Get Updates
Get notified of breaking news, exclusive insights, and must-see stories!

ಕರ್ನಾಟಕದ 3ನೇ ಬೃಹತ್ ಕೆರೆಯ ಸುತ್ತ ಮುತ್ತ ಬೆಳೆಯಲಿವೆ 2 ಲಕ್ಷ ಗಿಡಗಳು

ಬೆಂಗಳೂರು, ಜುಲೈ 26: ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಇನ್ನಿತರ ಎಲ್ಲ ತರಹದ ಬೇಸಾಯ ವಿಜಯಪುರದಲ್ಲೂ ಆಗಬೇಕಿದೆ. ಈ ಸಂಬಂಧ ಕರ್ನಾಟಕ ರಾಜ್ಯದಲ್ಲೇ 3ನೇ ಅತೀ ದೊಡ್ಡ ಕೆರೆ ಎಂದೇ ಹೆಸರಾಗಿರುವ ಮಮದಾಪುರ ಕೆರೆ (Mamadapur Lake) ವ್ಯಾಪ್ತಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಕೆಲ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಕೆರೆ, ಗಿಡ ಬೆಳೆಸುವ ಕಾರ್ಯಗಳ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೃಷಿ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈ ಸಂಬಂಧ ರಾಜ್ಯದ ಮೂರನೇ ಅತೀ ದೊಡ್ಡ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸದ್ಯಕ್ಕೆ ಸುಮಾರು 56,000 ಗಿಡಗಳು ನೆಡುವ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಹಂತ ಹಂತವಾಗಿ 2ಲಕ್ಷ ಗಿಡಗಳನ್ನು ಬೆಳೆಸುವ ಕಾರ್ಯ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

2 Lakh saplings to be planted around Karnatakas 3rd largest Mamdapur Lake in Vijayapura, MB Patil

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ (ಬಿಜಾಪುರ) ಜಿಲ್ಲೆ ಆಳಿದ್ದ ಅದಿಲ್ ಶಾಹಿ ಅರಸರಿಗೆ ಮಲೆನಾಡಿನ ವೈಭವನ್ನು ತರುವ ಕನಸಿತ್ತು. ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ ಬಿಜಾಪುರದಲ್ಲೂ ಆಗಬೇಕೆಂದು ಅವರ ಆದಾಗಲೇ ಬಯಸಿದ್ದರು. ಇಂದಿನ ಮಮದಾಪುರ ಕೆರೆಯ ಜಾಗವನ್ನು ಗುರುತಿಸಿ ಅಲ್ಲಿದ್ದ 7 ಹಳ್ಳಿಗಳ ಜನರಿಗೆ ಪುನರ್ವಸತಿ ಕಲ್ಪಿಸಿ ಬೃಹತ್ ಕೆರೆಯನ್ನು ನಿರ್ಮಾಣ ಮಾಡಿದ್ದರು.

ಮಮದಾಪುರ ಕೆರೆಯ ಇತಿಹಾಸ

ಜಿಲ್ಲೆಯನ್ನು ಜಲಸಂಪನ್ನವಾಗಿಸಿ ಹಸಿರು ವಿಜಯಪುರ ಅಂದು ಅವರು ಕಟ್ಟಿದರು. ಕೆರೆ ಅಚ್ಚುಕಟ್ಟು ಪ್ರದೇಶದ ಕೆಳಭಾಗದಲ್ಲಿ ಬಾಸುಮತಿ ಅಕ್ಕಿ ಸಹಿತ ಎಲ್ಲ ಬೆಳೆಗಳನ್ನು ಬೆಳೆಯಲು ಅನುಕೂಲ ಕಲ್ಪಿಸಿ ಸಸ್ಯಶಾಮಲೆಯಿಂದ ಕಂಗೊಳಿಸುವಂತೆ ಮಾಡಿದ್ದು ಇತಿಹಾಸವಾಗಿದೆ.

2 Lakh saplings to be planted around Karnatakas 3rd largest Mamdapur Lake in Vijayapura, MB Patil

ಕಾಲಾಂತರದಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಯಿತು. ಜಾಲಿಗಿಡಗಳು ಬೆಳೆದು ನಿಂತವು. ಜಲಸಂಪನ್ಮೂಲ ಇಲಾಖೆ ಸಚಿವನಾದ ನಂತರ ಈ ಕೆರೆಗೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಯಿತು ಎಂದು ಹಿಂದಿನಿಂದ ಕೆರೆ, ಕೃಷಿ ಕುರಿತು ನಡೆದು ಬಂದ ಹಾದಿ ಅವರು ವಿವರಿಸಿದರು.

ಕೃಷ್ಣಾ ನದಿ ನೀರು ಹರಿಸಲಾಗುವುದು

ಅದಿಲ್ ಶಾಹಿ ಅರಸರಕಾಲದ ಗತ ವೈಭವವನ್ನು ಮತ್ತೆ ತರಬೇಕೆಂಬ ಕನಸು ಹೊತ್ತು, ಕೆರೆಯ ಹೂಳು ತೆಗೆಸಿ, ಕೃಷ್ಣಾನದಿ ನೀರಿನಿಂದ ನೀರು ಹರಿಸುವ ಕಾರ್ಯ ಮಾಡಲಾಗಿದೆ. ಕೆರೆ ಸುತ್ತಲಿನ ಸುಮಾರು 1,560 ಎಕರೆ (624 ಹೆಕ್ಟೇರ್) ಪ್ರದೇಶದಲ್ಲಿ ರಾಜ್ಯಕ್ಕೆ ಮಾದರಿ ಎನಿಸುವ ಅರಣ್ಯ ನಿರ್ಮಿಸುವ ಯೋಜನೆ ಅನುಷ್ಠಾನಗೊಳಿಸಿದೆ. ನಮ್ಮೆಲ್ಲ ಜನತೆಯ ಸಹಕಾರದಿಂದಾಗಿ ಇಲ್ಲಿ ಅರಣ್ಯ ಅರಳುತ್ತಿದೆ ಎಂದು ಅವರು ತಿಳಿಸಿದರು.

ಮಮದಾಪುರ ಕೆರೆಯಲ್ಲಿನ ಅರಣ್ಯ ನಿರ್ಮಾಣದಿಂದ ಭವಿಷ್ಯದಲ್ಲಿ ಅಕ್ಕಿ ಬೆಳೆ ಬೆಳೆಯುವುದರ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆಗಳಿಗೂ, ಜಿಲ್ಲೆಯನ್ನು ಹಸಿರಾಗಿಸಲು ಸಹ ಪೂರಕ ವಾತಾವರಣ ನಿರ್ಮಿಸಿದಂತಾಗುತ್ತದೆ.

ಭರದಿಂದ ಸಾಗಿದ ಗಿಡ ನೆಡುವ ಕಾರ್ಯ

ಸಚಿವರ ಟ್ವೀಟ್ ಪೋಸ್ಟ್‌ನಲ್ಲಿ ವಿಶಾಲವಾದ ನೀರಿಲ್ಲದ ಕೆರೆಯಲ್ಲಿ ಟ್ಯಾಂಕರ್‌ಗಳ ಸಹಾಯದಿಂದ ಸಾವಿರಾರು ಗಿಡಗಳನ್ನು ನೆಡುತ್ತಿರುವ ಕೆಲಸ ನಡೆಯುತ್ತಿದೆ. ಹತ್ತಾರು ಕಾರ್ಮಿಕ ಕೆರೆಯ ಜಾಗದಲ್ಲಿ ಮೊದಲ ಹಂತವೆಂಬಂತೆ 56 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ರಸ್ತೆ ಕಾಮಗಾರಿ, ನಗರೀಕರಣ ಹೆಸರಿನಲ್ಲಿ ಹಿಂದಿನಿಂದಲೇ ಸಾವಿರಾರು ಬೆಳೆದು ನಿಂತ ಮರಗಳನ್ನು ಕಡೆದು ಹಾಕಲಾಗಿದೆ. ಇಂತಹ ವಾತಾವರಣದ ಮಧ್ಯೆ ಸಚಿವರ ಈ ಗಿಡ ನೆಡುವ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+