ಕರ್ನಾಟಕ ಚುನಾವಣೆ; ಅಕ್ರಮ ತಡೆಗೆ ಗಡಿ ಜಿಲ್ಲೆಯಲ್ಲಿ ಕಠಿಣ ಕಣ್ಗಾವಲು

ಬೆಂಗಳೂರು, ಮಾರ್ಚ್ 29; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ದಿನಾಂಕ ಘೋಷಣೆ ಮಾಡಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕದಲ್ಲಿ ಕಾನೂನು & ಸುವ್ಯವಸ್ಥೆ ಸಮಸ್ಯೆ ಇಲ್ಲ. ಆದ್ದರಿಂದ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ರಾಜ್ಯದ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಗೆ ನಿರ್ದೇಶನಗಳನ್ನು ನೀಡಿದೆ.

171 Interstate Check Posts Set Up At Karnataka Says Election Commission

ಕೇಂದ್ರ ಚುನಾವಣಾ ಆಯೋಗ ಕರ್ನಾಟಕ 19 ಜಿಲ್ಲೆಗಳ ಜೊತೆ ಅಂತರರಾಜ್ಯ ಗಡಿಯನ್ನು ಹಂಚಿಕೊಂಡಿದೆ ಎಂದು ಹೇಳಿದೆ. 6 ಜಿಲ್ಲೆಗಳು ಎರಡು ರಾಜ್ಯಗಳೊಂದಿಗೆ, 13 ಜಿಲ್ಲೆಗಳು ಒಂದು ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. 19 ಜಿಲ್ಲೆಗಳ ವ್ಯಾಪ್ತಿಯಲ್ಲಿ 171 ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಇವು ಕಾರ್ಯ ನಿರ್ವಹಣೆ ಮಾಡಲಿವೆ.

171 Interstate Check Posts Set Up At Karnataka Says Election Commission

ಅಬಕಾರಿ ಇಲಾಖೆ 16 ಶಾಶ್ವತ ಚೆಕ್‌ಪೋಸ್ಟ್‌ಗಳನ್ನು ರಚನೆ ಮಾಡಿದೆ. 24*7 ಇವು ಕಾರ್ಯ ನಿರ್ವಹಣೆ ಮಾಡಲಿವೆ. ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ನಿಗದಿತ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ ಜಂಟಿಯಾಗಿ ಚುನಾವಣಾ ಕಾರ್ಯದಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲಿವೆ. ಒಟ್ಟು 2,400 ವಿಚಕ್ಷಣ ತಂಡವನ್ನು ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಸಂಚಾರಿ ತಂಡ ನಿಯೋಜಿಸಲಾಗಿದೆ.

ಕರ್ನಾಟಕದ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಈಗ ಚುನಾವಣೆ ಇಲ್ಲ. ಆದ್ದರಿಂದ ಅಲ್ಲಿನ ಪೊಲೀಸ್, ಅಬಕಾರಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಗಡಿಭಾಗದಲ್ಲಿ ಕರ್ನಾಟಕದ ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಗಡಿ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸಭೆ ನಡೆಸಿ ಅವರಿಗೆ ಸೂಚನೆಗಳನ್ನು ನೀಡುತ್ತಾರೆ.

ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸೂಕ್ಷ್ಮ ಕ್ಷೇತ್ರಗಳಲ್ಲಿ 81 ವೆಚ್ಚ ವೀಕ್ಷಕರು, 146 ಉಸ್ತುವಾರಿಗಳು, 237 ಸಹಾಯಕ ವೀಕ್ಷಕರು, 2016 ಸಂಚಾರಿ ತಂಡಗಳನ್ನು ಚುನಾವಣಾ ಆಯೋಗ ನಿಯೋಜನೆ ಮಾಡಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು, ಅಂತರ ಜಿಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಿ ಚುನಾವಣಾ ಅಕ್ರಮದ ಮೇಲೆ ಕಣ್ಗಾವಲು ಇಡಲಾಗಿದೆ.

ಇದುವರೆಗೂ ನಡೆದ ಕಾರ್ಯಾಚರಣೆಯಲ್ಲಿ 34 ಲಕ್ಷ ಮೌಲ್ಯದ 319 ಲೀಟರ್ ಗೋವಾ ಮದ್ಯ, 33 ಲಕ್ಷ ರೂ. ಮೌಲ್ಯದ 450 ಲೀಟರ್ ಬಿಯರ್, 47 ಲಕ್ಷ ಮೌಲ್ಯದ 9108 ಬಿಯರ್, ಚಾಮರಾಜನಗರದಲ್ಲಿ 8.2 ಲಕ್ಷ ರೂ. ಮೌಲ್ಯದ ಮದ್ಯ, ರಾಯಚೂರಿನಲ್ಲಿ 10 ಲಕ್ಷ ಮೌಲ್ಯದ ದೇಶಿಯ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕುಣಿಗಲ್‌ ಚೆಕ್‌ಪೋಸ್ಟ್‌ನಲ್ಲಿ 3000 ಕುಕ್ಕರ್, ಬೆಳಗಾವಿಯಲ್ಲಿ 3.25 ಲಕ್ಷ ರೂ. ಮೌಲ್ಯದ ಹಾಟ್‌ ಬಾಕ್ಸ್‌, ಕಲಬುರಗಿಯಲ್ಲಿ 6 ಲಕ್ಷ ಮೌಲ್ಯದ 1000 ಸೀರೆಗಳು, ಚಿಕ್ಕಬಳ್ಳಾಪುರದಲ್ಲಿ 26.8 ಲಕ್ಷ ರೂ. ಮೌಲ್ಯದ 6700 ಸೀರೆಗಳನ್ನು ಅಂತರ ರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ದಾವಣಗೆರೆಯಲ್ಲಿ 16.7 ಲಕ್ಷ ಮೌಲ್ಯದ 567 ಕಿಚನ್ ಸೆಟ್, ಹಾಸನದಲ್ಲಿ 58 ಲಕ್ಷ ಮೌಲ್ಯದ 2310 ಗಿಫ್ಟ್‌ ಬಾಕ್ಸ್, ಯುಗಾದಿಗಾಗಿ ತಯಾರು ಮಾಡಿದ್ದ 10 ಲಕ್ಷ ಮೌಲ್ಯದ ಫುಡ್‌ಕಿಟ್ ಮತ್ತು ಗದಗದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಹಣವನ್ನು ಸಹ ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+