಸಂಘ ಪರಿವಾರದ ಹಿನ್ನೆಲೆಯ ಶಾಸಕರು

ಸಂಘ ಪರಿವಾರದ ಹಿನ್ನೆಲೆಯ ಶಾಸಕರು

ಸಿಎಂ ಕರೆದಿದ್ದ ಭೋಜನಕೂಟಕ್ಕೆ ಸಂಘಪರಿವಾರದ ಹಿನ್ನೆಲೆಯ 14 ಶಾಸಕರು ಹೋಗಿರಲಿಲ್ಲ. ಪ್ರಮುಖವಾಗಿ ಸರ್ಕಾರದ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಅರವಿಂದ್ ಬೆಲ್ಲದ್, ಮಹಾಂತೇಶ ದೊಡ್ಡಗೌಡ, ವೀರಣ್ಣ ಚರಂತಿಮಠ ಸೇರಿದಂತೆ 25 ಶಾಸಕರು ಗೈರು ಹಾಜರಾಗಿದ್ದಾರೆ. ಆ ಮೂಲಕ ತಮ್ಮ ಅಸಮಧಾನವನ್ನು ಮತ್ತೆ ನೇರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಸಿದಂತಾಗಿದೆ.

ಸಂಪುಟ ವಿಸ್ತರಣೆ ಹಾಗೂ ಖಾತೆ ಮರು ಹಂಚಿಕೆ ಅಸಮಾಧಾನ ಬಿಜೆಪಿಯಲ್ಲಿ ಇನ್ನೂ ಶಮನವಾಗಿಲ್ಲ ಎಂಬುದು ಇದರಿಂದ ಬಹಿರಂಗವಾಗಿದೆ. ಹಾಗೆಯೆ ಈ ಶಾಸಕರು ಬೀದಿಯಲ್ಲಿ ನಿಂತು ಮಾತನಾಡುವವರಲ್ಲ, ಆದರೆ ಹಿಡಿದ ಕೆಲಸವನ್ನು ಬಿಡುವವರೂ ಅಲ್ಲ ಎಂಬುದು ಗಮನಿಸಬೇಕಾದ ಅಂಶ.

ಭೋಜನ ಕೂಟಕ್ಕೆ ಗೈರಾದವರು

ಭೋಜನ ಕೂಟಕ್ಕೆ ಗೈರಾದವರು

ಸಚಿವರಾದ ಆನಂದ್ ಸಿಂಗ್, ಎಸ್‌. ಸುರೇಶ್ ಕುಮಾರ್ ಹಾಗೂ ಜೆ.ಸಿ.‌ ಮಾಧುಸ್ವಾಮಿ ಅವರು ಸಿಎಂ ಭೋಜನ ಕೂಟಕ್ಕೆ ಗೈರು ಹಾಜರಾಗಿದ್ದಾರೆ. ಆ ಮೂಲಕ ಖಾತೆ ಹಂಚಿಕೆ ಕುರಿತು ತಮ್ಮ ಅಸಮಾಧಾವವನ್ನು ಮುಂದುವರೆಸಿದ್ದಾರೆ. ಜೊತೆಗೆ ಶಾಸಕರಾದ ಮಹಾಂತೇಶ ದೊಡ್ಡಗೌಡ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಕಳಕಪ್ಪ ಬಂಡಿ, ಅರವಿಂದ ಬೆಲ್ಲದ್, ದಿನಕರ ಶೆಟ್ಟಿ, ವಿ. ಸುನೀಲ್ ಕುಮಾರ್, ಅರುಣ್ ಕುಮಾರ್, ಸೋಮಶೇಖರ್ ರೆಡ್ಡಿ, ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಕರುಣಾಕರ ರೆಡ್ಡಿ, ಸತೀಶ್ ರೆಡ್ಡಿ, ಉದಯ ಗರುಡಾಚಾರ್, ಎಂ.ಪಿ. ಕುಮಾರಸ್ವಾಮಿ, ಸಿ.ಟಿ. ರವಿ, ಡಿ.ಎಸ್. ಸುರೇಶ್, ಎಚ್. ನಾಗೇಶ್ ಹಾಗೂ ಸುನೀಲ್ ನಾಯಕ್‌ ಕೂಡ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ.

ಸಂಘ ಪರಿವಾರದ ಹಿನ್ನೆಲೆಯ ಶಾಸಕರು

ಸಂಘ ಪರಿವಾರದ ಹಿನ್ನೆಲೆಯ ಶಾಸಕರು

ಗೈರಾದವರು ಬಹುತೇಕ ಮೂಲ ಬಿಜೆಪಿ ಶಾಸಕರು. ಸಂಘ ಪರಿವಾರದ ಮೂಲಕ ಬೆಳೆದು ಶಾಸಕರಾಗಿ, ಸಚಿವರಾದವರು. ಹೀಗಾಗಿ ಬಹಿರಂಗ ಹೇಳಿಕೆಗಳನ್ನು ಕೊಟ್ಟು ತಮ್ಮ ಅಸಮಧಾನ ಹೊರಹಾಕುವ ಶಾಸಕರಿಗಿಂತ ಇವರ ಅಭಿಪ್ರಾಯಗಳಿಗೆ ಬಿಜೆಪಿಯಲ್ಲಿ ಹೆಚ್ಚಿನ ಮಹತ್ವವಿದೆ. ಅವರೆಲ್ಲರೂ ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅಸಮಾಧಾನವನ್ನು ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ 1, 2020 ರಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಪತ್ರ ಬರೆದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬರುವ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೂ ಮೊದಲು ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಆಗಲಿದೆಯಾ ಎಂಬ ಚರ್ಚೆ ಇದೀಗ ಬಿಜೆಪಿಯಲ್ಲಿಯೇ ಶುರುವಾಗಿದೆ.

English summary
25 BJP MLAs have once again voiced their displeasure by not attending a luncheon convened by Chief Minister Yediyurappa. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X