ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಇಳಿಮುಖ

ಬೆಂಗಳೂರು, ಮೇ 30: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಜೊತೆ ಜೊತೆಗೆ ಸಾವಿನ ಪ್ರಕರಣಗಳು ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವರದಿಯಾದ ಕೊವಿಡ್-19 ಪ್ರಕರಣಗಳ ಅಂಕಿ-ಅಂಶಗಳು ಈ ಬಗ್ಗೆ ಸ್ಪಷ್ಟಪಡಿಸುತ್ತವೆ.
ರಾಜ್ಯದಲ್ಲಿ ಒಂದು ದಿನದಲ್ಲಿ 20378 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳ 382 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 28053 ಸೋಂಕಿತರು ಗುಣಮುಖರಾಗಿದ್ದಾರೆ.

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 25,87,827 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 22,17,117 ಸೋಂಕಿತರು ಗುಣಮುಖರಾಗಿದ್ದು, 3,42,010 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

20378 New Coronavirus Cases Reported in Karnataka Today, State Tally Rise to 2587827

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ರಾಜ್ಯದಲ್ಲಿ ಒಟ್ಟು 20378 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1171, ಬೆಂಗಳೂರು ಗ್ರಾಮಾಂತರ 392, ಬೆಂಗಳೂರು 4734, ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356, ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727, ದಾವಣಗೆರೆ 698, ಧಾರವಾಡ 525, ಗದಗ 289, ಹಾಸನ 2227, ಹಾವೇರಿ 206, ಕಲಬುರಗಿ 107, ಕೊಡಗು 271, ಕೋಲಾರ 341, ಕೊಪ್ಪಳ 365, ಮಂಡ್ಯ 643, ಮೈಸೂರು 1559, ರಾಯಚೂರು 278, ರಾಮನಗರ 164, ಶಿವಮೊಗ್ಗ 386, ತುಮಕೂರು 773, ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198, ಯಾದಗಿರಿ 107 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

      ICC ತೆಗೆದುಕೊಂಡ ನಿರ್ಧಾರಕ್ಕೆ ರೋಹಿತ್ ಶರ್ಮಾ ಫುಲ್ ಹ್ಯಾಪಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+