Breaking: ಜ.6ರಂದು ಶತಕ ದಾಟಿದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ
ಬೆಂಗಳೂರು, ಜನವರಿ 7: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಜೊತೆಗೆ ಓಮಿಕ್ರಾನ್ ರೂಪಾಂತರ ಸೋಂಕು ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
107 new Omicron cases have been confirmed in Karnataka on Jan 6th taking the overall tally to 333.@BSBommai@mansukhmandviya#COVID19 #Omicron #OmicronInIndia #Karnataka #Bangalore
— Dr Sudhakar K (@mla_sudhakar) January 7, 2022
ಜನವರಿ 6ರಂದು ಕರ್ನಾಟಕದಲ್ಲಿ 107 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಓಮಿಕ್ರಾನ್ ಪ್ರಕರಣ ಸಂಖ್ಯೆ 333ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ 3,007 ಓಮಿಕ್ರಾನ್ ಸೋಂಕು
ಇನ್ನು ದೇಶದ 27 ರಾಜ್ಯಗಳಲ್ಲಿ ಸುಮಾರು 3,007 ಓಮಿಕ್ರಾನ್ ಸೋಂಕು ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 1,199 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ 876, ದೆಹಲಿಯಲ್ಲಿ 465, ಕರ್ನಾಟಕದಲ್ಲಿ 333 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ಐದನೇ ಸ್ಥಾನದಲ್ಲಿತ್ತು, ಅದಕ್ಕೂ ಮುನ್ನ ಎಂಟನೇ ಸ್ಥಾನದಲ್ಲಿತ್ತು. ಪ್ರತಿ ನಿತ್ಯ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇದೇ ವೇಳೆ ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇದೀಗ 1,17,100 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಳೆದ 24 ಗಂಟೆಯಲ್ಲಿ 1,17,100 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ ಶೇ.7.74 ಇದೆ. ಕಳೆದ 24 ಗಂಟೆಯಲ್ಲಿ 302 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4,83,178ಕ್ಕೇರಿದೆ.
ಸುಮಾರು 30,836 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೂ ಒಟ್ಟು 3,43,71,845 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ 3,71,363 ಸಕ್ರಿಯ ಪ್ರಕರಣಗಳಿದ್ದು, 149.66 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.












Click it and Unblock the Notifications