Breaking; ಕರ್ನಾಟಕದಲ್ಲಿ 12 ಹೊಸ ಓಮಿಕ್ರಾನ್ ಪ್ರಕರಣ ಪತ್ತೆ
ಬೆಂಗಳೂರು, ಡಿಸೆಂಬರ್ 23; ಕರ್ನಾಟಕದಲ್ಲಿ 12 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಗುರುವಾರ ಕರ್ನಾಟಕದಲ್ಲಿ 12 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು.
ಭಾರತದಲ್ಲಿನ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 33 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ದಾಖಲಾಗಿರುವ ರಾಜ್ಯ ಮಹಾರಾಷ್ಟ್ರ (65), ದೆಹಲಿ (64), ಮೂರನೇ ಸ್ಥಾನದಲ್ಲಿ ತಮಿಳುನಾಡು (34), ಕರ್ನಾಟಕ (33) ತೆಲಂಗಾಣ (24).

ಕರ್ನಾಟಕದ ಹೊಸ ಪ್ರಕರಣಗಳ ವಿವರ
* 20 ವರ್ಷದ ಯುವತಿ, ಬೆಂಗಳೂರು
* 56 ವರ್ಷದ ಪುರುಷ, ಬೆಂಗಳೂರು
* 54 ವರ್ಷದ ಮಹಿಳೆ, ಬೆಂಗಳೂರು
* 27 ವರ್ಷದ ಪುರುಷ, ಮಂಗಳೂರು (ಘನಾದಿಂದ ಮರಳಿದವರು)
* 31 ವರ್ಷದ ಪುರುಷ, ಬೆಂಗಳೂರು (ಯುಕೆಯಿಂದ ವಾಪಸ್)
* 42 ವರ್ಷದ ಪುರುಷ, ಬೆಂಗಳೂರು (ಯುಕೆಯಿಂದ ವಾಪಸ್)
* 18 ವರ್ಷದ ಯುವತಿ, ಬೆಂಗಳೂರು (ಯುಕೆಯಿಂದ ವಾಪಸ್)
* 21 ವರ್ಷದ ಪುರುಷ, ಬೆಂಗಳೂರು (ಯುಕೆಯಿಂದ ವಾಪಸ್)
* 49 ವರ್ಷದ ಮಹಿಳೆ, ಬೆಂಗಳೂರು (ಡೆನ್ಮಾರ್ಕ್‌ದಿಂದ ವಾಪಸ್)
* 11 ವರ್ಷದ ಮಗು, ಬೆಂಗಳೂರು (ಯುಕೆಯಿಂದ ವಾಪಸ್)
* 59 ವರ್ಷದ ಮಹಿಳೆ ಬೆಂಗಳೂರು (ನೈಜೀರಿಯಾದಿಂದ ವಾಪಸ್)
* 9 ವರ್ಷದ ಮಗು, ಮೈಸೂರು (ಸ್ವಿಡ್ಜರ್‌ಲ್ಯಾಂಡ್‌ನಿಂದ ವಾಪಸ್)












Click it and Unblock the Notifications