ಕರ್ನಾಟಕದಲ್ಲಿ ಒಂದೇ ದಿನ 22,758 ಮಂದಿಗೆ ಕೊರೊನಾವೈರಸ್
ಬೆಂಗಳೂರು, ಮೇ 25: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸ್ಥಿರತೆ ಕಾಯ್ದುಕೊಂಡಂತೆ ಗೋಚರಿಸುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರಕ್ಕಿಂತ ಮಂಗಳವಾರ ಇಳಿಕೆಯಾಗಿದೆ.
ರಾಜ್ಯದಲ್ಲಿ ಒಂದೇ ದಿನ 22,758 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 38,224 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 588 ಜನರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 24,72,973 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 20,22,172 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 26,399 ಜನರು ಬಲಿಯಾಗಿದ್ದಾರೆ. ಉಳಿದಂತೆ 4,24,381 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೊನಾವೈರಸ್ ಪ್ರಕರಣ?
ರಾಜ್ಯದಲ್ಲಿ ಒಟ್ಟು 22,758 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 211, ಬಳ್ಳಾರಿ 718, ಬೆಳಗಾವಿ 1260, ಬೆಂಗಳೂರು ಗ್ರಾಮಾಂತರ 837, ಬೆಂಗಳೂರು 6243, ಬೀದರ್ 48, ಚಾಮರಾಜನಗರ 282, ಚಿಕ್ಕಬಳ್ಳಾಪುರ 176, ಚಿಕ್ಕಮಗಳೂರು 797, ಚಿತ್ರದುರ್ಗ 392, ದಕ್ಷಿಣ ಕನ್ನಡ 755, ದಾವಣಗೆರೆ 515, ಧಾರವಾಡ 709, ಗದಗ 259, ಹಾಸನ 1285, ಹಾವೇರಿ 168, ಕಲಬುರಗಿ 165, ಕೊಡಗು 213, ಕೋಲಾರ 585, ಕೊಪ್ಪಳ 206, ಮಂಡ್ಯ 244, ಮೈಸೂರು 2241, ರಾಯಚೂರು 430, ರಾಮನಗರ 252, ಶಿವಮೊಗ್ಗ 529, ತುಮಕೂರು 1312, ಉಡುಪಿ 640, ಉತ್ತರ ಕನ್ನಡ 992, ವಿಜಯಪುರ 141, ಯಾದಗಿರಿ 153 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications