Breaking News: ಕರ್ನಾಟಕದಲ್ಲಿ 2405 ಮಂದಿಗೆ ಕೊರೊನಾ ವೈರಸ್!
ಬೆಂಗಳೂರು, ಮೇ.27: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಹಾಸ್ಫೋಟ ಸಂಭವಿಸಿದೆ. ರಾಜ್ಯದಲ್ಲಿ ಬುಧವಾರ ಬೆಳಗ್ಗಿನ ಬುಲೆಟಿನ್ ಒಂದರಲ್ಲೇ 122 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 2405ಕ್ಕೆ ಏರಿಕೆಯಾಗಿದೆ.
ರಾಜ್ಯದ ಪಾಲಿಗೆ ಮಹಾರಾಷ್ಟ್ರದ ಜೊತೆಗಿನ ನಂಟು ಮತ್ತೊಮ್ಮೆ ಮುಳ್ಳಾಗಿದೆ. ಕಳೆದ 24 ಗಂಟೆಗಳಲ್ಲೇ ಪತ್ತೆಯಾಗಿರುವ 122 ಕೊರೊನಾ ವೈರಸ್ ಸೋಂಕಿತರ ಪೈಕಿ 110 ಮಂದಿ ಮಹಾರಾಷ್ಟ್ರದ ನಂಟು ಹೊಂದಿರುವುದು ದೃಢಪಟ್ಟಿದೆ.
ಯಾದಗಿರಿ ಜಿಲ್ಲೆಯ 69 ವರ್ಷದ ವೃದ್ಧೆ ಹಾಗೂ 2301ನೇ ಕೊರೊನಾ ವೈರಸ್ ಸೋಂಕಿತೆಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ರಾಜ್ಯದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಕಲಬುರಗಿಯಲ್ಲಿ ಬುಧವಾರ ಕೊರೊನಾ ವೈರಸ್ ಸೋಂಕು ಸ್ಫೋಟಗೊಂಡಿದೆ. ಕಲಬುರಗಿ -28, ಯಾದಗಿರಿ - 16, ದಕ್ಷಿಣ ಕನ್ನಡ - 11, ಉಡುಪಿ -9, ಹಾಸನ - 14, ಬೆಂಗಳೂರು - 6, ಉತ್ತರ ಕನ್ನಡ - 4, ರಾಯಚೂರು - 5, ಬೆಳಗಾವಿ - 4, ಚಿಕ್ಕಗಮಳೂರು - 3, ಬೀದರ್ - 13, ಬಳ್ಳಾರಿ - 1, ಮಂಡ್ಯ - 1 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications