ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲುಗಾರುಬೈಲುವಿನಲ್ಲಿ ಭತ್ತವೆಲ್ಲಾ ಮಣ್ಣು ಪಾಲು, ಆತಂಕದಲ್ಲಿ ರೈತರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್.20: ಶೃಂಗೇರಿಯ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರುವ ಗಾಳಿ-ಮಳೆಯಿಂದಾಗಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆ ಸಂಪೂರ್ಣ ಹಾನಿಗೀಡಾಗಿದೆ.

ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ, ಭಾರೀ ಗಾಳಿಯೊಂದಿಗೆ ಸುರಿಯುತ್ತಿರುವ ಸೋನೆ ಮಳೆಯಿಂದ ಗುಡ್ಡದ ಮಣ್ಣು ಸವೆದು ಇಡೀ ಜಮೀನಿಗೆ ಆವರಿಸಿಕೊಂಡಿದೆ. ತಿಂಗಳಿಂದ ಮಡಿ ಮಾಡಿ, ಸಸಿ ನೆಟ್ಟಿದ ರೈತರೀಗ ಆತಂಕಕ್ಕೀಡಾಗಿದ್ದಾರೆ.

ಬಿಕೋ ಎನ್ನುತ್ತಿರುವ ಮಂಗಳೂರು ಮಾರ್ಕೆಟ್, ಸಮಯಕ್ಕೆ ಬಾರದ ತರಕಾರಿಗಳುಬಿಕೋ ಎನ್ನುತ್ತಿರುವ ಮಂಗಳೂರು ಮಾರ್ಕೆಟ್, ಸಮಯಕ್ಕೆ ಬಾರದ ತರಕಾರಿಗಳು

ಮರಾಠಿ ಜನಾಂಗಕ್ಕೆ ಸೇರಿದ ಇಲ್ಲಿನ ರೈತರು ಮೂಲತಃ ಮಂಗಳೂರಿನವರು. ಬೈನೆ ಮರದ ಕಳ್ಳನ್ನ ಸಂಗ್ರಹಿಸಿ, ಅಡಕೆ ಕೊಯ್ಯುವುದರಲ್ಲಿ ನಿಸ್ಸಿಮರು. ಈಗಲೂ ಅದೇ ಕೆಲಸ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆಯಡಿ ಅರ್ಧ, ಒಂದು ಎಕರೆ ಜಮೀನಿನಲ್ಲಿ ಮನೆಗೆ ಬೇಕಾದ ಭತ್ತ ಬೆಳೆದುಕೊಂಡು ಜೀವನ ಸಾಗಿಸುತ್ತಾರೆ.

25 acres of paddy fields in Hulugaru bilu village have been completely damaged

ಆದರೆ ಈ ಬಾರಿ ಭಾರೀ ಮಳೆಯಿಂದ ಭತ್ತವೆಲ್ಲಾ ಮಣ್ಣು ಪಾಲಾದ ಹಿನ್ನೆಲೆ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರೋ ಶೃಂಗೇರಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಿ ಇಲ್ಲಿನ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

English summary
About 25 acres of paddy fields in the village of Hulugaru bilu have been completely damaged. Farmers are worried about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X