ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ; ಜಿ. ಟಿ. ದೇವೇಗೌಡ ಔಟ್!

ಬೆಂಗಳೂರು, ನವೆಂಬರ್ 18 : ಕರ್ನಾಟಕ ಜೆಡಿಎಸ್ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಸ್ಟಾರ್ ಪ್ರಚಾರಕರಲ್ಲಿ ದೇವೇಗೌಡರ ಕುಟುಂಬದ 9 ಸದಸ್ಯರಿದ್ದಾರೆ.

ಸೋಮವಾರ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ಜಿ. ಟಿ. ದೇವೇಗೌಡರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಹುಣಸೂರು, ಕೆ. ಆರ್. ಪೇಟೆಯಲ್ಲಿ ಚುನಾವಣೆ ನಡೆಯುತ್ತಿದ್ದರೂ ಜಿ. ಟಿ. ದೇವೇಗೌಡರು ಸ್ಟಾರ್ ಪ್ರಚಾರಕರಲ್ಲ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

15 Seat By Elections JDS Star Campaigners List

ಮಾಜಿ ಸಚಿವ ಎಚ್. ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕಿ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಸಹ ಸ್ಟಾರ್ ಪ್ರಚಾರಕರಾಗಿದ್ದಾರೆ. ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ.

15 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿಗೆ, ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಪಕ್ಷ ಬೆಂಬಲ ಘೋಷಣೆ ಮಾಡಿದೆ. ಕಾಗವಾಡ ಮತ್ತು ಅಥಣಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಸ್ಟಾರ್ ಪ್ರಚಾರಕರ ಪಟ್ಟಿ : ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ, ಎಚ್. ಕೆ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಸಾ. ರಾ. ಮಹೇಶ್, ಪ್ರಜ್ವಲ್ ರೇವಣ್ಣ, ಸಿ. ಎಸ್. ಪುಟ್ಟರಾಜು, ಡಿ. ಸಿ. ತಮ್ಮಣ್ಣ, ಕುಪೇಂದ್ರ ರೆಡ್ಡಿ, ಕೋನ ರೆಡ್ಡಿ.

ಅನಿತಾ ಕುಮಾರಸ್ವಾಮಿ, ಕೃಷ್ಣ ರೆಡ್ಡಿ, ಅನ್ನದಾನಿ, ಬಿ. ಎಂ. ಫಾರೂಕ್, ಕಾಂತರಾಜು, ಟಿ. ಎ.ಶರವಣ, ಮರಿತಿಬ್ಬೇಗೌಡ, ಬಿ. ಬಿ. ನಿಂಗಯ್ಯ, ವೈ. ಎಸ್‌. ವಿ. ದತ್ತಾ, ರಮೇಶ್ ಬಾಬು, ಜಫ್ರುಲ್ಲಾ ಖಾನ್, ಭವಾನಿ ರೇವಣ್ಣ, ಕೆ. ಎಂ. ತಿಮ್ಮರಾಯಪ್ಪ.

ಎಚ್. ಸಿ. ನೀರಾವರಿ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಎಂ. ಟಿ. ಕೃಷ್ಣಪ್ಪ, ಕೆ. ವಿ. ಅಮರನಾಥ್, ಪಿ. ಆರ್. ಸುಧಾಕರ ಲಾಲ್, ಸಯ್ಯದ್ ಸಫಿವುಲ್ಲಾ ಸಾಹೇಬ್, ಆರ್. ಪ್ರಕಾಶ್, ಆನಂದ್ ಅಸ್ನೋಟಿಕರ್, ಬಸವರಾಜ ಹೊರಟ್ಟಿ, ಚೌಡರೆಡ್ಡಿ ತೂಪಲ್ಲಿ, ಲೀಲಾದೇವಿ ಆರ್. ಪ್ರಸಾದ್, ರೂತ್ ಮನೋರಮಾ, ವಿಲ್ಸನ್ ರೆಡ್ಡಿ, ಕೆ. ಎ. ಆನಂದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+