ನರೇಂದ್ರ ಮೋದಿ ಭಾಷಣ, ಸಿಎಂ ಸಿದ್ದುಗೆ ನಿದ್ದೆಯೇ ಭೂಷಣ!

Subscribe to Oneindia Kannada

ಮೈಸೂರು, ಜನವರಿ, 03: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 'ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ 'ನ 103 ನೇ ಸಮಾವೇಶದಲ್ಲಿ ಒಂದೆಡೆ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ ಇನ್ನೊಂದೆಡೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿಎಂ ಸಿದ್ದರಾಮಯ್ಯ ಗಢದ್ದಾಗಿ ನಿದ್ದೆ ಮಾಡುತ್ತಿದ್ದರು!

ಸಿದ್ದರಾಮಯ್ಯ ನಿದ್ದೆ ಹೊಸ ಸುದ್ದಿಯೇನಲ್ಲ. ಆದರೆ ರಾಜ್ಯಕ್ಕೆ ಹೆಮ್ಮೆ ತರುವಂತಹ ಕಾರ್ಯಕ್ರಮದ ವೇಳೆ ಮತ್ತೊಮ್ಮೆ ನಿದ್ದೆಗೆ ಶರಣಾದ ಸಿದ್ದು ಟೀಕೆಗೆ ಗುರಿಯಾಗುತ್ತಿದ್ದಾರೆ. ವೇದಿಕೆಯಲ್ಲಿ ಗಣ್ಯಾತಿ ಗಣ್ಯರು, ವಿಜ್ಞಾನಿಗಳು ಉಪಸ್ಥಿತರಿದ್ದರೂ ಸಿದ್ದರಾಮಯ್ಯ ಮಾತ್ರ ತೂಕಡಿಸುತ್ತಲೇ ಇದ್ದರು.[ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]

103rd Indian Science Congress: CM Siddaramaiah sleeps well!

ಪ್ರಧಾನಿಗೂ ಮುನ್ನ ಭಾಷಣ ಮಾಡಿದ ಸಿದ್ದರಾಮಯ್ಯ ಹೊಸ ಅಂಶಗಳನ್ನೇನು ಹೇಳಲಿಲ್ಲ. ಮೈಸೂರು ನನ್ನ ತವರು, ಮೈಸೂರು ವಿಶ್ವವಿದ್ಯಾಲಯದಲ್ಲೇ ನಾನು ಓದಿದ್ದು, ಕಲಿತಿದ್ದು ಎಂದು ತಮ್ಮ ಹಳೆ ದಿನಗಳನ್ನು ನೆನಪು ಹಾಕಿ ಮೀಸಲಿರಿಸಿದ್ದ ಸ್ಥಾನಕ್ಕೆ ಹೋಗಿ ಕುಳಿತುಕೊಂಡು ನಿದ್ರಾ ದೇವಿಯ ಮೊರೆ ಹೋದರು. [ಮೈಸೂರಲ್ಲಿ ಮೊಳಗಿದ ಮೋದಿಯ ವಿಜ್ಞಾನ-ತಂತ್ರಜ್ಞಾನ ಮಂತ್ರ]

ಪ್ರಧಾನಿ ಮೋದಿ ಭಾಷಣ ಮಾಡುತ್ತ, ನಾವೆಲ್ಲ ಜಾಗೃತರಾಗಬೇಕು, ವಿಜ್ಞಾನ ತಂತ್ರಜ್ಞಾನದ ನೆರವು ಪಡೆದು ದೇಶದ ಅಭಿವೃದ್ಧಿ ಸಾಧಿಸಬೇಕು ಎಂದು ಹೊಸ ಹೊಸ ಅಂಶಗಳನ್ನು ಹೇಳುತ್ತಿದ್ದರೆ ಸಿದ್ದರಾಮಯ್ಯ ನಿದ್ರಾಲೋಕದಲ್ಲಿ ವಿಹರಿಸುತ್ತಿದ್ದರು!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Chief Minister Siddaramaiah found sleeping while the Prime Minister Narendra Modi was delivering a speech at Mysuru University. The PM was addressing the gathering assembled to witness 103rd edition of Indian Science Congress. As PM was speaking at the venue, Siddaramaiah was seen sleeping on his chair.
Please Wait while comments are loading...