ಸಿಂಗ್‌ಗೆ 20 ವರ್ಷ ಜೈಲು : ಯಾವ ಕನ್ನಡ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?

Posted By: Gururaj
Subscribe to Oneindia Kannada

ಚಂಡೀಗಢ, ಆಗಸ್ಟ್ 29 : ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಜೈಲು ಪಾಲಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಅವರು ದೋಷಿಯಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಸಿಂಗ್‌ಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2002ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ರಾಮ್ ರಹೀಮ್ ಸಿಂಗ್‌ಗೆ ಎರಡು ಪ್ರಕರಣಗಳಲ್ಲಿ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ದಂಡ ವಿಧಿಸ ತೀರ್ಪು ನೀಡಿದೆ.

   Ram Rahim Sentencing 10 Years Punishment | Oneindia kannada

   ರಾಮ್ ರಹೀಮ್‌ ಸಿಂಗ್‌ಗೆ 20 ವರ್ಷಗಳ ಶಿಕ್ಷೆಯಾಗಿದ್ದು ಹೇಗೆ?

   ರಾಮ್ ರಹೀಮ್ ತೀರ್ಪು ದೇಶದ ಗಮನ ಸೆಳೆದಿತ್ತು. ಕಾರಣ ಶುಕ್ರವಾರ ಸಿಂಗ್ ದೋಷಿ ಎಂಬ ತೀರ್ಪು ಹೊರಬೀಳುತ್ತಿದ್ದಂತೆ ಹರ್ಯಾಣ, ಪಂಜಾಬ್‌ನಲ್ಲಿ ಹಿಂಸಾಚಾರ ನಡೆದಿತ್ತು. ಗಲಭೆಯಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದರು.

   ರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿ

   ಕನ್ನಡ ದಿನ ಪತ್ರಿಕೆಗಳು ರಾಮ್ ರಹೀಮ್ ಸಿಂಗ್ ಜೈಲಿಗೆ ಹೋದ ಸುದ್ದಿಯನ್ನು ವಿವರವಾಗಿ ಪ್ರಕಟಿಸಿವೆ. ಆಕರ್ಷಕ ಶೀರ್ಷಿಕೆಗಳ ಮೂಲಕ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಲಾಗಿದೆ. ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ? ನಿವೇ ನೋಡಿ....

   '20 ವರ್ಷ ಸೆರೆಮನೆ'

   '20 ವರ್ಷ ಸೆರೆಮನೆ'

   ವಿಜಯ ಕರ್ನಾಟಕ '20 ವರ್ಷ ಸೆರೆಮನೆ' ಎಂಬ ಶೀರ್ಷಿಕೆ ಯಡಿ ರಾಮ್ ರಹೀಮ್ ಜೈಲು ಶಿಕ್ಷೆಯ ಸುದ್ದಿಯನ್ನು ಪ್ರಕಟಿಸಿದೆ.

   ಗುರುಮೀತ್‌ಗೆ 20 ವರ್ಷ ಜೈಲು

   ಗುರುಮೀತ್‌ಗೆ 20 ವರ್ಷ ಜೈಲು

   'ಗುರುಮೀತ್‌ಗೆ 20 ವರ್ಷ ಜೈಲು, ಇನ್ನೂ ಬಾಕಿ ಇದೆ 2 ಪ್ರಕರಣ!' ಎಂಬ ಶೀರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆ ರಾಮ್ ರಹೀಮ್ ಸಿಂಗ್ ಸುದ್ದಿಯನ್ನು ಪ್ರಕಟಿಸಿದೆ.

   ಉದಯವಾಣಿಯಲ್ಲಿ ನಂಬರ್ ಆಟ

   ಉದಯವಾಣಿಯಲ್ಲಿ ನಂಬರ್ ಆಟ

   ಉದಯವಾಣಿ ಪತ್ರಿಕೆಯಲ್ಲಿ '10 + 10 ವರ್ಷ ಜೈಲು, 15+15 ಲಕ್ಷ ದಂಡ' ಎಂಬ ಶೀರ್ಷಿಕೆ ಕೊಡಲಾಗಿದೆ. ನಂಬರ್‌ಗಳು ಜನರ ಗಮನ ಸೆಳೆಯುತ್ತಿವೆ.

   ಗುರ್ಮೀತ್‌ಗೆ 20 ವರ್ಷ ಶಿಕ್ಷೆ

   ಗುರ್ಮೀತ್‌ಗೆ 20 ವರ್ಷ ಶಿಕ್ಷೆ

   ಪ್ರಜಾವಾಣಿ 'ಗುರ್ಮೀತ್‌ಗೆ 20 ವರ್ಷ ಶಿಕ್ಷೆ' ಎಂಬ ಶೀರ್ಷಿಕೆ ನೀಡಿದೆ. ಸಿಂಗ್ ಗೆ ಶಿಕ್ಷೆ ನೀಡಿದ ಸಿಬಿಐ ಕೋರ್ಟ್ ನ್ಯಾಯಮೂರ್ತಿಗಳ ಚಿತ್ರ ಮುಖಪುಟ ಅಲಂಕರಿಸಿದೆ.

   ಡೇರಾ ಬಾಬಾಗೆ ಸಜೆ

   ಡೇರಾ ಬಾಬಾಗೆ ಸಜೆ

   'ಡೇರಾ ಬಾಬಾಗೆ 10+10 ವರ್ಷ ಸಜೆ' ಎಂಬ ಶಿರ್ಷಿಕೆಯಡಿ ಸಂಯುಕ್ತ ಕರ್ನಾಟಕ ರಾಮ್ ರಹೀಮ್ ಸಿಂಗ್ ಸುದ್ದಿಯನ್ನು ಪ್ರಕಟಿಸಿದೆ.

   ಬಾಬಾಗೆ ಜೈಲು

   ಬಾಬಾಗೆ ಜೈಲು

   ವಿಶ್ವವಾಣಿ 'ಅತ್ಯಾಚಾರಿ ಬಾಬಾಗೆ 20 ವರ್ಷ ಜೈಲು' ಎಂಬ ಶೀರ್ಷಿಕೆಯಡಿ ಸುದ್ದಿಗಳನ್ನು ಪ್ರಕಟಿಸಿದೆ.

   ಅತ್ಯಾಚಾರಿ ಗುರ್ಮೀತ್‌

   ಅತ್ಯಾಚಾರಿ ಗುರ್ಮೀತ್‌

   ವಾರ್ತಾಭಾರತಿ 'ಅತ್ಯಾಚಾರಿ ಗುರ್ಮೀತ್‌ಗೆ 20 ವರ್ಷ ಜೈಲು' ಎಂಬ ಶೀರ್ಷಿಕೆಯಡಿ ರಾಮ್ ರಹೀಮ್ ಸಿಂಗ್ ವರದಿಯನ್ನು ಪ್ರಕಟಿಸಿದೆ.

   'ಡೇರಾ ಬಾಬಾಗೆ 20 ವರ್ಷ ಜೈಲು'

   'ಡೇರಾ ಬಾಬಾಗೆ 20 ವರ್ಷ ಜೈಲು'

   ಹೊಸ ದಿಗಂತ ದಿನಪತ್ರಿಕೆ'ಡೇರಾ ಬಾಬಾಗೆ 20 ವರ್ಷ ಜೈಲು' ಎಂಬ ಶೀರ್ಷಿಕೆಯಡಿ ರಾಮ್ ರಹೀಮ್ ಸುದ್ದಿಗಳನ್ನು ಪ್ರಕಟಿಸಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Dera Sacha Sauda chief Gurmeet Ram Rahim get a 20 year sentence in rape case. Here are the Kannada news papers headlines of Gurmeet Ram Rahim story.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   X