ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 23,056ಕ್ಕೆ ಇಳಿಕೆ
ಬೆಂಗಳೂರು, ಡಿಸೆಂಬರ್ 9: ರಾಜ್ಯದಲ್ಲಿ ಬುಧವಾರ 1279 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಕರ್ನಾಟಕದಲ್ಲಿ ಇದುವರೆಗೂ ವರದಿಯಾದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 8,96,563ಕ್ಕೆ ಏರಿಕೆಯಾಗಿದೆ.
20 ಮಂದಿ ಇಂದು ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಒಟ್ಟು ಸಾವಿನ ಪ್ರಮಾಣ 11,900ಕ್ಕೇರಿದೆ. ಇಂದು 3218 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಒಟ್ಟು ಬಿಡುಗಡೆಯಾದವರ ಸಂಖ್ಯೆ 8,61,588ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 23,056ಕ್ಕೆ ಇಳಿಕೆಯಾಗಿದೆ. ಇಂದು ಕೋವಿಡ್ ಕಾರಣಕ್ಕೆ ಅಲ್ಲದೆ 19 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದು ರಾಜ್ಯದಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ 15286 ಮಂದಿಯನ್ನು ಮತ್ತು ಆರ್‌ಟಿ ಪಿಸಿಆರ್ ಹಾಗೂ ಇತರೆ ಮಾದರಿಗಳ ಮೂಲಕ 85772 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 1,19,79,471 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ.

ಬೆಂಗಳೂರು ನಗರದಲ್ಲಿ 728 ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಸಂಖ್ಯೆ 3,75,891ಕ್ಕೆ ಏರಿಕೆಯಾಗಿದ್ದು, 3,54,004 ಮಂದಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 17,676ಕ್ಕೆ ಇಳಿಕೆಯಾಗಿವೆ.
ಉಳಿದ ಜಿಲ್ಲೆಗಳಲ್ಲಿ ಸೋಂಕಿತರು:
ಮೈಸೂರು 71, ಚಿತ್ರದುರ್ಗ 41, ದಕ್ಷಿಣ ಕನ್ನಡ 34, ಶಿವಮೊಗ್ಗ 33, ತುಮಕೂರು 33, ಮಂಡ್ಯ 40, ದಕ್ಷಿಣ ಕನ್ನಡ 34, ಹಾಸನ 31, ಚಿಕ್ಕಬಳ್ಳಾಪುರ 34, ಬೆಂಗಳೂರು ಗ್ರಾಮಾಂತರ 24 ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆ 9, ಬೀದರ್ 2, ದಾವಣಗೆರೆ 6, ಗದಗ 3, ಕೊಡಗು 8, ಕೊಪ್ಪಳ 9, ರಾಯಚೂರು 9, ರಾಮನಗರ 8 ಮತ್ತು ಯಾದಗಿರಿ 9- ಎರಡಂಕಿಗಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.












Click it and Unblock the Notifications