ಹಾಸನ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ
ಹಾಸನ, ಫೆ.26: ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಮನೆ ಮಾಡಿದೆ. 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಫೆ.28, ಮಾರ್ಚ್ 1 ರಂದು ಹಾಸನಾಂಬ ಕಲಾಕ್ಷೇತ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ.
ಈ ನುಡಿ ಹಬ್ಬಕ್ಕೆ ಸಮ್ಮೇಳನಾಧ್ಯಕ್ಷರಾಗಿ ಡಾ. ನಲ್ಲೂರು ಪ್ರಸಾದ್ ಉಪಸ್ಥಿತರಿರುತ್ತಾರೆ. ಸಾಹಿತ್ಯಾಸಕ್ತರನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಚ್ ಎಲ್ ಜನಾರ್ಧನ್ ಅವರು ಸ್ವಾಗತಿಸಲಿದ್ದಾರೆ.
ಸಾಹಿತಿಗಳಾದ ಎಸ್ ಕೆ ಕರೀಂಖಾನ್, ಕೆ. ಸಣ್ಣೇಗೌಡ, ಎಚ್ ಬಿ ಜ್ವಾಲನಯ್ಯ ಅವರ ಹೆಸರಿನಲ್ಲಿ ಮಹಾ ಮಂಟಪ, ಮಹಾ ವೇದಿಕೆ, ಮಹಾ ದ್ವಾರಗಳನ್ನು ನಿರ್ಮಿಸಿ ಗೌರವ ಸಲ್ಲಿಸಲಾಗಿದೆ. ಶುಕ್ರವಾರದಂದು ಹೊತ್ತಾರೆ 8.30ಕ್ಕೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರು ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನಷ್ಟು ಮಾಹಿತಿ ಮುಂದೆ ಓದಿ...

ಹಾಸನ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನ
ಹಾಸನ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಗಾಟನೆ, ಧ್ವಜಾರೋಹಣ, ಪುಸ್ತಕ ಮಳಿಗೆಗಳ ಉದ್ಗಾಟನೆ ಜತೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆಳಗ್ಗೆ 9.30 ರಿಂದ 10.30

ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಕೋರುವವರು
ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ವಿಭಾಗದಿಂದ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ,ಹಾಸನ ಜಿಲ್ಲಾ ಅಧ್ಯಕ್ಷ ಎಚ್ ಎಲ್ ಜನಾರ್ಧನ್ ಜತೆಗೆ
# ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ
* ಹಾಸನ: ಕೆ,ಆರ್ ಮಮತೇಶ್
* ಅರಕಲಗೂಡು: ಸಿ.ಕೆ ಶೈಲಶ್ರೀ
* ಹೊಳೆನರಸೀಪುರ: ಪುಟ್ಟಸೋಮಪ್ಪ
* ಚನ್ನರಾಯಪಟ್ಟಣ: ಎಚ್.ಎನ್ ಲೋಕೇಶ್
* ಅರಸೀಕೆರೆ: ಮೇಲೇಗೌಡ
* ಆಲೂರು: ಪಿ. ಗುಲಾಂ ಸತ್ತಾರ್
* ಬೇಲೂರು: ಬಿ.ಎನ್ ಆನಂದ್ ಕುಮಾರ್
* ಸಕಲೇಶಪುರ: ಎಸ್ ಎನ್ ಮಂಜುನಾಥ್
ಇವರೊಂದಿಗೆ ಸ್ವಾಗತ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಬಾಗಡೆ ಅವರು ಸಾರ್ವಜನಿಕರಿಗೆ ಸ್ವಾಗತ ಕೋರುತ್ತಿದ್ದಾರೆ.

ಹಾಸನ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ಆಹ್ವಾನ
ಹಾಸನ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ, ಧ್ವಜಾರೋಹಣ, ಪುಸ್ತಕ ಮಳಿಗೆಗಳ ಉದ್ಘಾಟನೆ ಜತೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆಳಗ್ಗೆ 9.30 ರಿಂದ 10.30

ಫೆ.28ರ ಶುಕ್ರವಾರದ ಕಾರ್ಯಕ್ರಮದ ವಿವರ
* ದಿವ್ಯ ಸಾನಿಧ್ಯ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,
* ಉಪಸ್ಥಿತಿ: ಎಚ್. ಡಿ ದೇವೇಗೌಡ,
* ಸಮ್ಮೇಳನಾಧ್ಯಕ್ಷ: ಡಾ. ನಲ್ಲೂರು ಪ್ರಸಾದ್
* ಎಚ್ ಎಲ್ ಮಲ್ಲೇಶ್ ಗೌಡ ಗೌರವ ಸಂಪಾದಕತ್ವ ಹಾಗೂ ಆರಕಲಗೂಡು ಜಯಕುಮಾರ್ ಸಂಪಾದಕತ್ವದ 'ಹೊಯ್ಸಳ ಸಿರಿ ' ವಿಶೇಷ ಸಂಚಿಕೆ ಬಿಡುಗಡೆ
* ಸ್ಥಳ : ಹಾಸನಾಂಬ ಕಲಾಕ್ಷೇತ್ರ, ಹಾಸನ

ಸಮ್ಮೆಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ
ಮಾ.1 ರಂದು ಮಧ್ಯಾಹ್ನ 2 ರಿಂದ 3 ಗಂಟೆ
ಗೋಷ್ಠಿ 5 ಕಾರ್ಯಕ್ರಮಕ್ಕೆ ಡಾ. ಮಳಲಿಗೌಡ, ಹಾಸನ ಇವರಿಂದ ಚಾಲನೆ
ಗೋಷ್ಠಿ 6 ಕವಿ ಗೋಷ್ಠಿ
ಮಾ.1 ರಂದು ಮಧ್ಯಾಹ್ನ 1 ರಿಂದ 4.30
ಅಧ್ಯಕ್ಷತೆ : ಸುಬ್ಬು ಹೊಲೆಯಾರ್, ಕವಿ
ಆಶಯ ನುಡಿ: ಕಾಂತರಾಜಪುರ ಸುರೇಶ್
ನಂತರ ಅಜಿತ್ ಅರಕಲಗೂಡು ತಂಡದವರಿಂದ ಭಾವಗೀತೆ, ಕನ್ನಡ ಚಿತ್ರ ಗೀತೆ ಗಾಯನ

ಫೆ.28 ರ ಗೋಷ್ಠಿ ಭಾಷೆ, ಸಾಹಿತ್ಯ, ತಂತ್ರಜ್ಞಾನ
* ಅಧ್ಯಕ್ಷತೆ ಪ್ರೊ. ಚಿದಾನಂದ ಗೌಡ, ವಿಶ್ರಾಂತ ಕುಲಪತಿ, ಮೈಸೂರು
* ಕನ್ನಡ ಮತ್ತು ಜಾಗತೀಕರಣ: ಚಂದ್ರಕಾಂತ ಪಡೆಸೂರು, ಸಾಹಿತಿ, ಹಾಸನ
* ಸಾಹಿತ್ಯದಲ್ಲಿ ಭಾಷೆ ಸವಾಲು: ಶ್ರೀಮತಿ ಚ. ಸರ್ವಮಂಗಳ, ನಿವೃತ್ತ ಪ್ರಾಧ್ಯಾಪಕರು, ಮೈಸೂರು
* ತಂತ್ರಜ್ಞಾನದ ಅನಿವಾರ್ಯತೆ : ಎಸ್.ಕೆ ಶಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ
* ನಂತರ ಕುವೆಂಪು ತಂತ್ರಾಂಶ ಅಭಿವೃದ್ಧಿಗಾರರಾದ ಹಾಸನದ ಮಾರುತಿ ಸಂಸ್ಥೆ ಸದಸ್ಯರಿಗೆ ಸನ್ಮಾನ
ಗೋಷ್ಠಿ 2 ಜಿಲ್ಲಾ ಸಾಹಿತ್ಯ ಸಂಸ್ಕೃತಿ ಪರಿಸರ
ಅಧ್ಯಕ್ಷತೆ: ಆರ್ ಪಿ ವೆಂಕಟೇಶ ಮೂರ್ತಿ, ಸಂಪಾದಕ, ಜನತಾ ಮಾಧ್ಯಮ, ಹಾಸನ

ಹಾಸನ ಜಿಲ್ಲಾ ಮಹಿಳಾ ಗೋಷ್ಠಿ, ಮಾಧ್ಯಮ ಗೋಷ್ಠಿ
ಮಾ. 1ರಂದು ಮಹಿಳಾ ಗೋಷ್ಠಿ
ಅಧ್ಯಕ್ಷತೆ ಪಿ. ಚಂದ್ರಿಕಾ,

ಸಮಾರೋಪ ಸಮಾರಂಭದ ವಿವರಗಳು
ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದ ಜತೆಗೆ ನಗೆಹಬ್ಬ ರಿಚರ್ಡ್ ಲೂಯಿಸ್ ಮತ್ತು ತಂಡದವರಿಂದ












Click it and Unblock the Notifications