ಬಸವನಗುಡಿ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಕಟ್ಟೆ ಸತ್ಯ!

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 08 : ಕಡೆಲೆಕಾಯಿ ಪರಿಷೆ ವೇಳೆ ಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರ ಬೆಂಗಳೂರಿನ ಬಸವನಗುಡಿ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಟಿಕೆಟ್ ವಿಚಾರಕ್ಕೆ ಕ್ಷೇತ್ರ ಸುದ್ದಿ ಮಾಡಿದೆ. ಪ್ರಸ್ತುತ ಕ್ಷೇತ್ರ ಬಿಜೆಪಿಯ ವಶದಲ್ಲಿಯೇ ಇದೆ.

ಬಿಬಿಎಂಪಿ ಮಾಜಿ ಮೇಯರ್, ಬಸವನಗುಡಿ ಕ್ಷೇತ್ರದ ಬಿಬಿಎಂಪಿ ಸದಸ್ಯ ಕಟ್ಟೆ ಸತ್ಯನಾರಾಯಣ 2018ರ ಚುನಾವಣೆಗೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಕಟ್ಟೆ ಸತ್ಯ ಎಂದೇ ಪ್ರಸಿದ್ಧಿ ಪಡೆದಿರುವ ಅವರು ಜನರಿಗೆ ಚಿರಪರಿಚಿತರು. ಎಲ್.ಎ.ರವಿ ಸುಬ್ರಮಣ್ಯ ಕ್ಷೇತ್ರದ ಶಾಸಕರು.

ಮಂಡ್ಯದಿಂದ ಅಂಬರೀಶ್, ಬಸವನಗುಡಿಯಿಂದ ರಮ್ಯಾ ಸ್ಪರ್ಧೆ?

'ಎರಡು ಬಾರಿ ವಿಧಾನಸಭೆ ಚುನಾವಣೆ ಟಿಕೆಟ್ ವಂಚಿತನಾಗಿದ್ದೇನೆ. ಈ ಬಾರಿಯ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ' ಎಂದು ಕಟ್ಟೆ ಸತ್ಯನಾರಾಯಣ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಪಕ್ಷದ ಟಿಕೆಟ್ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸತತ ಎರಡು ಬಾರಿ ಗೆಲುವು ಸಾಧಿಸಿರುವ ರವಿ ಸುಬ್ರಮಣ್ಯ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಲು ಯಾವ ಕಾರಣವನ್ನು ನೀಡುವುದು ಕಷ್ಟ. ಮತ್ತೊಂದು ಕಡೆ ಕಾಂಗ್ರೆಸ್‌ನಿಂದ ರಮ್ಯಾ ಅವರು ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನ ಮಾಜಿ ಮೇಯರ್

ಬೆಂಗಳೂರಿನ ಮಾಜಿ ಮೇಯರ್

ಕಟ್ಟೆ ಸತ್ಯನಾರಾಯಣ 'ಕಟ್ಟೆ ಸತ್ಯ' ಎಂದೇ ಪ್ರಸಿದ್ಧಿ ಪಡೆದಿದ್ದಾರೆ. 5 ಬಾರಿ ಬಿಬಿಎಂಪಿ ಸದಸ್ಯರಾಗಿ ಗೆಲುವು ಸಾಧಿಸಿದ್ದಾರೆ. ಕಟ್ಟೆ ಸತ್ಯನಾರಾಯಣ ಅವರು, 2013ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದರು.

ಬಹಿರಂಗವಾಗಿ ಟಿಕೆಟ್‌ಗೆ ಬೇಡಿಕೆ

ಬಹಿರಂಗವಾಗಿ ಟಿಕೆಟ್‌ಗೆ ಬೇಡಿಕೆ

‘1990ರಲ್ಲಿ ಮೊದಲು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. 5 ಬಾರಿ ಗೆದ್ದಿದ್ದೇನೆ. ಹಲವಾರು ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಪ್ರತಿಪಕ್ಷ, ಆಡಳಿತ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೇಯರ್ ಆಗಿದ್ದೇನೆ' ಎಂದು ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

ಎರಡು ಬಾರಿ ಟಿಕೆಟ್ ವಂಚಿತ

ಎರಡು ಬಾರಿ ಟಿಕೆಟ್ ವಂಚಿತ

'ಬೆಂಗಳೂರಿನ ಮೇಯರ್ ಆಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷ ಬೆಳೆಯಲಿ ಎಂದು ಟಿಕೆಟ್ ಬಿಟ್ಟು ಕೊಟ್ಟಿದ್ದೇನೆ. ಆದ್ದರಿಂದ ಈ ಬಾರಿ ಟಿಕೆಟ್ ಆಕಾಂಕ್ಷಿ' ಎಂದು ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

ಎಲ್.ಎ.ರವಿ ಸುಬ್ರಮಣ್ಯ ಶಾಸಕರು

ಎಲ್.ಎ.ರವಿ ಸುಬ್ರಮಣ್ಯ ಶಾಸಕರು

ಪ್ರಸ್ತುತ ಬಸವನಗುಡಿ ಕ್ಷೇತ್ರದ ಶಾಸಕರು ಬಿಜೆಪಿಯವರೇ ಆದ ಎಲ್.ಎ.ರವಿ ಸುಬ್ರಮಣ್ಯ. 2008ರ ಚುನಾವಣೆಯಲ್ಲಿ 50,294, 2013ರ ಚುನಾವಣೆಯಲ್ಲಿ
43,883 ಮತಗಳನ್ನು ಪಡೆದು ಎರಡು ಬಾರಿ ಗೆಲುವು ಸಾಧಿಸಿದ್ದಾರೆ.

ರಮ್ಯಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ

ರಮ್ಯಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ

2013ರಲ್ಲಿ ಬಿ.ಕೆ.ಚಂದ್ರಶೇಖರ್ ಬಸವನಗುಡಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಅಚ್ಚರಿಯ ಹೆಸರು ಕೇಳಿಬರುತ್ತಿದೆ. ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ.

ಕ್ಷೇತ್ರದ ವ್ಯಾಪ್ತಿ

ಕ್ಷೇತ್ರದ ವ್ಯಾಪ್ತಿ

ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ ವಾರ್ಡ್‌ಗಳು ಸೇರುತ್ತವೆ. ಕ್ಷೇತ್ರದಲ್ಲಿರುವ ದೊಡ್ಡ ಗಣೇಶನ ದೇವಸ್ಥಾನ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former BBMP mayor and Basavanagudi BJP corporator B.S.Sathyanarayana popularly known as Katte Sathya aspirant for BJP ticket from Basavanagudi assembly constituency, Bengaluru for 2018 assembly election. Ravi Subramanya (BJP) is the sitting MLA of the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ