ಎಲ್ಲರೂ ಹೇಳುತ್ತಾ ಇದ್ರು 2020 ಕೆಟ್ಟ ವರ್ಷ ಎಂದು, ಆದ್ರೆ ಈ ಕಾರಣಕ್ಕಾಗಿ ನನಗೆ ಹಾಗೆ ಅನಿಸುತ್ತಿಲ್ಲ

ಎಲ್ಲರೂ ಹೇಳುತ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ. ಅದಕ್ಕೆ ಕಾರಣ ಹೀಗಿದೆ:

> ನಮ್ಮ ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು ಕಳೆದಿದ್ದು 2020 ರಲ್ಲಿ.
> ನಮ್ಮ ದುಶ್ಚಟಗಳಾದ ಧೂಮಪಾನ ಮದ್ಯಪಾನ ಗಳನ್ನು ನಿಯಂತ್ರಿಸಿದ ವರ್ಷ 2020.
> ಮೀನು ಮಾಂಸವನ್ನು ತಿನ್ನದೆಯೂ ಸುಖವಾಗಿ ಜೀವಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.
> ಸಣ್ಣ ಸಣ್ಣ ರೋಗಗಳಿಗೆ ಡಾಕ್ಟರಿಗೆ ತೋರಿಸದೆಯೇ ಮನೆಯ ಮದ್ದಿನಲ್ಲೇ ಗುಣಪಡಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.

2020 Is Not A Bad Year For Various Reasons: A Post in Whatsapp
> ವಿಜೃಂಭಣೆಯಿಲ್ಲದೇ ಅತಿ ಸರಳವಾಗಿ ಅತಿ ಕಡಿಮೆ ಜನಗಳನ್ನು ಕರೆದು ಮದುವೆ ಮಾಡಬಹುದೆಂದು ತೋರಿಸಿಕೊಟ್ಟ ವರ್ಷ 2020.
> ಬೇಕಾಬಿಟ್ಟಿ ರಸ್ತೆಗಳಲ್ಲಿ ಬಿಸಿಲಿನಲ್ಲಿ ಸುತ್ತದೇ ಹಾಯಾಗಿ ಮನೆಯಲ್ಲಿ ಹೇಗೆ ಕಾಲ ಕಳೆಯಬಹುದೆಂದು ಕಲಿಸಿಕೊಟ್ಟ ವರ್ಷ 2020.
> ದೇವಸ್ಥಾನಗಳಿಗೆ ಹೋಗದೆ ಅತ್ಯಂತ ಭಕ್ತಿಯಿಂದ ಮನೆಯಲ್ಲೇ ಕುಳಿತು ಪ್ರಾರ್ಥಿಸಿದ ವರ್ಷ 2020.
> ಅದೆಷ್ಟೋ ಓದುವ ಹವ್ಯಾಸ ಇಲ್ಲದ ಜನರಿಗೆ ಧರ್ಮ ಗ್ರಂಥ ಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರಣೆ ತಂದುಕೊಟ್ಟ ವರ್ಷ 2020.
> ದುಂದುವೆಚ್ಚ ಮಾಡದೇ ಕಡಿಮೆ ಖರ್ಚಿನಲ್ಲಿ ಹೇಗೆ ಜೀವನ ನಡೆಸ ಬಹುದೆಂದು ಎಚ್ಚರಿಸಿದ ವರ್ಷ 2020.
> ವ್ಯಕ್ತಿ ಶುಚಿತ್ವದ ಬಗ್ಗೆ ಗೊತ್ತಿದ್ದರೂ ಅಷ್ಟಾಗಿ ಪಾಲಿಸದಿದ್ದ ನಾವು ಈಗ ಶುಚಿತ್ವದ ಬಗ್ಗೆ ಗಮನ ಕೊಡುವಂತಹ ಮಾಡಿದ್ದು 2020.
> ಮಕ್ಕಳು ಮೊಬೈಲ್ ಫೋನ್ ಮುಟ್ಟಿದರೆ ಕೋಪಿಸಿಕೊಳ್ಳುತಿದ್ದ ತಂದೆ ತಾಯಿಗಳೇ ಅದೇ ಮಕ್ಕಳಿಗೆ ಆಂಡ್ರಾಯಿಡ್ ಫೋನ್ ಕೊಡಿಸಿದ ವರ್ಷ 2020. 😁

ಹೀಗೆ ನಮ್ಮ ಬದುಕಿಗೆ ಅನೇಕ ಬೆಳಕನ್ನು ತಂದು ಕೊಟ್ಟ 2020ನ್ನು ಹೇಗೆ ಮರೆಯುವುದು. (ವಾಟ್ಸಾಪ್ ನಲ್ಲಿ ಬಂದಿದ್ದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+