15,000 ರೂ. ಸ್ಟೈಪೆಂಡ್‌ನಿಂದ 25 ಲಕ್ಷ ಪ್ಯಾಕೇಜ್‌ವರೆಗೆ: ಕೇವಲ ಎರಡೂವರೆ ವರ್ಷದಲ್ಲಿ ಸಾಧಿಸಿದ ಟೆಕ್ಕಿ ಯಶೋಗಾಥೆ ವೈರಲ್
ಮಾಹಿತಿ ತಂತ್ರಜ್ಞಾನ ಅಂದರೆ ಐಟಿ ಕ್ಷೇತ್ರದಲ್ಲಿ ನಮ್ಮಲ್ಲಿರುವ ಸ್ಕಿಲ್ಸ್ ಮತ್ತು ಡೆಡಿಕೇಶನ್ ತುಂಬ ಮುಖ್ಯ. ಇವೆರಡು ನಮ್ಮಲ್ಲಿ ಆಳವಾಗಿ ಬೇರೂರಿದ್ದರೆ ಎಷ್ಟು ಬೇಗ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಈ ಯುವ ಟೆಕ್ಕಿಯ ಕಥೆಯೇ ಒಂದು ಒಳ್ಳೇಯ ಉದಾಹರಣೆ. ಕೇವಲ ಎರಡೂವರೆ ವರ್ಷಗಳ ಅವಧಿಯಲ್ಲಿ ಮಾಸಿಕ 15,000 ರೂಪಾಯಿ ಇಂಟರ್ನ್‌ಶಿಪ್ ಸ್ಟೈಪೆಂಡ್‌ನಿಂದ ವಾರ್ಷಿಕ 25 ಲಕ್ಷ ರೂಪಾಯಿ ಪ್ಯಾಕೇಜ್ ಪಡೆದ ಟೆಕ್ಕಿಯೊಬ್ಬನ ಯಶೋಗಾಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿದೆ.
ಮಾಸಿಕ 15,000 ರೂ. ಇಂಟರ್ನ್‌ಶಿಪ್‌ನಿಂದ 25 ಲಕ್ಷದ ಪ್ಯಾಕೇಜ್‌ವರೆಗೆ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಋತುಜಾ ಎಂಬುವವರು ತಮ್ಮ ಕಾಲೇಜು ಗೆಳೆಯನ ಈ ಸ್ಫೂರ್ತಿದಾಯಕ ವೃತ್ತಿಜೀವನದ ಕಥೆಯನ್ನಾ ಹಂಚಿಕೊಂಡಿದ್ದಾರೆ. ಋತುಜಾ ಅವರ ಪ್ರಕಾರ, ಈ ಟೆಕ್ಕಿ ತಿಂಗಳಿಗೆ ಕೇವಲ 15,000 ರೂಪಾಯಿ ಸ್ಟೈಪೆಂಡ್ ಪಡೆಯುವ ಇಂಟರ್ನ್ ಆಗಿ ತನ್ನ ವೃತ್ತಿಜೀವನವನ್ನ ಪ್ರಾರಂಭಿಸುತ್ತಾನೆ.

ಆದರೆ ಆತನ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನ ಗುರುತಿಸಿದ ಕಂಪನಿ ಕೇವಲ ಆರು ತಿಂಗಳಲ್ಲಿ ಆತನಿಗೆ ವರ್ಷಕ್ಕೆ 7 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ ಫುಲ್ ಟೈಮ್ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿತು.
ಇದಾದ ಕೆಲವೇ ದಿನಗಳಲ್ಲಿ ಆತನ ಕಾರ್ಯಕ್ಷಮತೆ ಗಮನಿಸಿದ ಕಂಪನಿ ವಾರ್ಷಿಕ ವೇತನವನ್ನ 9 ಲಕ್ಷ ರೂಪಾಯಿಗೆ ಏರಿಸಿತು. ನಂತರದ ದಿನಗಳಲ್ಲಿ ಆತನಿಗೆ ಮತ್ತೊಂದು ಕಂಪನಿಯಿಂದ ವರ್ಷಕ್ಕೆ 14 ಲಕ್ಷ ರೂಪಾಯಿಯ ಉದ್ಯೋಗಾವಕಾಶ ಹುಡುಕಿ ಬಂದಿತು. ಆದರೆ, ಈಗ ಕೆಲಸ ಮಾಡುತ್ತಿರುವ ಸಂಸ್ಥೆಯು ಆತನನ್ನು ಉಳಿಸಿಕೊಳ್ಳಲು ಅದೇ 14 ಲಕ್ಷ ರೂಪಾಯಿಯ ಪ್ಯಾಕೇಜ್ ನೀಡಿ ಆತನನ್ನ ಇಲ್ಲೇ ಉಳಿಸಿಕೊಂಡಿತು. ಇದೀಗ ಆತ ತನ್ನ ಸ್ಕಿಲ್ಸ್ ಮತ್ತು ಅನುಭವದ ಆಧಾರದ ಮೇಲೆ ಸಿಂಗಾಪುರ ಮೂಲದ ಒಂದು ಕಂಪನಿಯಿಂದ ವರ್ಷಕ್ಕೆ ಬರೋಬ್ಬರಿ 25 ಲಕ್ಷ ರೂಪಾಯಿ ಪ್ಯಾಕೇಜ್ ಪಡೆದುಕೊಂಡುಕೊಳ್ಳುತ್ತಿದ್ದಾರೆ.
ಸಹಪಾಠಿಯ ವೈರಲ್ ಪೋಸ್ಟ್
ತನ್ನ ಸ್ನೇಹಿತನ ಈ ಹಂತ ಹಂತದ ಬೆಳವಣಿಗೆಯನ್ನ ಹಂಚಿಕೊಂಡ ಋತುಜಾ, "ನನಗೆ ಆತನ ಬಗ್ಗೆ ನಿಜಕ್ಕೂ ಸಂತೋಷವಾಗುತ್ತಿದೆ. ಕಾಲೇಜು ದಿನಗಳಿಂದಲೂ ಆತನಲ್ಲಿದ್ದ ನಿಷ್ಠೆ ಮತ್ತು ಪರಿಶ್ರಮವನ್ನು ನಾನು ನೋಡಿದ್ದೇನೆ, ಆತ ಈ ಯಶಸ್ಸಿಗೆ ಸಂಪೂರ್ಣ ಅರ್ಹನಾಗಿದ್ದಾನೆ. ಅದೇ ಸಮಯದಲ್ಲಿ ನನಗೆ, ನಾನೂ ಕೂಡ ಕೋಡಿಂಗ್ ಮುಂದುವರಿಸಿದ್ದರೆ ಇಷ್ಟೊತ್ತಿಗೆ ಅಲ್ಲಿರುತ್ತಿದ್ದೆನಾ? ಎಂಬ ಆಲೋಚನೆ ಬಂತು. ಯಾರನ್ನೂ ಯಾರೊಂದಿಗೂ ಹೋಲಿಸಿಕೊಳ್ಳಬಾರದು, ಪ್ರತಿಯೊಬ್ಬರ ಹಾದಿಯೂ ವಿಭಿನ್ನವಾಗಿರುತ್ತದೆ ಎಂಬುದು ಗೊತ್ತಿದ್ದರೂ, ಸಹಪಾಠಿಗಳ ಬೆಳವಣಿಗೆ ಕಂಡಾಗ ನಮ್ಮ ಸ್ವಂತ ಹಾದಿಯ ಬಗ್ಗೆ ಯೋಚನೆ ಬರುವುದು ಸಹಜ" ಎಂದು ಬರೆದುಕೊಂಡಿದ್ದಾರೆ.
one of my classmate got a ₹25 LPA offer from a Singapore-based company.
— RUTU (@rutu609) August 5, 2026
He started with a ₹15k/month internship.
After 6 months he got full-time at ₹7 LPA.
After 1 year it became ₹9 LPA.
Then another company offered him ₹14 LPA, and his current company matched it to…
ನೆಟ್ಟಿಗರ ಪ್ರತಿಕ್ರಿಯೆ
ಋತುಜಾ ಅವರ ಈ ಪೋಸ್ಟ್ ಯುವ ಉದ್ಯೋಗಿಗಳಲ್ಲಿ ತೀವ್ರ ಚರ್ಚೆಯನ್ನ ಹುಟ್ಟುಹಾಕಿದೆ. ಸರಿಯಾದ ಸಮಯದಲ್ಲಿ ಕೌಶಲ್ಯ ಹೆಚ್ಚಿಸಿಕೊಂಡು ಉದ್ಯೋಗ ಬದಲಾಯಿಸುವುದರಿಂದ ಬೇಗನೆ ಸ್ಯಾಲರಿ ಏರಿಕೆಯಾಗುತ್ತದೆ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, "ಸ್ನೇಹಿತನ ಯಶಸ್ಸಿಗೆ ಸಂತಸಪಡುತ್ತಲೇ ನಿಮ್ಮ ಸ್ವಂತ ಆಲೋಚನೆಯನ್ನ ಪ್ರಾಮಾಣಿಕವಾಗಿ ಹಂಚಿಕೊಂಡಿರುವುದು ಮೆಚ್ಚುವಂತಹದ್ದು" ಎಂದಿದ್ದಾರೆ.
ಮತ್ತೊಬ್ಬರು, "ಸರಿಯಾದ ಸಮಯದಲ್ಲಿ ಕಂಪನಿ ಬದಲಾಯಿಸುವುದು ವೇತನವನ್ನು ಹೆಚ್ಚಿಸುತ್ತದೆ ನಿಜ, ಆದರೆ ಕೇವಲ ಹಣಕ್ಕಾಗಿ ಪದೇ ಪದೇ ಕಂಪನಿ ಬದಲಾಯಿಸುವುದರಿಂದ ಹೊಸ ವಾತಾವರಣ, ಒತ್ತಡ ಎದುರಾಗಿ ಸ್ಥಿರತೆ ಕಡಿಮೆಯಾಗಬಹುದು. ಕೇವಲ ಹಣಕ್ಕಷ್ಟೇ ಅಲ್ಲದೆ, ವೃತ್ತಿಪರ ಬೆಳವಣಿಗೆಗೆ ಒತ್ತು ನೀಡಿ ಜಾಬ್ ಸ್ವಿಚ್ ಮಾಡುವುದು ಸೂಕ್ತ" ಎಂದು ಸಲಹೆ ನೀಡಿದ್ದಾರೆ.


Click it and Unblock the Notifications
