ಕರ್ನಾಟಕ; 1336 ಹೊಸ ಕೋವಿಡ್ ಪ್ರಕರಣ ಪತ್ತೆ

ಬೆಂಗಳೂರು, ನವೆಂಬರ್ 17 : ಕರ್ನಾಟಕದಲ್ಲಿ 1,336 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 2,100 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಂಗಳವಾರದ ಹೊಸ ಕೋವಿಡ್ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. 1,336 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,27,241ಕ್ಕೆ ಏರಿಕೆಯಾಗಿದೆ.

1336 New COVID Cases In Karnataka On November 17

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ದರ 95.72% ರಷ್ಟಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ನವೆಂಬರ್ 17ರಂದು ಯಾವುದೇ ಕೋವಿಡ್ ರೋಗಿ ಮರಣ ಹೊಂದಿಲ್ಲ. ಮರಣ ಪ್ರಮಾಣ 1.39% ರಷ್ಟಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಇದುವರೆಗೂ 8,27,241 ಜನರು ಗುಣಮುಖರಾಗಿದ್ದಾರೆ. 11,557 ಜನರು ಮೃತಪಟ್ಟಿದ್ದಾರೆ. ಮಂಗಳವಾರ ಮೃತಪಟ್ಟವರ ಸಂಖ್ಯೆ 16.

ರಾಜ್ಯದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 25,323. 693 ಜನರು ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ರಾಜ್ಯದಲ್ಲಿ 75,384 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ.

ಯಾವ ಜಿಲ್ಲೆ ಎಷ್ಟು ಪ್ರಕರಣ? ; ಬೆಂಗಳೂರು ನಗರದಲ್ಲಿ ಮಂಗಳವಾರ 729 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,58,606ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,707.

ಮಂಗಳವಾರ ಬೆಂಗಳೂರು ಗ್ರಾಮಾಂತರದಲ್ಲಿ 40, ದಕ್ಷಿಣ ಕನ್ನಡ 30, ದಾವಣಗೆರೆ 24, ಹಾಸನ 30, ಮಂಡ್ಯ 38, ಮೈಸೂರು 52, ತುಮಕೂರು 89, ಉತ್ತರ ಕನ್ನಡ 32 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+