ಕರ್ನಾಟಕದಲ್ಲಿ 2,000 ಕೋಟಿ ರೂಪಾಯಿ ವೆಚ್ಚದ 9 ಹೆದ್ದಾರಿ ಯೋಜನೆಗಳು..ಯಾವೆಲ್ಲಾ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನ?

National Highways: ದೇಶದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಆಗುತ್ತಿದೆ. ಹಾಗೆಯೇ ಇದೀಗ ಇಯತ್ತೀಚೆಗಷ್ಟೇ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಕದಲ್ಲಿ ಬಹುದೊಡ್ಡ ಮೊತ್ತದಲ್ಲಿ ನಿರ್ಮಾಣವಾಗುವ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಹಾಗಾದ್ರೆ ಇವುಗಳಿಂದ ಯಾವೆಲ್ಲಾ ಜಿಲ್ಲೆಗಳಿಗೆ ಎಷ್ಟು ಪ್ರಯೋಜನೆ ಆಗಲಿದೆ? ಹಾಗೂ ವೆಚ್ಚದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಆಗಿರುವ ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ಬಹುದೊಡ್ಡ ಮೊತ್ತದ ಹೆದ್ದಾರಿಗೆ ಯೋಜನೆಗಳಿಗೂ ಚಾಲನೆ ನೀಡಿದರು

2 000 Crore Worth s 9 Highway Projects in Karnataka Which Districts Will Benefits

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಹಾಗೂ ಕಳಸವಳ್ಳಿ ಗ್ರಾಮಗಳ ನಡುವೆ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ 2.44 ಕಿ.ಮೀ. ಉದ್ದದ ಕೇಬಲ್‌ ಸೇತುವೆಯನ್ನು ನಿತಿನ್‌ ಗಡ್ಕರಿ ಅವರು ಉದ್ಘಾನೆ ಮಾಡಿದ್ದರು. ಈ ಹೊಸ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರನ್ನಿಟ್ಟ ಅವರು, ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಮತ್ತು ಯೋಜಿಸಲಾಗಿರುವ ಹೆದ್ದಾರಿ ಯೋಜನೆಗಳ ಮಾಹಿತಿಯನ್ನು ಬಿಚ್ಚಿಟ್ಟರು.

ಅದದಲ್ಲೂ ಪ್ರಮುಖವಾಗಿ ಈ ವೇಳೆ ಅವರು 2,041 ಕೋಟಿ ರೂಪಾಯಿ ವೆಚ್ಚದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅವರು ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 88 ಕಿಲೋ ಮೀಟರ್ ವ್ಯಾಪ್ತಿಯ ಈ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ಮಾಡಲಾಯಿತು.

ಇನ್ನು ರಾಜ್ಯದಲ್ಲಿ ಇದೀಗ ಸುಮಾರು 9,000 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಗಳಿವೆ. 3 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದ್ದು, ಇವುಗಳನ್ನು ಕೇಂದ್ರ ಸರ್ಕಾರದ ಅಧಿಕಾರಾವಧಿಯ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಯಾವ್ಯಾವ ಹೆದ್ದಾರಿಗಳು ಯಾವಾಗ ಪೂರ್ಣ?

* ಹಾಸನ-ರಾಯಚೂರು ನಡುವಿನ 4 ಪಥದ ಹೆದ್ದಾರಿ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಇದು ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ.

* ಬೆಂಗಳೂರು-ಚೆನ್ನೈ ಹೆದ್ದಾರಿ ಈಗಾಗಲೇ ಉದ್ಘಾಟನೆಗೆ ಸಿದ್ಧವಾಗಿದೆಗಿದೆ. ಇದು ಕೆಲವೇ ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

* ಹುಬ್ಬಳ್ಳಿ-ಧಾರವಾಡ ನಡುವಿನ ಹೆದ್ದಾರಿ ಶೇಕಡಾ 70ರಷ್ಟು ಪೂರ್ಣಗೊಂಡಿದ್ದು, 2026ರ ಮಾರ್ಚ್ ವೇಳೆಗೆ ಪೂರ್ಣ ಆಗಲಿದೆ. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 15 ನಿಮಿಷಗಳಿಗೆ ಇಳಿಕೆ ಮಾಡಲಿದೆ.

* ಮೈಸೂರು-ಮಡಿಕೇರಿ ಮತ್ತು ಶಿರಾಡಿ ಘಾಟ್‌ನಲ್ಲಿ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ ಎನ್ನುವ ಮಾಹಿತಿಯನ್ನು ನಿತಿನ್‌ ಗಡ್ಕರಿ ಅವರು ತಿಳಿಸಿದರು.

* NH-367ರ 47 ಕಿಲೋ ಮೀಟರ್ ಉದ್ದದ ಬೀದರ್-ಹುಮ್ನಾಬಾದ್ ವಿಭಾಗದ ಅಗಲೀಕರಣ ಕಲಬುರಗಿ-ಬೀದರ್ ಜಿಲ್ಲೆಗಳ ನಡುವಿನ ಪ್ರಯಾಣದ ಸಮಯವನ್ನ ಗಣನೀಯವಾಗಿ ಕಡಿಮೆ ಮಾಡಲಿದೆ.

* NH-75ರ ಶಿರಾಡಿ ಘಾಟ್ ವಿಸ್ತರಣೆಯಲ್ಲಿ ಕೈಗೊಂಡ ಪುನರ್ ಅಭಿವೃದ್ಧಿ ಕಾರ್ಯಗಳು ಮಳೆಗಾಲದಲ್ಲಿ, ವಿಶೇಷವಾಗಿ ಮಂಗಳೂರು-ಬೆಂಗಳೂರು ಕಾರಿಡಾರ್‌ನಲ್ಲಿ ಸುರಕ್ಷಿತ ಮತ್ತು ಅಡೆತಡೆ ಇಲ್ಲದ ಸಂಚಾರಕ್ಕೆ ತುಂಬಾ ಸಹಾಯಕ ಆಗಲಿದೆ.

* ಶಹಾಬಾದ್‌ನಲ್ಲಿ ನಿರ್ಮಾಣ ಮಾಡಿರುವ ರಸ್ತೆ ಮೇಲ್ಸೇತುವೆ ಮತ್ತು NH-50ನಲ್ಲಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆಯು ಕಲಬುರಗಿ ಹಾಗೂ ರಾಯಚೂರು ನಡುವೆ ತಡೆರಹಿತ ಸಂಪರ್ಕವನ್ನು ಒದಗಿಸಲಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಏನೆಲ್ಲಾ ಸುಧಾರಣೆ?: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ರಸ್ತೆ ಸುರಕ್ಷತೆ ಸುಧಾರಣೆಗಳಿಂದ ಕರ್ನಾಟಕ-ಕೇರಳದ ನಡುವೆ ವೇಗವಾದ, ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲಕರ ಆಗಲಿದೆ. ಅಲ್ಲದೆ, ಪ್ರಯಾಣದ ಸಮಯ ಕಡಿಮೆ ಆಗಲಿದೆ ಮತ್ತು ಇಂಧನ ಕೂಡ ಉಳಿತಾಯ ಆದಂತಾಗಲಿದೆ.

ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸಿಗಂದೂರು ಸೇತುವೆಯನ್ನು ಇತ್ತೀಚೆಗಷ್ಟೆ ಉದ್ಘಾಟನೆ ಮಾಡಲಾಯಿತು. ಇದು ಮಲೆನಾಡು ಹಾಗೂ ಕರಾವಳಿ ಭಾಗಗಳ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ. ಅಲ್ಲದೆ, ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಂತಹ ಪ್ರಮುಖ ಯಾತ್ರಾ ಸ್ಥಳಗಳಿಗೆ ಸುಲಭ ಸಂಪರ್ಕ ಕಲ್ಪಿಸಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+