ಮೇ 29; ಕರ್ನಾಟಕದ ಕೊರೊನಾ ಪ್ರಕರಣಗಳಲ್ಲಿ ಕೊಂಚ ಇಳಿಕೆ

ಬೆಂಗಳೂರು, ಮೇ 29: ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಮೇ 29ರಂದು 20,628 ಹೊಸ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

24 ಗಂಟೆಗಳ ಅವಧಿಯಲ್ಲಿ 492 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಂದು ದಿನದಲ್ಲಿ 42,444 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರ ಪ್ರದೇಶದಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.

20628 New Coronavirus Cases Reported In State On May 29

ಶನಿವಾರದ ಅಂಕಿ ಅಂಶದಂತೆ ಕರ್ನಾಟಕದಲ್ಲಿ ಒಟ್ಟು 2567449 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 2189064 ಸೋಂಕಿತರು ಗುಣಮುಖರಾಗಿದ್ದು, 350066 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೋವಿಡ್ ಅಂಕಿ ಸಂಖ್ಯೆ: ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು 4889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350, ಮಂಡ್ಯ 453, ಮೈಸೂರು 1720, ರಾಯಚೂರು 340, ರಾಮನಗರ 181, ಶಿವಮೊಗ್ಗ 672, ತುಮಕೂರು 1102, ಉಡುಪಿ 684, ಉತ್ತರ ಕನ್ನಡ 536, ವಿಜಯಪುರ 210, ಯಾದಗಿರಿ 83 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Recommended Video

      ನೀವೇನಾದರೂ ಹೆಚ್ಚು ಸ್ಟೀಮ್ ತಗೊಂಡ್ರೆ ಬ್ಲ್ಯಾಕ್ ಫಂಗಸ್ ಅಪಾಯ ಕಟ್ಟಿಟ್ಟ ಬುತ್ತಿ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+