ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Voter Data Theft : ಚಿಲುಮೆ ಸಂಸ್ಥೆಗೆ ₹18 ಲಕ್ಷ ನೀಡಿದ ಬಿಜೆಪಿ ಮಾಜಿ ಶಾಸಕ ಎನ್.ಎಸ್ ನಂದೀಶ್ ರೆಡ್ಡಿ

|
Google Oneindia Kannada News

ಬೆಂಗಳೂರು, ನವೆಂಬರ್ 19: ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಚಿಲುಮೆ ಸಂಸ್ಥೆಯೂ ರಾಜಕೀಯ ನಾಯಕರ ಖಾಸಗಿ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯಾಗಿತ್ತಾ ಎಂಬ ಅನುಮಾನ ಮೂಡಿಸಿದೆ. ಅಲ್ಲದೇ ಚಿಲುಮೆ ಸಂಸ್ಥೆಯೂ ಮತದಾರರ ಮಾಹಿತಿಯನ್ನ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿತ್ತಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಈಗಾಗಲೇ ದೂರ ದಾಖಲಾಗಿರುವ ಚಿಲುಮೆ ಸಂಸ್ಥೆಗೆ ಹಾಗೂ ಅದರ ಅಂಗ ಸಂಸ್ಥೆಗೆ ಬಿಜೆಪಿ ಮಾಜಿ ಶಾಸಕ ಎನ್.ಎಸ್ ನಂದೀಶ್ ರೆಡ್ಡಿ ಅವರು ಮತದಾರರರ ಮಾಹಿತಿ ಸಂಗ್ರಹಿಸುವ ಸಲುವಾಗಿ ₹18 ಲಕ್ಷ ನೀಡಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

2018 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿರುವಾಗ ಮಾಹಿತಿ ನೀಡಿದ್ದಾರೆ.

18 lakh donation to Chilume organization from former BJP MLA Nandish Reddy

ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಎರಡು ಬಾರಿ ಚಿಲುಮೆ ಸಂಸ್ಥೆಗೆ ಹಣ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಅಫಿಡವಿಟ್ಟಿನಲ್ಲಿ 2 ಬಾರಿ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಚಿಲುಮೆ ಗ್ರೂಪ್ ಹಸರಿನಲ್ಲಿ 50,000 ರೂಪಾಯಿ ಮತ್ತು ಚಿಲುಮೆ ಟ್ರಸ್ಟ್ ಹೆಸರಿನಲ್ಲಿ 17,50,000 ರೂಪಾಯಿ ಸಂದಾಯ ಮಾಡಲಾಗಿದೆ. ಇನ್ನೂ 2018 ರ ಅಫಿಡವಿಟ್‌ನಲ್ಲಿ ಬಿಜೆಪಿ ನಾಯಕ ತಮ್ಮ ಪತ್ನಿಯ ಆಸ್ತಿ ಸೇರಿದಂತೆ ₹303 ಕೋಟಿ ಮೌಲ್ಯದ ಆಸ್ತಿಯನ್ನ ಘೋಷಿಸಿದ್ದರು.

ಆಯಾಯ ವಿಧಾನಸಭಾ ಕ್ಷೇತ್ರದ ಮತದಾರರ ದತ್ತಾಂಶ ಸಂಗ್ರಹಿಸಿ ರಾಜಕೀಯ ಮುಖಂಡರಿಗೆ ರವಾನೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅಧಿಕೃತವಾಗಿಯೇ ಕೆಲ ರಾಜಕೀಯ ಮುಖಂಡರಿಗೆ ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಮಾಹಿತಿ ತಿಳಿದು ಬಂದಿದೆ.

ಇನ್ನೂ 2018ರ ಚುನಾವಣೆಯಲ್ಲಿ ಕೆ.ಆರ್. ಪುರಂನಿಂದ ಸ್ಪರ್ಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೈರತಿ ಬಸವರಾಜ ವಿರುದ್ದ ಸೋತಿದ್ದರು. ಚಿಲುಮೆ ಸಂಸ್ಥೆಗೆ ತನ್ನ ಸ್ವ ಇಚ್ಚೆಯಿಂದ ಸಮೀಕ್ಷೆಗೆ ಹಣವನ್ನ ನೀಡಿದ್ದೇನೆ ಎಂದು ನಂದೀಶ್ ರೆಡ್ಡಿ 'ಡೆಕ್ಕನ್ ಹೆರಾಲ್ಡ್' ಗೆ ತಿಳಿಸಿದ್ದಾರೆ.

ವಿಧಾನಸಭಾ ಚುನಾವನೆಗೂ ಮುನ್ನ ಮತದಾರರ ಪರಿಶೀಲನಾ ಸಮೀಕ್ಷೆಗೆ ಚಾಲನೆ ನೀಡಿದ್ದೆ. ಕೆಆರ್ ಪುರಂ ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆರೋಪಗಳಿದ್ದವು, ನಾನು ದೂರು ಸಲ್ಲಿಸಿದ್ದೆ. ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೆ. ಆದರೆ, ದೂರು ದಾಖಲಿಸುವ ಮುನ್ನ ಸರ್ವೆ ಮಾಡಿಸಬೇಕೆಂದಿದ್ದೆ, ಹಾಗಾಗಿ ಸಮೀಕ್ಷೆಗೆ ಹಣ ನೀಡಿದ್ದೇನೆ ಎಂದಿದ್ದಾರೆ. ಅಲ್ಲದೇ ಚಿಲುಮೆ ಟ್ರಸ್ಟ್ ಅಥವಾ ಅದರ ಅಂಗ ಸಂಸ್ಥೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ನಂದೀಶ್ ರೆಡ್ಡಿ ಸ್ಪಷ್ಟಪಡಿಸಿದ್ದು, ನಾನು ಯಾವುದೇ ಸಂಸ್ಥೆಯಲ್ಲಿ ಹೂಡಿಕೆ ಅಥವಾ ಮಾಲೀಕತ್ವವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ, ಮತದಾರರ ಪಟ್ಟಿಗಳ ಪರಿಷ್ಕರಣೆ ಮತ್ತು ಮತದಾರರ ಕಾರ್ಡ್‌ಗಳನ್ನು ಆಧಾರ್ ನೊಂದಿಗೆ ಲೀಕ್ ಮಾಡುವಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಲು ಬಿಬಿಎಂಪಿ ಚಿಲುಮೆ ಟ್ರಸ್ಟ್ ಗೆ ಅವಕಾಶ ಮಾಡಿಕೊಟ್ಟಿತು. ಆದರೆ ಯಾವುದೇ ಲಾಭರಹಿತ ಸಂಸ್ಥೆಗೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಬಂಧ ಇರಬಾರದು ಎಂದು ಹೇಳಿತ್ತು, ಆದಾಗ್ಯೂ ಚಿಲುಮೆ ಟ್ರಸ್ಟ್‌ಗೆ ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಮತ್ತು ಚಿಲುಮೆ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಹೋದರಿ ಕಾಳಜಿಗಳಿವೆ. ಇವೆರಡು 1918 ಜನವರಿಯಲ್ಲಿ ಸಂಯೋಜಿಸಲಾಗಿದೆ. ಇದು ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್ ಅನ್ನು ನಿರ್ವಹಿಸುತ್ತದೆ.

ಅದು ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್ ಅನ್ನು ನಿರ್ವಹಿಸುತ್ತದೆ, ಇದು ರಾಜಕೀಯ ಪಕ್ಷಗಳು ಮತ್ತು ವೈಯಕ್ತಿಕ ಸಂಸದರು, ಶಾಸಕರು ಮತ್ತು ಇತರ ಚುನಾಯಿತ ಪ್ರತಿನಿಧಿಗಳಿಗೆ ಪೂರೈಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ಸಂಸ್ಥೆಯ ಕಾರ್ಯವ್ಯಾಪ್ತಿ ಏನಿದೆ ಎಂದು ನಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ 1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ನಮ್ಮದೇ ಆದ ತನಿಖೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಚಿಲುಮೆ ಸಂಸ್ಥೆಯ ಜತೆ ಬಿಜೆಪಿ ನಾಯಕರ ನೇರ ಸಂಪರ್ಕ ಜಗಜ್ಜಾಹೀರು

ಇನ್ನೂ ಚಿಲುಮೆ ಸಂಸ್ಥೆಗೆ 2019 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂಡಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇನ್ನೂ ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಅದೇ ಸಂಸ್ಥೆಯ ಉಚಿತ ಸೇವೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ..? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ.

English summary
Former BJP MLA NS Nandish Reddy gave 18 lakhs to Chilume organization for collecting voter information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X